ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆ; ರೆಮ್ಡೆಸಿವಿರ್ ಅಕ್ರಮ ಮಾರಾಟ, ಇಬ್ಬರ ಬಂಧನ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಏಪ್ರಿಲ್ 22; ದಾವಣಗೆರೆ ಜಿಲ್ಲಾ ಆಸ್ಪತ್ರೆ ಹಿಂಭಾಗದಲ್ಲೇ ಅಕ್ರಮವಾಗಿ ರೆಮ್ಡೆಸಿವಿರ್ ಲಸಿಕೆ ಮಾರಾಟ ಮಾಡುತ್ತಿದ್ದ ಜಿಲ್ಲಾಸ್ಪತ್ರೆಯ ಫಾರ್ಮಾಸಿಸ್ಟ್ ಸೇರಿ ಇಬ್ಬರನ್ನು ಬಡಾವಣೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜಿಲ್ಲಾಸ್ಪತ್ರೆ ಹಿಂಭಾಗದಲ್ಲೇ ಆಟೋದಲ್ಲಿಟ್ಟುಕೊಂಡು ರೆಮ್ಡೆಸಿವಿರ್ ಔಷಧಿಗಳನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಲಾಗಿದೆ. ಅಲ್ಲದೇ, ಬಂಧಿತರಿಂದ 9 ರೆಮ್ಡೆಸಿವಿರ್ ಲಸಿಕೆ ಬಾಟಲ್ ಹಾಗೂ 10 ಸಾವಿರ ರೂ. ನಗದು ಹಾಗೂ ಆಟೋವನ್ನು ವಶಕ್ಕೆ ಪಡೆಯಲಾಗಿದೆ.

ದಾವಣಗೆರೆ; ತರಗತಿ ನಡೆಸುವ ದೂರು, ಕಾಲೇಜುಗಳಿಗೆ ಆಯುಕ್ತರ ಎಚ್ಚರಿಕೆ ದಾವಣಗೆರೆ; ತರಗತಿ ನಡೆಸುವ ದೂರು, ಕಾಲೇಜುಗಳಿಗೆ ಆಯುಕ್ತರ ಎಚ್ಚರಿಕೆ

ಬಂಧಿತ ಆರೋಪಿಗಳನ್ನು ಫಾರ್ಮಾಸಿಸ್ಟ್ ಮಂಜುನಾಥ, ಆಟೋ ಚಾಲಕ ಗಣೇಶಪ್ಪ ಎಂದು ಗುರುತಿಸಲಾಗಿದೆ. ದುಡ್ಡಿನ ಆಸೆಗೆ ಮಂಜುನಾಥ, ಗಣೇಶಪ್ಪಗೆ ಅಕ್ರಮವಾಗಿ ಲಸಿಕೆ ಮಾರಾಟ ಮಾಡಲು ಹೇಳಿದ್ದು, ಬಂದ ಹಣದಲ್ಲಿ ಇಬ್ಬರು ಹಂಚಿಕೊಳ್ಳುವ ಯೋಜನೆ ಮಾಡಿದ್ದರು.

ಮೈಸೂರು; ನಕಲಿ ರೆಮ್ಡೆಸಿವಿರ್ ಔಷಧ ಮಾರಾಟ ಜಾಲ ಪತ್ತೆ ಮೈಸೂರು; ನಕಲಿ ರೆಮ್ಡೆಸಿವಿರ್ ಔಷಧ ಮಾರಾಟ ಜಾಲ ಪತ್ತೆ

Police Arrest 2 For Selling Remdesivir Injections

ದಾವಣಗೆರೆ ಜಿಲ್ಲಾಸ್ಪತ್ರೆಗೆ ಬಂದಿದ್ದ ಲಸಿಕೆಯಲ್ಲಿ 9 ಬಾಟಲ್ ಲಸಿಕೆಯನ್ನ ಕದ್ದು ಮಂಜುನಾಥ ಗಣೇಶಪ್ಪಗೆ ನೀಡಿ ಮಾರಾಟ ಮಾಡಲು ಹೇಳಿದ್ದ ಎನ್ನಲಾಗಿದೆ. ಅಲ್ಲದೇ, ಜಿಲ್ಲಾಸ್ಪತ್ರೆ ಹಿಂಭಾಗದಲ್ಲೇ ರಾಜಾರೋಷವಾಗಿ ಲಸಿಕೆ ಮಾರಾಟ ಮಾಡುತ್ತಿದ್ದ.

ಹರ್ಯಾಣ ಆಸ್ಪತ್ರೆಯಿಂದ 1710 ಡೋಸ್ ಕೊರೊನಾ ಲಸಿಕೆ ಕಳವು ಹರ್ಯಾಣ ಆಸ್ಪತ್ರೆಯಿಂದ 1710 ಡೋಸ್ ಕೊರೊನಾ ಲಸಿಕೆ ಕಳವು

Recommended Video

' ರಾಜ್ಯದಲ್ಲಿ ನೈಟ್‌ ಕರ್ಫ್ಯೂ ಯಶಸ್ವಿ, ಕೊರೊನಾ ರೂಲ್ಸ್ ಬ್ರೇಕ್ ಮಾಡೋ ಆಸ್ಪತ್ರೆಗಳ ವಿರುದ್ದ ಕೇಸ್' ಸಚಿವ ಬೊಮ್ಮಾಯಿ ಮಾಹಿತಿ | Oneindia

ಈ ಬಗ್ಗೆ ಔಷಧ ಪರಿವೀಕ್ಷಕಿ ಗೀತಾಗೆ ಖಚಿತ ಮಾಹಿತಿ ಬಂದಿತ್ತು. ಮಾಹಿತಿ ಹಿನ್ನಲೆಯಲ್ಲಿ ಪರಿವೀಕ್ಷಕಿ ಬಡಾವಣೆ ಠಾಣೆ ಪೊಲೀಸರೊಂದಿಗೆ ದಾಳಿ ನಡೆಸಿದ್ದು, ಈ ವೇಳೆ 9 ಬಾಟಲ್ ರೆಮ್ಡೆಸಿವಿರ್ ಲಸಿಕೆ ಹಾಗೂ 10 ಸಾವಿರ ರೂ. ನಗದು ವಶಕ್ಕೆ ಪಡೆಯಲಾಗಿದೆ. ತನಿಖೆ ಮುಂದುವರೆದಿದೆ.

English summary
Davanagere police arrested 2 people for selling Remdesivir injections. Police seized 9 bottel of injections and 10 thousand money.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X