ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೆ.30ರಂದು 2ಎ ಮೀಸಲಾತಿಗಾಗಿ ದಾವಣಗೆರೆಯಲ್ಲಿ ಪಂಚಮಸಾಲಿ ಸಮಾಜದ ಶಕ್ತಿ ಪ್ರದರ್ಶನ!

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಸೆಪ್ಟೆಂಬರ್ 23: ಪಂಚಮಸಾಲಿ ಲಿಂಗಾಯತ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು ಎಂಬ ಕೂಗು ಮತ್ತಷ್ಟು ಹೆಚ್ಚಾಗುತ್ತಿದೆ. ಮಾತ್ರವಲ್ಲ, ಈಗ ಶಕ್ತಿ ಪ್ರದರ್ಶನಕ್ಕೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕೂಡಲಸಂಗಮದ ಜಯ ಮೃತ್ಯುಂಜಯ ಸ್ವಾಮೀಜಿ ಈಗಾಗಲೇ ರಾಜ್ಯದೆಲ್ಲೆಡೆ ಪ್ರವಾಸ ಮಾಡುತ್ತಿದ್ದು, ದಾವಣಗೆರೆಯಲ್ಲಿ ಸೆಪ್ಟೆಂಬರ್ 30ರಂದು ಬೃಹತ್ ಕಾರ್ಯಕ್ರಮ ಏರ್ಪಡಿಸುವ ಮೂಲಕ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಲು
ನಿರ್ಧರಿಸಲಾಗಿದೆ.

ಈಗಾಗಲೇ ಮೊದಲ ಹಂತದ ಹೋರಾಟದಲ್ಲಿ ಯಶಸ್ವಿಯಾಗಿದೆ ಎಂದು ಹೇಳಿಕೊಳ್ಳುತ್ತಿರುವ ಪಂಚಮಸಾಲಿ ಸಮಾಜದ ನಾಯಕರು, ಈಗ ಎರಡನೇ ಹಂತದ ಹೋರಾಟಕ್ಕೆ ಧುಮುಕಿದ್ದಾರೆ. ಆರು ತಿಂಗಳೊಳಗೆ ಪಂಚಮಸಾಲಿ ಲಿಂಗಾಯತ ಸಮಾಜಕ್ಕೆ ಮೀಸಲಾತಿ ನೀಡುವ ಭರವಸೆ ನೀಡಿದ್ದ ಆಗ ಮುಖ್ಯಮಂತ್ರಿಯಾಗಿದ್ದ ಬಿ. ಎಸ್. ಯಡಿಯೂರಪ್ಪ ಈಗ ಅಧಿಕಾರದಲ್ಲಿ ಇಲ್ಲ.

ಆಗ ಗೃಹ ಸಚಿವರಾಗಿದ್ದ ಹಾಗೂ ಸಂಧಾನಕಾರರೂ ಆಗಿದ್ದ ಈಗಿನ ಸಿಎಂ ಬಸವರಾಜ ಬೊಮ್ಮಾಯಿ ಮೀಸಲಾತಿ ನೀಡುವ ಭರವಸೆ ನೀಡಿದ್ದರು. ಈಗ ಅವರೇ ಸಿಎಂ ಆಗಿದ್ದು, ಆದಷ್ಟು ಬೇಗ ಮೀಸಲಾತಿ ನೀಡಬೇಕು. ಸೆಪ್ಟೆಂಬರ್ 30ರೊಳಗೆ ಪ್ರಕಟಿಸಬೇಕು. ಇಲ್ಲದಿದ್ದರೆ ಅಕ್ಟೋಬರ್ 1ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹೋರಾಟ ಆರಂಭಿಸಲು ತೀರ್ಮಾನಿಸಲಾಗಿದೆ.

