ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ ವಿರುದ್ಧ ಸಾಲು ಸಾಲು ಆರೋಪ ಮಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ಹರಿಹರ (ದಾವಣಗೆರೆ), ಅಕ್ಟೋಬರ್ 13: "ಇಂದಿರಾ ಕ್ಯಾಂಟೀನ್ ನಿಲ್ಲಿಸಲು ನೋಡಿದರು. ಲಕ್ಷಾಂತರ ಕೋಟಿ ಬಜೆಟ್ ನಲ್ಲಿ ಇದೆ. ನೂರು ಕೋಟಿ ಖರ್ಚು ಮಾಡಲು ನಿಮಗೆ ಏನು ತೊಂದರೆ? ಇಂದಿರಾ ಕ್ಯಾಂಟೀನ್ ‌ನಿಲ್ಲಿಸಬಾರದು. ಬಡವರಿಗೆ ಯೋಜನೆ ತರದೆ ಮತ್ಯಾರಿಗೆ ಮಾಡೋದು ಹೇಳಿ" ಎಂದು ಭಾನುವಾರ ವಿರೋಧ ಪಕ್ಷದ ನಾಯಕ- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹರಿಹರದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಹೇಳಿದರು.

"ನಾನು ಮುಖ್ಯಮಂತ್ರಿ ಆಗಿದ್ದಾಗ ಇಂದಿರಾ ಕ್ಯಾಂಟೀನ್ ಯೋಜನೆ‌ ತಂದೆ. ಅದಕ್ಕಿಂತ ‌ಮೊದಲು ಅನ್ನಭಾಗ್ಯ ಯೋಜನೆ ತೆಗೆದುಕೊಂಡು ಬಂದೆ. ಯಾರೂ ಹಸಿವಿನಿಂದ ಇರಬಾರದು ಎನ್ನುವುದು ನಮ್ಮ ಆಸೆ‌. ಯಾರು ಕೂಡ ಹಸಿವಿನಿಂದ ಇರಬಾರದು ಎಂದು ಗಾಂಧೀಜಿ ಆಶಯವಾಗಿತ್ತು. ನಮಗೆ ಅಧಿಕಾರ ಕೊಟ್ಟಿದ್ದು ನಾವು ಬದುಕಲಿಕ್ಕೆ ಅಲ್ಲ. ನಿಮ್ಮ ಕೆಲಸವನ್ನು ಮಾಡಲು, ತಾರತಮ್ಯ ಮಾಡದೇ ನೋಡಿಕೊಳ್ಳಲು" ಎಂದರು.

ಹರಿಹರ ಇಂದಿರಾ ಕ್ಯಾಂಟೀನ್ ಉದ್ಘಾಟನೆಯಲ್ಲಿ ಸಿದ್ದರಾಮಯ್ಯರಿಂದ ನಾಡಗೀತೆಗೆ ಅವಮಾನಹರಿಹರ ಇಂದಿರಾ ಕ್ಯಾಂಟೀನ್ ಉದ್ಘಾಟನೆಯಲ್ಲಿ ಸಿದ್ದರಾಮಯ್ಯರಿಂದ ನಾಡಗೀತೆಗೆ ಅವಮಾನ

ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾವಣೆ ಮಾಡಲು ಎಂದು ಕೆಲವೊಬ್ಬರು ಹೇಳ್ತಾರೆ. ದೇಶದಲ್ಲಿ ಸಂವಿಧಾನ ಬದಲಾವಣೆ ಮಾಡಿದರೆ ರಕ್ತಪಾತ ಆಗುತ್ತದೆ ಎಂದು ಅವರು ಹೇಳಿದರು. ಆ ಮೂಲಕ ಸಂಸದ ಅನಂತಕುಮಾರ್ ಹೆಗಡೆಗೆ ಟಾಂಗ್ ನೀಡಿದರು. ಇಂದಿರಾ ಕ್ಯಾಂಟಿನ್ ಮುಚ್ಚಲು ಗುಸು ಗುಸು ಮಾಡಿದರು. ಯಾವುದೇ ಕಾರಣಕ್ಕೂ ಅನ್ನಭಾಗ್ಯ ನಿಲ್ಲಿಸಬಾರದು ಎಂದು ಶನಿವಾರ ಅಧಿವೇಶನದಲ್ಲಿ ಹೇಳಿದೆ ಎಂದರು.

