ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೋನಾ ವೇಳೆ ಜನರ ಸಂಕಷ್ಟ ಕಂಡು ವಿದೇಶಾಂಗ ಇಲಾಖೆ ಆಯ್ಕೆ ಮಾಡಿಕೊಂಡೆ: ರಾಜ್ಯದ ಐಎಎಸ್ ಟಾಪರ್ ಹೇಳಿಕೆ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಜೂ. 2: "ಕೊರೋನಾ ಸಂಕಷ್ಟದ ವೇಳೆಯಲ್ಲಿ ಜನರು ಅನುಭವಿಸಿದ ನೋವು ನನ್ನಲ್ಲಿ ಏನನ್ನಾದರೂ ಮಾಡಬೇಕೆಂಬ ಛಲ ಹುಟ್ಟಿತು ಎಂದು ಯುಪಿಎಸ್ ಸಿ ಪರೀಕ್ಷೆಯಲ್ಲಿ 31ನೇ ರ‍್ಯಾಂಕ್ ಹಾಗೂ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಅವಿನಾಶ್ ತಿಳಿಸಿದರು.

ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಲ್ಲಿ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದೇಶಗಳಿಂದ 15 ಲಕ್ಷ ಜನರನ್ನು ಭಾರತಕ್ಕೆ ಕರೆತರಲಾಯಿತು. ಉಕ್ರೇನ್ - ರಷ್ಯಾ ನಡುವಿನ ಯುದ್ಧದ ವೇಳೆಯೂ ಭಾರತೀಯರನ್ನು ಮರಳಿ ಬರುವಂತೆ ಮಾಡಲಾಯಿತು‌. ಇದರಲ್ಲಿ ವಿದೇಶದಲ್ಲಿರುವ ಭಾರತೀಯ ರಾಯಭಾರಿಗಳ ಪಾತ್ರ ಹೆಚ್ಚು. ನಾನು ಸಹ ವಿದೇಶಾಂಗ ಇಲಾಖೆಯಲ್ಲಿ ಸೇರಿ ಸೇವೆ ಮಾಡಬೇಕೆಂಬ ಆಸೆಯಿಂದ ಆಯ್ಕೆ ಮಾಡಿಕೊಂಡಿದ್ದೇನೆ. ದಿನಕ್ಕೆ ಕೇವಲ ಆರು ಗಂಟೆಯಾದರೂ ಓದಬೇಕು. ಬೇರೆ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ವಿದ್ಯಾರ್ಥಿ ದಿಸೆಯಿಂದಲೇ ಓದುವ ಹವ್ಯಾಸ ಬೆಳೆಸಿಕೊಂಡಿದ್ದರೆ ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ''.

ಯುಪಿಎಸ್‌ಸಿ ಫಲಿತಾಂಶ: ದಾವಣಗೆರೆಯ ಅವಿನಾಶ್ ದೇಶಕ್ಕೆ 31ನೇ ರ್‍ಯಾಂಕ್ಯುಪಿಎಸ್‌ಸಿ ಫಲಿತಾಂಶ: ದಾವಣಗೆರೆಯ ಅವಿನಾಶ್ ದೇಶಕ್ಕೆ 31ನೇ ರ್‍ಯಾಂಕ್

 'ಪೋಷಕರ ಒತ್ತಡಕ್ಕೆ ಮಣಿದು ಯುಪಿಎಸ್‌ಸಿ ಬರೆಯದಿರಿ'

'ಪೋಷಕರ ಒತ್ತಡಕ್ಕೆ ಮಣಿದು ಯುಪಿಎಸ್‌ಸಿ ಬರೆಯದಿರಿ'

