ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಕ್ಕೆ ಅಂತ್ಯಸಂಸ್ಕಾರ ಮಾಡಿ, ಸಮಾಧಿ ಕಟ್ಟಿದ ಗ್ರಾಮಸ್ಥರು

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಜನವರಿ 9: ಊರಿನೊಳಗೆ ಬಂದು ಎಲ್ಲರೊಂದಿಗೆ ಬೆರೆತು ಆಡಿಕೊಂಡಿದ್ದ ಮಂಗವೊಂದು ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದು, ಆ ಮಂಗಕ್ಕೆ ಅಂತ್ಯಸಂಸ್ಕಾರ ನೆರವೇರಿಸಿ ಭಾವನಾತ್ಮಕವಾಗಿ ಬೀಳ್ಕೊಟ್ಟಿದ್ದಾರೆ ದಾವಣಗೆರೆಯ ಸಂತೇಬೆನ್ನೂರಿನ ಗ್ರಾಮಸ್ಥರು.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಗ್ರಾಮದಲ್ಲಿ ಸತ್ತ ಮಂಗಕ್ಕೆ ಮನುಷ್ಯರ ರೀತಿ ಅಂತ್ಯಕ್ರಿಯೆ ನಡೆಸಿ ಗ್ರಾಮಸ್ಥರೆಲ್ಲಾ ಸೇರಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ ಭಾವನಾತ್ಮಕವಾಗಿ ಬೀಳ್ಕೊಟ್ಟಿದ್ದಾರೆ.

ಹಸಿವಿನಿಂದ ಕಂಗಾಲಾದ ಮಂಗಗಳು; ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಮನಕಲಕುವ ದೃಶ್ಯಹಸಿವಿನಿಂದ ಕಂಗಾಲಾದ ಮಂಗಗಳು; ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಮನಕಲಕುವ ದೃಶ್ಯ

ಮೂರು ತಿಂಗಳ ಹಿಂದೆ ಎರಡು ಮಂಗಗಳು ಎಸ್.ವಿ.ಆರ್ ಕಾಲೋನಿಗೆ ಬಂದಿದ್ದವು. ಇಲ್ಲಿನ ಜನರಿಗೆ ಯಾವುದೇ ತೊಂದರೆ ಕೊಡದೇ ಎಲ್ಲರೊಂದಿಗೆ ಬೆರೆತಂತೆ ಇದ್ದವು. ಆದರೆ ನಿನ್ನೆ ಇದ್ದಕ್ಕಿದ್ದಂತೆ ಮಂಗವೊಂದು ಸಾವನ್ನಪ್ಪಿತು. ಅದಕ್ಕೆ ಗ್ರಾಮಸ್ಥರೆಲ್ಲಾ ಸೇರಿ ಅಂತ್ಯಕ್ರಿಯೆ ‌ನಡೆಸಿದರು.

People Performed Funeral Of Monkey In Davanagere

ಶಿವಮೊಗ್ಗ; 100 ಎಕರೆ ಜಾಗದಲ್ಲಿ ಮಂಕಿ ಪಾರ್ಕ್ ನಿರ್ಮಾಣಶಿವಮೊಗ್ಗ; 100 ಎಕರೆ ಜಾಗದಲ್ಲಿ ಮಂಕಿ ಪಾರ್ಕ್ ನಿರ್ಮಾಣ

ಎಲ್ಲರ ಪ್ರೀತಿ ಪಾತ್ರವಾಗಿದ್ದ ವಾನರನ ನೆನಪು ಅಚ್ಚಳಿಯದೇ ಉಳಿಯಬೇಕು ಎಂದು ಅದರ ಸಮಾಧಿ ಮೇಲೆ ಚಿಕ್ಕದಾದ ಆಂಜನೇಯ ಗುಡಿ ಸ್ಥಾಪಿಸಿ ಅಲ್ಲಿ ಆಂಜನೇಯನ ಭಾವಚಿತ್ರ ಇಟ್ಟು ಜನರು ಪೂಜಿಸತೊಡಗಿದ್ದಾರೆ. ಮುಂದೆ ಇದೇ ಜಾಗದಲ್ಲಿ ದೊಡ್ಡ ದೇಗುಲ ನಿರ್ಮಾಣ ಮಾಡುವುದಾಗಿಯೂ ಗ್ರಾಮಸ್ಥರು ತಿಳಿಸಿದ್ದಾರೆ.

English summary
People of santebennuru village in channagiri of davanagere performed funeral of monkey which came three months back to village
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X