ನನ್ನ ಬಗ್ಗೆ ಅಪಪ್ರಚಾರ ಮಾಡಿದರು

ನನ್ನ ಬಗ್ಗೆ ಅಪಪ್ರಚಾರ ಮಾಡಿದರು

ಎಲ್ಲಾ ಸಮುದಾಯವರಿಗೆ ಯೋಜನೆಗಳನ್ನು ತಂದೆ. ಆದರೆ ನನ್ನ ಬಗ್ಗೆ ಅಪಪ್ರಚಾರ ಮಾಡಿದರು. ಅದನ್ನೇ ನಂಬಿಬಿಟ್ರಲ್ಲ ನೀವು, ಎಂದು ಜನರ ಬಳಿ ಬೇಸರ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಎಲ್ಲಾ ಯೋಜನೆಗಳನ್ನು ತಂದರೂ ನಮ್ಮನ್ನು ಕೈ ಬಿಟ್ಟುಬಿಟ್ಟರಲ್ಲ. ಎಲ್ಲರಿಗೂ ಅನ್ನ, ಸೂರು, ಶಿಕ್ಷಣ ಸಿಗಬೇಕು. ಇಂದಿರಾ ಕ್ಯಾಂಟೀನ್ ‌ನಲ್ಲಿ ಇಂದಿರಮ್ಮನ ಫೋಟೋ ಹಾಕಿದ್ದಕ್ಕೆ ಸಹಿಸಿಕೊಳ್ಳದೆ ಈ ರೀತಿ ಮಾಡುತ್ತಾ ಇದ್ದಾರೆ. ಇನ್ನು ನಾವು ಎಲ್ಲ ಜಯಂತಿಗಳನ್ನು ಮಾಡಿಕೊಂಡು ಬಂದೆವು. ಆದರೆ ಈಗ ಟಿಪ್ಪುವಿನ ಜಯಂತಿ‌ ನಿಲ್ಲಿಸಿದ್ದಾರೆ. ರಾಯಣ್ಣ, ಚನ್ನಮ್ಮ ಎಲ್ಲರೂ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದವರು. ಟಿಪ್ಪು ಕೂಡ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ಮಹಾನ್ ವ್ಯಕ್ತಿ. ಯಾರೂ ಸ್ವಾತಂತ್ರ್ಯ ಹೋರಾಟಗಾರ ಹೆಸರಿನಲ್ಲಿ ರಾಜಕೀಯ ‌ಮಾಡಬಾರದು ಎಂದರು.

ಬಿಜೆಪಿಯವರ ಬಣ್ಣ ಬಯಲಾಗಿದೆ

ಬಿಜೆಪಿಯವರ ಬಣ್ಣ ಬಯಲಾಗಿದೆ

ನರೇಂದ್ರ ‌ಮೋದಿ 56 ಇಂಚಿನ‌ ಎದೆ‌ ಇದೆ ಎಂದು ಹೇಳುತ್ತಾರೆ. ಆದರೆ ಎಷ್ಟೇ ದೊಡ್ಡದಾಗಿರಲಿ ಕಾಳಜಿ‌ ಇರಬೇಕು. ಬಡವರ ಜೊತೆ ಇರುವ ಕಾಳಜಿ ಇರಬೇಕು. ಪೈಲ್ವಾನ್ ಗಳಿಗೆ, ಬಾಡಿ ಬಿಲ್ಡರ್ ಗಳಿಗೆ ಕೂಡ ಎದೆ ದೊಡ್ಡದಿರುತ್ತದೆ. ಆದರೆ ಆ ಎದೆಯಲ್ಲಿ ಕಾಳಜಿ ಇರಬೇಕು. ಇಂದಿರಾ ಕ್ಯಾಂಟಿನ್ ‌ನಿಲ್ಲಿಸಲು, ಅನ್ನಭಾಗ್ಯ ಯೋಜನೆ ‌ನಿಲ್ಲಿಸಲು ನಾನು ಬಿಡಲ್ಲ. ಅಸೆಂಬ್ಲಿಯ ಮೂರು ದಿನಕ್ಕೆ ಬಿಜೆಪಿಯವರು ಸಾಕಾಗಿ ಹೋಗಿದ್ದಾರೆ. ನಾವು ಇದ್ದಾಗ 15 ದಿನ ಅಧಿವೇಶನ ‌ಮಾಡುತ್ತಾ ಇದ್ದೆವು. ನಾವು ಏನು ಮಾತನಾಡಿರೋದು ಕಾಣಬಾರದು ಎಂದು ಮಾಧ್ಯಮಗಳಿಗೆ ನಿರ್ಬಂಧ ಹೇರಿದ್ದಾರೆ. ಬಿಜೆಪಿಯವರ ನಿಜವಾದ ಬಣ್ಣ ಬಯಲಾಗಿದೆ. ಡಿಕ್ಟೇಟರ್ ರೀತಿ ಆಡಳಿತ ನಡೆಸಲು ಮುಂದಾಗಿದ್ದಾರೆ ಎಂದು ಆರೋಪ ಮಾಡಿದರು.