ಇದು ಯುಪಿಎಸ್ ಸಿ ಪರೀಕ್ಷೆಯಲ್ಲಿ 31ನೇ ರ‍್ಯಾಂಕ್ ಹಾಗೂ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಅವಿನಾಶ್ ಹೇಳಿದ ಮಾತು. ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಲ್ಲಿ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೋಷಕರ ಒತ್ತಡಕ್ಕೆ ಮಣಿದು ಯಾರೂ ಯುಪಿಎಸ್ ಸಿ ಬರೆಯಬಾರದು. ಅವರೇ ಸ್ವ ಇಚ್ಛೆಯಿಂದ ಓದಬೇಕು‌. ನಮಗೆ ಆಸಕ್ತಿ ಇರುವ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಯುಪಿಎಸ್ ಸಿ ಪರೀಕ್ಷೆಯನ್ನು ಲಕ್ಷಾಂತರ ಮಂದಿ ಬರೆಯುತ್ತಾರೆ. ಇದರಲ್ಲಿ ಉತ್ತೀರ್ಣರಾಗೋದು ಕಡಿಮೆ. ರಾಜ್ಯದಲ್ಲಿ ನೂರು ರ‍್ಯಾಂಕ್ ಒಳಗೆ ಇಬ್ಬರು ಮಾತ್ರ ಬಂದಿದ್ದಾರೆ. ಇದು ಬೇಸರದ ಸಂಗತಿ‌. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕಡಿಮೆ ಇದೆ. ಇಲ್ಲಿನವರು ಹೆಚ್ಚಾಗಿ ಪರೀಕ್ಷೆ ಬರೆಯುವಂತಾಗಬೇಕು ಎಂದು ಹೇಳಿದರು.

ಯಶೋಗಾಥೆ: ಶ್ರದ್ಧಾ ಐಎಎಸ್ ಕನಸು ನನಸಾಗಿದ್ದು ಹೀಗೆ!ಯಶೋಗಾಥೆ: ಶ್ರದ್ಧಾ ಐಎಎಸ್ ಕನಸು ನನಸಾಗಿದ್ದು ಹೀಗೆ!

 ಆದಿತ್ಯಾ ಬಿರ್ಲಾ 10 ಲಕ್ಷ ರೂ ಸಹಾಯಧನ

ಆದಿತ್ಯಾ ಬಿರ್ಲಾ 10 ಲಕ್ಷ ರೂ ಸಹಾಯಧನ

ನಾನು ಪ್ರೌಢಶಾಲೆಯಿಂದಲೇ ಸ್ಕಾಲರ್ ಶಿಪ್ ಪಡೆದುಕೊಳ್ಳುತ್ತಿದ್ದೆ. ಆದಿತ್ಯಾ ಬಿರ್ಲಾ ಅವರಿಂದ ಹತ್ತು ಲಕ್ಷ ರೂಪಾಯಿ ವಿದ್ಯಾರ್ಥಿ ಸಹಾಯಧನ ಸಿಕ್ಕಿತ್ತು. ಮನೆಯವರ ಸಹಕಾರವೂ ಇತ್ತು. ಪುಸ್ತಕ ಓದೋದು, ಟಿವಿ ನೋಡೋದು, ಯೋಗ, ಧ್ಯಾನ ಮಾಡುವ ಜೊತೆಗೆ ಟೆನ್ನಿಸ್ ಕೂಡ ಆಡುತ್ತಿದ್ದೆ. ಇದೆಲ್ಲವೂ ಪರೀಕ್ಷೆ ವೇಳೆ ಅನುಕೂಲ ಆಯಿತು ಎಂದು ಹೇಳಿದರು.ಸುಷ್ಮಾ ಸ್ವರಾಜ್ ಅವರು ವಿದೇಶಾಂಗ ಸಚಿವರಾಗಿದ್ದಾಗ ನಾನು ದೆಹಲಿಯಲ್ಲಿ ತರಬೇತಿಯೊಂದರಲ್ಲಿ ಪಾಲ್ಗೊಂಡಿದ್ದೆ. ಆಗ ಅವರು ಮಾಡುತ್ತಿದ್ದ ವಿದೇಶಾಂಗ ಕಾರ್ಯಗಳು ಗಮನ ಸೆಳೆದವು. ಜೈರಾಂ ರಮೇಶ್, ಪ್ರತಿಭಾ ಪಾಟೀಲ್ ಸೇರಿದಂತೆ ಹಲವರ ಕಾರ್ಯ ಸ್ಫೂರ್ತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ನಾನು ವಿದೇಶಾಂಗ ಇಲಾಖೆ ಆಯ್ಕೆ ಮಾಡಿಕೊಂಡೆ ಎಂದು ವಿವರಿಸಿದರು.

