ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ; ನಮಗೆ ಹಣ ಬೇಡ, ಮಕ್ಕಳಿಗೆ ಅನ್ನ ಕೊಡಿ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಮೇ 09; ವಿಜಯಪುರದಿಂದ ದಾವಣಗೆರೆಗೆ ವ್ಯಾಪಾರಕ್ಕೆ ಬಂದು ಟೆಂಟ್ ಹಾಕಿಕೊಂಡು ಜೀವನ ನಡೆಸುತ್ತಿದ್ದ 150 ಮಂದಿ ಲಾಕ್ ಡೌನ್ ಪರಿಣಾಮ ಊಟವಿಲ್ಲದೇ ನಿತ್ಯವೂ ನರಕಯಾತನೆ ಪಡುತ್ತಿದ್ದಾರೆ.

ದಾವಣಗೆರೆ ಜಿಲ್ಲಾಧಿಕಾರಿ ಕಚೇರಿ ಸಮೀಪದ ಸವಣೂರು ಪ್ಲಾಜಾದ ಕರೂರಿಗೆ ಹೋಗುವ ರಸ್ತೆಯಲ್ಲಿ ಟೆಂಟ್ ಹಾಕಿ ಜೀವನ ಸಾಗಿಸುತ್ತಿದ್ದಾರೆ. ಆದರೆ ಕಳೆದೊಂದು ತಿಂಗಳಿನಿಂದ ವ್ಯಾಪಾರ ಇಲ್ಲದೇ, ಹಣವೂ ಇಲ್ಲದೇ ಪರದಾಡುತ್ತಿದ್ದಾರೆ.

ಈ ಕಾರ್ಮಿಕರು ಬಳೆ, ಸರ ಸೇರಿದಂತೆ ಸಣ್ಣಪುಟ್ಟ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದರು. ಕೊರೊನಾ ಹೆಮ್ಮಾರಿ ಆರ್ಭಟದಿಂದಾಗಿ ಇವರ ಬದುಕೇ ಮೂರಾಬಟ್ಟೆಯಾಗಿದೆ. ಈ ಬಗ್ಗೆ ವಿಜಯಪುರದ ರಾಮು ಎಂಬುವವರು ವಿಡಿಯೋದಲ್ಲಿ ಮಾಡಿರುವ ಮನವಿ ಕಣ್ಣಲ್ಲಿ ನೀರು ತರಿಸುವಂತಿದೆ.

ಕೋವಿಡ್ ಹರಡುವಿಕೆ; ದಾವಣಗೆರೆ ಸೇಫ್ ಝೋನ್‌ನಲ್ಲಿದೆ ಕೋವಿಡ್ ಹರಡುವಿಕೆ; ದಾವಣಗೆರೆ ಸೇಫ್ ಝೋನ್‌ನಲ್ಲಿದೆ

People Who Living In Tent Begging For Food

"ಸಣ್ಣ ಸಣ್ಣ ಮಕ್ಕಳಿದ್ದಾರೆ. ಒಂದೊತ್ತಿನ ಕೂಳಿಗೂ ಪರದಾಡ್ತಿದ್ದೇವೆ ಸಾಹೇಬ್ರೆ. ದುಡ್ಡು ಬೇಡ ಏನೂ ಬೇಡ. ನಮಗೆ ಊಟ ಕೊಡಿ ಸಾಕು. ಊಟ ಸಿಗದೇ ಸಾಯುವ ಪರಿಸ್ಥಿತಿ ಬಂದೊದಗಿದೆ. ಇನ್ಮುಂದೆ ಮಣ್ಣು ತಿನ್ನುವ ಪರಿಸ್ಥಿತಿ ಎದುರಾಗಿದೆ. ದಯವಿಟ್ಟು ಸಹಾಯ ಮಾಡ್ರಿ ನಿಮ್ಗೆ ಪುಣ್ಯ ಬರುತ್ತೆ. ಕಳೆದ ವರ್ಷದ ಲಾಕ್ ಡೌನ್ ವೇಳೆ ಆಗಿನ ತಹಶೀಲ್ದಾರ್, ಡಿಸಿ ಸಹಾಯ ಮಾಡಾವ್ರೆ" ಎಂದು ರಾಮು ಹೇಳಿದ್ದಾರೆ.

ದಾವಣಗೆರೆ: ಕೋವಿಡ್ ತಡೆಗೆ ಪಿಯುಸಿ ವಿದ್ಯಾರ್ಥಿ ಸಮಾಜಮುಖಿ ಕಾರ್ಯ ದಾವಣಗೆರೆ: ಕೋವಿಡ್ ತಡೆಗೆ ಪಿಯುಸಿ ವಿದ್ಯಾರ್ಥಿ ಸಮಾಜಮುಖಿ ಕಾರ್ಯ

"ಈ ಬಾರಿ ತಿಂಗಳಾಯ್ತು. ಊಟ ಇಲ್ಲ, ನೀರು ಇಲ್ಲ. ಸಣ್ಣ ಸಣ್ಣ ಮಕ್ಕಳಿದ್ದಾರೆ. ವ್ಯಾಪಾರವೂ ಇಲ್ಲ, ದುಡ್ಡು ಇಲ್ಲ. ಹೊರಗಡೆ ಹೋದರೆ ಪೊಲೀಸರು ಹೊಡೆಯುತ್ತಾರೆ. ಅಂಗಡಿಗಳು ಬಾಗಿಲು ಹಾಕಿವೆ" ಎಂದರು.

Recommended Video

Covid 19 ಪರಿಸ್ಥಿತಿಯಲ್ಲು Tax ಬರೇ ಎಳಿತಿರೋ Nirmala Sitharaman | Oneindia Kannada

"ಜಿಪ್, ಬಳೆ, ಸರ ಸೇರಿದಂತೆ ಸಣ್ಣಪುಟ್ಟ ವ್ಯಾಪಾರ ಮಾಡ್ತಿದ್ದೇವೆ. ಜನರು ಖರೀದಿ ಮಾಡ್ತಿಲ್ಲ. ಸಣ್ಣ ಸಣ್ಣ ಮಕ್ಕಳು ಉಪವಾಸ ಸಾಯುವಂಥ ಸ್ಥಿತಿ ನಿರ್ಮಾಣ ಆಗಿದೆ. ದುಡ್ಡು ಏನೂ ಬೇಡ. ಊಟ ಕೊಡಿ ಸಾಕು" ಎಂದು ರಾಮು ಮನವಿ ಮಾಡಿದ್ದಾರೆ.

English summary
People who come to Davanagere living in tent in trouble after announcement of lockdown. They begging for food.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X