Panchamsali Lingayat Conference At Davanagere On September 30th For 2A Reservation

ದಾವಣಗೆರೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಹರಿಹರ ಮಾಜಿ ಶಾಸಕ ಎಸ್.ಎಚ್. ಶಿವಶಂಕರ್, "ಈಗಾಗಲೇ ಎಲ್ಲಾ ರೀತಿಯ ಪ್ರಯತ್ನಗಳು ಮುಂದುವರಿದಿವೆ. ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಗಡುವು ನೀಡಿದ್ದೇವೆ. ಈ ಅವಧಿಯೊಳಗೆ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ರಾಜ್ಯದಲ್ಲಿ ಮತ್ತೆ ಉಗ್ರ ಹೋರಾಟ ಆರಂಭವಾಗಲಿದೆ," ಎಂದು ಮಾಹಿತಿ ನೀಡಿದರು.

"ಪಂಚಮಸಾಲಿ ಸಮಾಜಕ್ಕೆ ವಿಧಾನಸೌಧದ ಒಳಗೆ ಹಾಗೂ ಹೊರಗೂ ಶಕ್ತಿಯಿದೆ. ಸೆಪ್ಟಂಬರ್ 30ರಂದು ದಾವಣಗೆರೆಯಲ್ಲಿ 2ಎ ಮೀಸಲಾತಿಗೆ ಆಗ್ರಹಿಸಿ ಬೃಹತ್ ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಶಾಸಕರು, ಸಚಿವರು ಸೇರಿದಂತೆ ಸಮಾಜದ ಎಲ್ಲಾ ನಾಯಕರು ಪಾಲ್ಗೊಳ್ಳಲಿದ್ದಾರೆ. ಸಂಗೊಳ್ಳಿ ರಾಯಣ್ಣ ಸರ್ಕಲ್‌ನಿಂದ 5 ಸಾವಿರಕ್ಕೂ ಹೆಚ್ಚು ಬೈಕ್ ಮೆರವಣಿಗೆ, ಗಾಂಧಿ ಸರ್ಕಲ್‌ನಲ್ಲಿ ವಾದ್ಯ ಮೇಳದೊಂದಿಗೆ ಜಯ ಮೃತ್ಯುಂಜಯ ಸ್ವಾಮೀಜಿಯವರನ್ನು ಕರೆದುಕೊಂಡು ಬರಲಾಗುತ್ತದೆ."

"ಅದ್ಧೂರಿಯಾಗಿ ಬರಮಾಡಿಕೊಳ್ಳುವ ಈ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಸೇರಲಿದ್ದಾರೆ. ಇನ್ನು ಶ್ರೀಗಳನ್ನು ವಿಶೇಷವಾಗಿ ಸ್ವಾಗತಿಸಲಾಗುವುದು. ಆನೆಯಲ್ಲಿ ಕುಳಿತುಕೊಂಡು ಶ್ರೀಗಳು ತ್ರಿಶೂಲ್ ಕಲಾಭವನದಲ್ಲಿ ನಡೆಯಲಿರುವ ಸಮಾರಂಭಕ್ಕೆ ಆಗಮಿಸುತ್ತಾರೆ. ಈಗಾಗಲೇ ಶ್ರೀಶೈಲ, ಹೊನ್ನಾಳಿಯ ಹಿರೇಕಲ್ಮಠ ಹಾಗೂ ಐರಣಿ ಮಠದ ಆನೆಗಳನ್ನು ಕಾರ್ಯಕ್ರಮದಲ್ಲಿ ಬಳಸಿಕೊಳ್ಳಲು ಮಠಾಧೀಶರು
ಒಪ್ಪಿದ್ದಾರೆ," ಎಂದು ಮಾಹಿತಿ ನೀಡಿದರು.

Panchamsali Lingayat Conference At Davanagere On September 30th For 2A Reservation

"ಕೇಂದ್ರದ ಮಾಜಿ ಸಚಿವ ಬಸವನಗೌಡ ಪಾಟೀಲ್ ಯತ್ನಾಳ್, 2ಎ ಮೀಸಲಾತಿ ಹೋರಾಟ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಂಪನವರ್ ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ಸಮಾಜದ ನಾಯಕರು, ಜನರು ಆಗಮಿಸಲಿದ್ದು, 50 ಸಾವಿರ ಮಂದಿ ಸೇರುವ ನಿರೀಕ್ಷೆ ಇದೆ," ಎಂದರು.

