ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೊಲೀಸ್ ಇಲಾಖೆಯಲ್ಲಿ ಅತ್ಯುನ್ನತ ಸೇವೆ: ದಾವಣಗೆರೆಯ ಆರಕ್ಷರಿಗೆ ರಾಷ್ಟ್ರಪತಿ ಪದಕ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಜನವರಿ 9: ಸ್ವಾತಂತ್ರ್ಯೋತ್ಸವದ ನಿಮಿತ್ತ ನೀಡಲಾಗುವ ರಾಷ್ಟ್ರಪತಿ ಪದಕಕ್ಕೆ ಆಯ್ಕೆಯಾಗಿರುವ ದಾವಣಗೆರೆ ಜಿಲ್ಲೆಯ ಇಬ್ಬರು ಪೊಲೀಸರಿಗೆ ರಾಜ್ಯಪಾಲ ವಿ.ಆರ್ ವಾಲಾ ಅವರು ರಾಜಭವನದಲ್ಲಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಗುರುವಾರ ಪ್ರಶಸ್ತಿ ನೀಡಿದರು.

ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ದಾವಣಗೆರೆಯ ಡಿಸಿಆರ್‌ಬಿ ಡಿವೈಎಸ್ಪಿ ಬಿ.ಎಸ್.ಬಸವರಾಜ್ ಹಾಗೂ ಎಸ್ಪಿ ಕಚೇರಿಯ ಗಣಯಂತ್ರ ವಿಭಾಗದ ರಾಮಚಂದ್ರ ಬಿ.ಜಾಧವ್ ಪ್ರಶಸ್ತಿ ಸ್ವೀಕರಿಸಿದರು.

ದಾವಣಗೆರೆಯಲ್ಲಿ ತಡರಾತ್ರಿವರೆಗೂ ಅಬ್ಬರಿಸಿದ ಮಳೆ: ಜನಜೀವನ ಅಸ್ತವ್ಯಸ್ತದಾವಣಗೆರೆಯಲ್ಲಿ ತಡರಾತ್ರಿವರೆಗೂ ಅಬ್ಬರಿಸಿದ ಮಳೆ: ಜನಜೀವನ ಅಸ್ತವ್ಯಸ್ತ

ಡಿವೈಎಸ್ಪಿ ಬಸವರಾಜ್
ಡಿವೈಎಸ್ಪಿ ಬಸವರಾಜ್ ಅವರು ಮೂಲತಃ ಬಿಜಾಪುರ ಜಿಲ್ಲೆಯ ಬಸವನಬಾಗೆವಾಡಿಯವರಾಗಿದ್ದು, 2001ರಲ್ಲಿ ಪಿಎಸ್‌ಐ ಆಗಿ ಪೊಲೀಸ್ ಇಲಾಖೆಗೆ ಸೇರಿದರು. 18 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದು, ಸೂಕ್ಷ್ಮ ಸಮಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು, ಅಪರಾಧ ತಡೆಗಟ್ಟುವುದು, ಪ್ರಕರಣ ಪತ್ತೆ ಹೆಚ್ಚುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

Outstanding Service In The Police Department: Presidents Medal For Davanagere Police

ನಕ್ಸಲ್ ನಿಗ್ರಹದಳ, ಶಿಕಾರ ಗ್ಯಾಂಗ್ ಪತ್ತೆ, ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದಾರೆ. 2011ರಲ್ಲಿ ಸಿಎಂ ಪದಕ ಪಡೆದಿದ್ದಾರೆ. ಮುತ್ತುಕಟ್ಟುವ ಪದ್ಧತಿ ನಿಯಂತ್ರಿಸುವಲ್ಲಿ ಇವರ ಪಾತ್ರ ಪ್ರಮುಖವಾಗಿದೆ. 31 ರಿವಾರ್ಡ್‌ಗಳನ್ನು ಪಡೆದಿದ್ದಾರೆ. ಹಲವಾರು ಪುಸ್ತಕ ಬರೆದಿದ್ದಾರೆ. ಹರಪನಹಳ್ಳಿ, ತೀರ್ಥಹಳ್ಳಿ, ಎಸ್‌ಐಟಿ, ಲೋಕಾಯುಕ್ತದಲ್ಲಿ ಸೇವೆ ಸಲ್ಲಿಸಿದ್ದಾರೆ.

ರಾಮಚಂದ್ರ ಬಿ ಜಾಧವ್
ಇವರು ಜಿಲ್ಲಾ ಪೊಲೀಸ್ ಕಚೇರಿಯ ಗಣಕಯಂತ್ರ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. 1994ರಲ್ಲಿ ಸೇವೆಗೆ ಸೇರಿದ್ದು, 25 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 68 ರಿವಾರ್ಡ್ ಪಡೆದಿದ್ದಾರೆ. 2014ರಲ್ಲಿ ಸಿಎಂ ಪದಕ ಸಿಕ್ಕಿದೆ. ಉತ್ತಮ ಕಂಪ್ಯೂಟರ್ ಜ್ಞಾನ, ವಿಶೇಷ ಕ್ರಿಯಾತ್ಮಕ ಕಾರ್ಯದಿಂದ ಪತ್ತೆಯಾಗದೇ ಇರುವಂತಹ ಹಲವಾರು ಸೂಕ್ಷ್ಮ ಪ್ರಕರಣಗಳನ್ನು ಪತ್ತೆ ಮಾಡಿಕೊಡುವಲ್ಲಿ ಸಹಕರಿಸಿದ್ದಾರೆ.

Outstanding Service In The Police Department: Presidents Medal For Davanagere Police

ಸೈಬರ್ ಕ್ರೈಂ ಮತ್ತು ತಾಂತ್ರಿಕ ಪರಿಣಿತಿಯ ಮೇಲೆ ಪ್ರಕರಣ ಪತ್ತೆ ಮಾಡುವ ಕೌಶಲ್ಯ ಹೊಂದಿದ್ದಾರೆ. 34 ಬಾರಿ ರಕ್ತದಾನ ಮಾಡಿದ್ದು, ಸೈಕ್ಲಿಂಗ್ ಮತ್ತು ಅತ್ಯುತ್ತಮ ಯೋಗಪಟುವಾಗಿದ್ದಾರೆ. ಅಲ್ಲದೇ ತಂತ್ರಜ್ಞಾನದಲ್ಲಿ ದಾವಣಗೆರೆ ಜಿಲ್ಲೆ ಮಂಚೂಣಿಯಾಗಿರಲು ಪ್ರಮುಖ ಪಾತ್ರವಹಿಸಿದ್ದಾರೆ. ಪದಕ ವಿಜೇತರಿಗೆ ಕಚೇರಿಯಲ್ಲಿ ಎಸ್ಪಿ ಹನುಮಂತರಾಯ, ಡಿವೈಎಸ್ಪಿ ರಾಜೀವ್ ಎಂ. ಅಭಿನಂದಿಸಿದರು.
English summary
Karnataka Governor Vajubhai Vala presented the award to the two policemen of Davanagere district who were selected for the president Of India medal on the occasion of independence Day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X