ಜನರಲ್ ಅಫೇರ್ಸ್, ಅರ್ಟಿಟ್ಯೂಡ್, ಇಂಟರ್ ವ್ಯೂ ಎಂಬ ಮೂರು ಹಂತ ಇರುತ್ತದೆ‌. ಸಂದರ್ಶನದಲ್ಲಿ ನಾವು ವಿಫಲರಾದರೆ ಮತ್ತೆ ಹೊಸದಾಗಿ ಮೊದಲಿನಿಂದಲೇ ಪರೀಕ್ಷೆ ಎದುರಿಸಬೇಕಾಗುತ್ತದೆ. ಹಣ ಕೊಟ್ಟು ಕೋಚಿಂಗ್ ಗೆ ಹೋಗುವ ಅವಶ್ಯಕತೆ ಇಲ್ಲ. ಇಂಟರ್ ನೆಟ್, ಗೂಗಲ್ ನಲ್ಲಿ ಎಲ್ಲಾ ವಿಚಾರಗಳು ಸಿಗುತ್ತದೆ‌‌. ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಶೇಕಡಾ 92 ರಷ್ಟು ಅಂಕ ಬಂದಿತ್ತು. ನಾನು ಕಠಿಣ ಪರಿಶ್ರಮ ಪಟ್ಟೆ. ಹಾಗಾಗಿ ಸಾಧನೆ ಮಾಡಲು ಸಾಧ್ಯವಾಯ್ತು ಎಂದು ತಿಳಿಸಿದರು.

 ವಿದ್ಯಾರ್ಥಿ ದಿಸೆಯಿಂದಲೇ ಪತ್ರಿಕೆಗಳನ್ನು ಓದಬೇಕು

ವಿದ್ಯಾರ್ಥಿ ದಿಸೆಯಿಂದಲೇ ಪತ್ರಿಕೆಗಳನ್ನು ಓದಬೇಕು

ಒಳ್ಳೆಯ ಮಾರ್ಗದರ್ಶನ ಇದ್ದರೆ ಒಂದೂವರೆ ವರ್ಷ ಸಾಕಾಗುತ್ತದೆ. ಯಾಕೆ ಪರೀಕ್ಷೆ ಬರೆಯುತ್ತೇನೆ ಎಂಬುದರ ಬಗ್ಗೆ ನಿಖರತೆ ಇರಬೇಕು. ಆರರಿಂದ ಏಳು ಗಂಟೆ ಕಾಲ ಓದುತ್ತಿದ್ದೆ. ಯೋಗ, ಧ್ಯಾನ, ಬೇರೆ ಬೇರೆ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದೆ. ಹೈಕೋರ್ಟ್, ಸುಪ್ರೀಂಕೋರ್ಟ್ ವಕೀಲರಾಗಿ ಕಾರ್ಯನಿರ್ವಹಿಸಿದ ಬಳಿಕ ಯುಪಿಎಸ್ ಸಿ ಬರೆಯಬೇಕೆಂದುಕೊಂಡಿದ್ದೆ. ಆದ್ರೆ ವಿದ್ಯಾಭ್ಯಾಸ ಮುಗಿದ ಬಳಿಕ ಪರೀಕ್ಷೆ ತೆಗೆದುಕೊಂಡೆ ಎಂದು ಹೇಳಿದರು‌.