ಎಲ್ಲರನ್ನೂ ಆಹ್ವಾನಿಸುತ್ತೇವೆ
ಇನ್ನು ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು ಈ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಶಿವಶಂಕರ್, "ನಾವು ಸಮಾಜದ ಎಲ್ಲಾ ಶ್ರೀಗಳನ್ನು ಆಹ್ವಾನಿಸುತ್ತೇವೆ. ಬರುವುದು, ಬಿಡುವುದು ಅವರಿಗೆ ಬಿಟ್ಟ ವಿಚಾರ. ಅದೇ ರೀತಿಯಲ್ಲಿ ವಚನಾನಂದ ಶ್ರೀಗಳನ್ನು ಹೋರಾಟ ಸಮಿತಿ ಆಹ್ವಾನಿಸುತ್ತದೆ. ಅವರೂ ಸಹ ಬರುತ್ತಾರೆ ಎಂಬ ವಿಶ್ವಾಸ ಇದೆ. ಕಳೆದ ಬಾರಿ ಫ್ರೀಡಂ ಪಾರ್ಕ್ನಲ್ಲಿ ನಡೆದ ದೊಡ್ಡ ಮಟ್ಟದ ಹೋರಾಟದ ಸಂದರ್ಭದಲ್ಲಿ ವಚನಾನಂದ ಶ್ರೀಗಳು ಬ್ಯುಸಿ ಇದ್ದರು. ಬೇರೆ ಬೇರೆ ಕಾರ್ಯಕ್ರಮಗಳಿದ್ದ ಕಾರಣ ಅವರು ಬಂದಿರಲಿಲ್ಲ, ಈ ಬಾರಿ ಬರಬಹುದು. ಅವರು ಬೇರೆ ಕಾರ್ಯಕ್ರಮಗಳಲ್ಲಿ ಬ್ಯುಸಿ ಇದ್ದರೆ ಬರಲು ಕಷ್ಟವಾಗಬಹುದೇನೋ," ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದರು.

Panchamsali Lingayat Conference At Davanagere On September 30th For 2A Reservation

"ನಾವು ಬೇರೆ ಸಮಾಜದವರಿಗೆ ಮೀಸಲಾತಿ ನೀಡಲು ವಿರೋಧ ಇಲ್ಲ. ನಮ್ಮ ಹೋರಾಟಕ್ಕೆ ಬೇರೆ ಬೇರೆ ಸಮುದಾಯದ ಶ್ರೀಗಳು ಬೆಂಬಲಿಸಿದ್ದಾರೆ. ಕಾರ್ಯಕ್ರಮಕ್ಕೆ ಎಲ್ಲಾ ಸಮುದಾಯದವರನ್ನು ಆಹ್ವಾನ ಮಾಡುತ್ತೇವೆ. ವಾಲ್ಮೀಕಿ ಸಮುದಾಯವೂ ಹೋರಾಟ ಮಾಡುತ್ತಿದೆ. ಇದಕ್ಕೆ ನಮ್ಮ ಸಹಕಾರವೂ ಇದೆ. ಕೇಂದ್ರ ಸಚಿವರು ಜನಾಂದೋಲನ ನಡೆಸಿದರು. ಸಾವಿರಾರು ಜನರು ಸೇರಿದ್ದರು. ತಪ್ಪು, ಸರಿಯೋ ಆಮೇಲೆ ವಿಚಾರ ಮಾಡುತ್ತೇವೆ," ಎಂದು ಮಾಜಿ ಶಾಸಕ ಶಿವಶಂಕರ್ ತಿಳಿಸಿದರು.

Recommended Video

CSK ವಿರುದ್ಧ ಗೆಲ್ಲಲು ಮಾಸ್ಟರ್ ಪ್ಲಾನ್ ಮಾಡಿದ ವಿರಾಟ್! ಏನದು? | Oneindia Kannada

English summary
The Panchamsali Lingayata Massive Conference will be held in Davanagere on September 30 for a 2A reservation, Former MLA SH Shivshankar said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X