ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದರೋಡೆಕೋರ ಪದ ಬಳಕೆ; ಸಿಎಂ ವಿರುದ್ಧ ಆಕ್ರೋಶ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಅಕ್ಟೋಬರ್ 14: ನಿನ್ನೆ ಬೆಂಗಳೂರಿನಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಸಿಎಂ ಯಡಿಯೂರಪ್ಪನವರು ದರೋಡೆಕೋರ ಎನ್ನುವ ಪದ ಬಳಸಿದ್ದು ಸಾಮಾಜಿಕ ಜಾಲತಾಣದಲ್ಲಿ ಸಂಚಲನವನ್ನೇ ಮೂಡಿಸಿದೆ.

ವಾಲ್ಮೀಕಿ ಜಯಂತಿ ಕಾರ್ಯಕ್ರಮ ಬಹಿಷ್ಕರಿಸಿದ ಮಾಧ್ಯಮಗಳುವಾಲ್ಮೀಕಿ ಜಯಂತಿ ಕಾರ್ಯಕ್ರಮ ಬಹಿಷ್ಕರಿಸಿದ ಮಾಧ್ಯಮಗಳು

ಕಾರ್ಯಕ್ರಮದ ವೇದಿಕೆಯಲ್ಲಿ ವಾಲ್ಮೀಕಿ ಶ್ರೀಗಳ ಬಗ್ಗೆ ಮಾತನಾಡುವಾಗ ರತ್ನಾಕರನೆಂಬ ದರೋಡೆಕೋರ ಎಂದು ಹೇಳಿದ್ದು ಆಕ್ರೋಶಕ್ಕೆ ಕಾರಣವಾಗಿದೆ. ಮಹರ್ಷಿ ವಾಲ್ಮೀಕಿಯನ್ನು ದರೋಡೆಕೋರ ಎಂದಿದ್ದಕ್ಕೆ ಸಿಎಂ ಯಡಿಯೂರಪ್ಪ ವಿರುದ್ಧ ಸಮಾಜದ ಯುವ ಸಮೂಹ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದೆ.

Opposition In Social Networks Against Yediyurappa For The Use Of Gangster Word

ವಾಲ್ಮೀಕಿ ಜನಾಂಗಕ್ಕೆ ಡಿಸಿಎಂ ಸ್ಥಾನ ನೀಡುವಂತೆ ಸ್ವಾಮೀಜಿ ಆಗ್ರಹವಾಲ್ಮೀಕಿ ಜನಾಂಗಕ್ಕೆ ಡಿಸಿಎಂ ಸ್ಥಾನ ನೀಡುವಂತೆ ಸ್ವಾಮೀಜಿ ಆಗ್ರಹ

ವಾಲ್ಮೀಕಿ ಶ್ರೀಗಳನ್ನು ದರೋಡೆಕೋರ ಎಂದು ಅವಮಾನಿಸಿದ್ದೀರಿ... ದರೋಡೆಕೋರ ಎನ್ನುವುದಕ್ಕೆ ಸಾಕ್ಷಿ ಏನಿದೆ?. ದರೋಡೆಕೋರ ಎಂದು ಹೇಳಿ ವಾಲ್ಮೀಕಿ ಶ್ರೀಗಳಿಗೆ ಹಾಗೂ ಸಮಾಜಕ್ಕೆ ಅವಮಾನ ಮಾಡಿದ್ದೀರಿ. ಕೂಡಲೇ ಸಮಾಜದ ಮುಂದೆ ಕ್ಷಮೆಯಾಚಿಸಿ, ಇಲ್ಲವಾದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿ ಫೇಸ್ ಬುಕ್, ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

English summary
CM Yeddyurappa's use of the word "gangster" at the Maharishi Valmiki jayanthi in Bangalore yesterday has caused a lot of debate over social network.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X