ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶುಗರ್ ಮಾತ್ರೆಯಲ್ಲಿ ಪ್ಲಾಸ್ಟಿಕ್ ಪತ್ತೆ: ತರಾಟೆಗೆ ತೆಗೆದುಕೊಂಡ ದಾವಣಗೆರೆ ಜನರು

By ದಾವಣಗೆರೆ ಪ್ರತಿನಿಧಿ
|
Google Oneindia Kannada News

Recommended Video

ವಿವಾದ ಸೃಷ್ಟಿಸಿದ ಮೋದಿ -ಶಿವಾಜಿ ಹೊಸ ಪುಸ್ತಕ | MODI | SHIVAJI | ONEINDIA KANNADA

ದಾವಣಗೆರೆ, ಜನವರಿ 13: ದಾವಣಗೆರೆಯ ವಿದ್ಯಾನಗರದ ಬಸ್ ನಿಲ್ದಾಣ ಬಳಿಯ ಮೆಡ್ ಪ್ಲಸ್ ಸ್ಟೋರ್ ನ ಶುಗರ್ ಮಾತ್ರೆಯಲ್ಲಿ ಪ್ಲಾಸ್ಟಿಕ್ ಪತ್ತೆಯಾಗಿರುವುದು ಕೇಳಿಬಂದಿದ್ದು, ಗ್ರಾಹಕರು ಮೆಡ್ ಪ್ಲಸ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ವಿದ್ಯಾನಗರ ನಿವಾಸಿ ಜ್ಯೋತಿಗೌಡ ಎನ್ನುವವರು ಸಕ್ಕರೆ ಕಾಯಿಲೆಗೆ ಸಂಬಂಧಿಸಿದ ಮೆಟ್ಪಾರ್ಮಿನ್ ಎಚ್.ಸಿ.ಐ ಮಾತ್ರೆಗಳನ್ನು ತೆಗೆದುಕೊಂಡಿದ್ದರು. ಮನೆಗೆ ಹೋಗಿ ಒಂದು ಮಾತ್ರೆಯನ್ನು ನೀರಿನಲ್ಲಿ ಹಾಕಿದ ತಕ್ಷಣ ಅದು ರಬ್ಬರ್ ನಂತಾಗಿದೆ, ಇದು ಜ್ಯೋತಿಗೌಡ ಅವರು ಗಾಬರಿಗೊಂಡಿದ್ದರು.

ಆಟೋದಲ್ಲೇ ಲಕ್ಷಾಂತರ ರೂಪಾಯಿ ಕಳೆದುಕೊಂಡ ವೃದ್ಧ ದಂಪತಿಆಟೋದಲ್ಲೇ ಲಕ್ಷಾಂತರ ರೂಪಾಯಿ ಕಳೆದುಕೊಂಡ ವೃದ್ಧ ದಂಪತಿ

ತಕ್ಷಣ ಮೆಡ್ ಪ್ಲಸ್ ಸ್ಟೋರ್ ಬಳಿ ಬಂದ ಗ್ರಾಹಕರು ಸಿಬ್ಬಂದಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗದುಕೊಂಡಿದ್ದಾರೆ. ನಕಲಿ ಮಾತ್ರೆಗಳನ್ನು ಮಾರಾಟ ಮಾಡುತ್ತಿದ್ದೀರಾ? ರೋಗಿಗಳ ಜೀವದ ಜೊತೆ ಆಟವಾಡುತ್ತಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.

Plastic Detection In Sugar Tablet

ಮೆಡ್ ಪ್ಲಸ್ ನಲ್ಲಿ ಡಿಸ್ಕೌಂಟ್ ಸಿಗುತ್ತೆ ಎನ್ನುವ ಉದ್ದೇಶದಿಂದ ಸಾಮಾನ್ಯ ಜನರು ಮುಗಿಬಿದ್ದು ಕೊಂಡುಕೊಳ್ಳುತ್ತಾರೆ. ಅದರಲ್ಲೂ ಬಡವರ ಸಂಖ್ಯೆ ಹೆಚ್ಚಿರುತ್ತೆ. ಈ ರೀತಿ ಪ್ಲಾಸ್ಟಿಕ್ ಮಿಶ್ರಿತ ಮಾತ್ರೆಗಳನ್ನು ಮಾರಾಟ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.

ಬಾಲ್ಯದ ಕಷ್ಟದ ದಿನಗಳನ್ನು ನೆನೆದ ದಾವಣಗೆರೆ ಜಿಲ್ಲಾಧಿಕಾರಿಬಾಲ್ಯದ ಕಷ್ಟದ ದಿನಗಳನ್ನು ನೆನೆದ ದಾವಣಗೆರೆ ಜಿಲ್ಲಾಧಿಕಾರಿ

ಮೆಡಿ ಪ್ಲಸ್ ನ ಸಿಬ್ಬಂದಿಗಳು ಮಾತ್ರ ಗ್ರಾಹಕರನ್ನು ಸಮಾಧಾನ ಪಡಿಸುತ್ತಿದ್ದು, ಈ‌ ಮಾತ್ರೆ ಹೀಗೆಯೇ ಇರುತ್ತದೆ ಎನ್ನುತ್ತಿದ್ದಂತೆ ಆಕ್ರೋಶಗೊಂಡ ವೃದ್ದ ರೋಗಿಗಳು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಗಲಾಟೆ ಜೋರಾಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ವಿದ್ಯಾನಗರ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.

Plastic Detection In Sugar Tablet

ಮಾತ್ರೆಗಳ ಬಗ್ಗೆ ದೂರು‌ ಬಂದಿದ್ದು ಇವುಗಳನ್ನು ಮಾರಾಟ ಮಾಡುವುದನ್ನೇ ನಿಲ್ಲಿಸಿದ್ದೇವೆ ಹಾಗೂ ಇವುಗಳನ್ನು ಪರೀಕ್ಷೆ ಮಾಡಲು ಲ್ಯಾಬ್ ಗೆ ಕಳಿಸುತ್ತೇವೆ ಎಂದಿದ್ದು, ಗ್ರಾಹಕರಿಗೆ ನೀಡಿದ ಮಾತ್ರೆಗಳು ನಕಲಿ‌ ಎಂದು ಪರೋಕ್ಷವಾಗಿಯೇ ಮೆಡ್ ಪ್ಲಸ್ ಸಿಬ್ಬಂದಿ ಒಪ್ಪಿಕೊಂಡಿದ್ದಾರೆ. ಹಣಕ್ಕಾಗಿ ಜನರ ಆರೋಗ್ಯದ ಜೊತೆ ಆಟವಾಡುತ್ತಿರುವರಿಗೆ ಕಠಿಣ ಶಿಕ್ಷೆ ನೀಡಬೇಕು. ಜೊತೆಗೆ ಈ ಮೆಡ್ ಪ್ಲಸ್ ‌ಮೇಲೆ ಬಂದಿರುವ ಆರೋಪವನ್ನು ತನಿಖೆ‌ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಹಕರು ಒತ್ತಾಯಿಸಿದ್ದಾರೆ.

English summary
Plastic detection in Sugar tablet, this happened in Davanagere Med Plus Store.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X