ಸಿದ್ದರಾಮಯ್ಯಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಓಪನ್ ಚಾಲೆಂಜ್ಸಿದ್ದರಾಮಯ್ಯಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಓಪನ್ ಚಾಲೆಂಜ್

ಯಡಿಯೂರಪ್ಪ ವಿರುದ್ಧ ವೇದಿಕೆ ಮೇಲೆ ವಾಗ್ದಾಳಿ

ಯಡಿಯೂರಪ್ಪ ವಿರುದ್ಧ ವೇದಿಕೆ ಮೇಲೆ ವಾಗ್ದಾಳಿ

ನೆರೆ ಪರಿಹಾರಕ್ಕೆ ಹಣ ಕೇಳಿದರೆ ಯಡಿಯೂರಪ್ಪ ಖಜಾನೆ ಖಾಲಿ ಅಂತಾರೆ. ಅವನ್ಯಾರೋ ರಾಜ್ಯಾಧ್ಯಕ್ಷ ಲೂಟಿ ಹೊಡೆದಿದ್ದಾರೆ ಎಂದು ಹೇಳುತ್ತಾ ಇದ್ದ. ಅದಕ್ಕೆ ಯಡಿಯೂರಪ್ಪನ ನಾನು ಕೇಳಿದರೆ ತಲೆ ಅಲ್ಲಾಡಿಸ್ತಾನೆ. ಗೋಲಿ ಆಡುವವರನ್ನೆಲ್ಲ ಕರೆದುಕೊಂಡು ಬಂದು ಅಧಿಕಾರ ಮಾಡುತ್ತಾರೆ ಎಂದರು ಸಿದ್ದರಾಮಯ್ಯ. ವೇದಿಕೆ ಮೇಲೆ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಶಾಸಕ ರಾಮಪ್ಪ ಧಿಕ್ಕಾರ ಹಾಕಿದರು. ಅನುದಾನ ಕಡಿತ ಮಾಡಿದರೆ ನನ್ನ ಕ್ಷೇತ್ರದ ಜನರ ಸಹಿತ ವಿಧಾನ ಸಭೆಗೆ ಮುತ್ತಿಗೆ ಹಾಕುತ್ತೇನೆ ಎಂದು ಇದೇ ವೇಳೆ ಆಡಳಿತಾರೂಢ ಪಕ್ಷ ಬಿಜೆಪಿಗೆ ಎಚ್ಚರಿಕೆ ನೀಡಿದರು.

ಹೆಂಗಿದ್ರಿ ನೀವು..ನಿಮ್ಮಲ್ಲಿ ಮೊದಲ ಯಡಿಯೂರಪ್ಪ ಕಾಣಿಸ್ತಾ ಇಲ್ಲ: ಸಿದ್ದರಾಮಯ್ಯಹೆಂಗಿದ್ರಿ ನೀವು..ನಿಮ್ಮಲ್ಲಿ ಮೊದಲ ಯಡಿಯೂರಪ್ಪ ಕಾಣಿಸ್ತಾ ಇಲ್ಲ: ಸಿದ್ದರಾಮಯ್ಯ

ಜಗತ್ತಿನಲ್ಲೇ ಅತಿ ಹೆಚ್ಚು ಸುಳ್ಳು ಹೇಳುವ ಪ್ರಧಾನಿ ನರೇಂದ್ರ ಮೋದಿ

ಜಗತ್ತಿನಲ್ಲೇ ಅತಿ ಹೆಚ್ಚು ಸುಳ್ಳು ಹೇಳುವ ಪ್ರಧಾನಿ ನರೇಂದ್ರ ಮೋದಿ

ರಾಜ್ಯದಲ್ಲಿ ಬಿಜೆಪಿಯು ಇನ್ನು ಎರಡು- ಮೂರು ತಿಂಗಳು ಮಾತ್ರ ಅಧಿಕಾರದಲ್ಲಿ ಇರುತ್ತದೆ. ಆ ನಂತರ ಸಿಎಂ ಆಗಿ ನಮ್ಮ ನಾಯಕ ಸಿದ್ದರಾಮಯ್ಯ ಅವರು ಇರುತ್ತಾರೆ. ಅವರಿಗೆ ನಾಡಿನ ಜನತೆ ಆಶೀರ್ವಾದ ಮಾಡಬೇಕು ಎಂದು ಸಭೆಯ ಮೂಲಕ ಕಾಂಗ್ರೆಸ್ ಶಾಸಕ ರಾಮಪ್ಪ ಅವರು ಮನವಿ ಮಾಡಿಕೊಂಡರು. ಆ ನಂತರ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ವಾಗ್ದಾಳಿ ನಡೆಸಿದ ಶಾಸಕ ಎಸ್. ರಾಮಪ್ಪ, ಜಗತ್ತಿನಲ್ಲಿ ಅತಿ ಹೆಚ್ಚು ಸುಳ್ಳು ಹೇಳುವ ಪ್ರಧಾನಿ ಅಂದರೆ ಅದು ನರೇಂದ್ರ ಮೋದಿ. ಹಿಂದುತ್ವ ಹಾಗೂ ಕೋಮುವಾದದ ಆಧಾರದ ಮೇಲೆ ಅಧಿಕಾರಕ್ಕೆ ಬರುತ್ತಾರೆ ಎಂದು ಆರೋಪ ಮಾಡಿದರು.

English summary
BJP government not capable of running a government, series of allegation by opposition leader Siddaramaiah in Davanagere on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X