ವಿದ್ಯಾರ್ಥಿ ದಿಸೆಯಿಂದಲೇ ಪತ್ರಿಕೆಗಳನ್ನು ಓದಬೇಕು. ದಿನನಿತ್ಯದ ಆಗುಹೋಗುಗಳ ಬಗ್ಗೆ ತಿಳಿದುಕೊಳ್ಳುತ್ತಿರಬೇಕು. ಮಕ್ಕಳಿಗೆ ಐಎಎಸ್ ಮತ್ತು ಐಪಿಎಸ್ ಓದಿ ಪಾಸ್ ಆದವರನ್ನು ಕರೆಯಿಸಿ ಸಂವಾದ ನಡೆಸಬೇಕು. ಓದಲು ಪಠ್ಯ ಸಿಗುತ್ತೆ. ಆದರೆ ಯಾವ ರೀತಿ ಓದಬೇಕು, ಯಾವ ರೀತಿ ಬರೆಯಬೇಕು ಎಂಬ ಕೋಚಿಂಗ್ ಬೇಕು. ಮಾರ್ಗದರ್ಶನ ಇದ್ದರೆ ಅನುಕೂಲ ಆಗುತ್ತದೆ ಎಂದು ಹೇಳಿದರು. ದಾವಣಗೆರೆಯಲ್ಲಿ ಯುಪಿಎಸ್ ಸಿ ಪರೀಕ್ಷೆ ಬರೆಯಲು ಇಚ್ಚಿಸುವವರಿಗೆ ಸಲಹೆ ನೀಡಲು ಸಿದ್ಧನಿದ್ದೇನೆ. ಸೇವೆ ಮಾಡಬೇಕೆಂಬ ಆಸೆ ಇರಬೇಕು. ಸಾಹಿತ್ಯ, ಕಾನೂನು ಸೇರಿದಂತೆ ಯಾವುದೇ ವಿಷಯವಾದರೂ ತುಂಬಾ ಆಳವಾದ ಅಧ್ಯಯನ ಬೇಕೇ ಬೇಕು. ಪೋಷಕರ ಒತ್ತಾಯಕ್ಕೆ ಪರೀಕ್ಷೆ ಬರೆಯಬಾರದು. ನಮ್ಮ ಸ್ವ ಇಚ್ಛೆಯಿಂದ ಬರೆದಾಗ ಮಾತ್ರ ಯಶಸ್ಸು ಗಳಿಸುವುದಕ್ಕಾಗಲೀ, ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯ ಎಂದು ಹೇಳಿದರು.

 ಜನರ ಸಹಕಾರ ಅಗತ್ಯ

ಜನರ ಸಹಕಾರ ಅಗತ್ಯ

ಇನ್ನು ಅವಿನಾಶ್ ತಂದೆ ವಿಠಲ್ ರಾವ್ ಮಾತನಾಡಿ, ನನ್ನ ಮಗ ರ‍್ಯಾಂಕ್ ಬಂದಿರುವುದು ತುಂಬಾ ಖುಷಿ ಕೊಟ್ಟಿದೆ‌. ದಾವಣಗೆರೆ ಜನರಿಗೆ ಒಳ್ಳೆಯದು ಮಾಡಲಿ. ಇಲ್ಲಿನವರಿಗೆ ಸಹಾಯ ಮಾಡಲಿ. ಏನೇ ಕೇಳಿದರೂ ಇಲ್ಲ ಎನ್ನಬೇಡ ಎಂಬ ಮಾತು ಹೇಳಿದ್ದೇನೆ. ದಾವಣಗೆರೆ ಹೆಸರು ಉಳಿಸಲಿ. ಇಲ್ಲಿನ ಜನರ ಸಹಕಾರ ಅಗತ್ಯ. ಬಿ. ಕಾಂ.‌ಓದಿದ. ಹೊಟೇಲ್ ಉದ್ಯಮಕ್ಕೆ ಬರಬೇಕೆಂಬ ಆಸೆ ಇತ್ತು. ಆದ್ರೆ ಈಗ ದಾವಣಗೆರೆಗೆ ಸೀಮಿತವಾಗಿಲ್ಲ. ದೇಶ, ವಿದೇಶಕ್ಕೆ ಸೀಮಿತ ಎಂಬಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ನನ್ನ ಪೋಷಕರ ಸಹಕಾರ, ಹಣ ಸೇರಿದಂತೆ ಎಲ್ಲಾ ರೀತಿಯ ಅವಶ್ಯಕತೆ ಇದ್ದೇ ಇರುತ್ತದೆ. ದೇವರ ಆಶೀರ್ವಾದ ಹಾಗೂ ಪೋಷಕರು ಬೆನ್ನೆಲಬಾಗಿ ನಿಂತಿದ್ದ ಕಾರಣ ನನ್ನ ಈ ಸಾಧನೆಗೆ ಕಾರಣ ಎಂದು ಹೇಳಿದರು.

(ಒನ್ಇಂಡಿಯಾ ಸುದ್ದಿ)

Recommended Video

C. T. Ravi: ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಖಚಿತ | #Politics | OneIndia Kannada

English summary
Avinash who got 31st rank in UPSC exams and topped among Karnataka candidates has explained the reason for him to select foreign dept. This youth from Davanagere said the hardship faced by people durin coronavirus pandemic made him to join foreign service.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X