ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಯ್ಯೋ, ಅಧ್ಯಕ್ಷ ಗಾದಿಗೆ ನಾಮಪತ್ರ ಸಲ್ಲಿಸುವವರೇ ಇಲ್ಲ!

|
Google Oneindia Kannada News

ದಾವಣಗೆರೆ, ನವೆಂಬರ್.11: ಚುನಾವಣೆ ಅಂದ ಮೇಲೆ ಪೈಪೋಟಿ ಇರಲೇಬೇಕು. ಸ್ಪರ್ಧೆ ಇಲ್ಲದೇ ನಡೆಯುವ ಚುನಾವಣೆಗಳು ಬಲು ಅಪರೂಪ. ಆದರೆ, ಇಂಥ ಅಪರೂಪದ ಚುನಾವಣೆಗೆ ಇಂದು ಬೆಣ್ಣೆ ನಗರಿ ದಾವಣಗೆರೆ ಸಾಕ್ಷಿಯಾಯಿತು. ಹಾಗಂತಾ ಇದ್ಯಾವುದೋ ಸಣ್ಣ ಗ್ರಾಮ ಪಂಚಾಯತಿ ಚುನಾವಣೆ ಅಲ್ಲವೇ ಅಲ್ಲ.

ಈಗ ದಾವಣಗೆರೆಯಲ್ಲಿ ಮಹಾನಗರ ಪಾಲಿಕೆ ಚುನಾವಣೆಯದ್ದೇ ಸದ್ದು. ಇದರ ನಡುವೆಯೇ ನಡೆದ ಮತ್ತೊಂದು ಚುನಾವಣೆ ಇದೀಗ ಸಾಕಷ್ಟು ಕುತೂಹಲ ಕೆರಳಿಸಿದೆ. ಯಾಕೆಂದರೆ ಈ ಚುನಾವಣೆಯಲ್ಲಿ ಎದುರಾಳಿಯೇ ಇರಲಿಲ್ಲ. ಇಲ್ಲಿ ನಾಮಪತ್ರ ಸಲ್ಲಿಸಿದ್ದು ಒಬ್ಬರೇ, ಆಯ್ಕೆಯಾಗಿದ್ದೂ ಅವರೇ.

ದಾವಣಗೆರೆ ಪಾಲಿಕೆ ಚುನಾವಣೆ; ಈ ಬಾರಿ ಮಹಿಳೆಯರದ್ದೇ ದರ್ಬಾರ್ದಾವಣಗೆರೆ ಪಾಲಿಕೆ ಚುನಾವಣೆ; ಈ ಬಾರಿ ಮಹಿಳೆಯರದ್ದೇ ದರ್ಬಾರ್

ಹೌದು, ದಾವಣಗೆರೆ ಜಿಲ್ಲಾ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಹಿಂದಿನ ಅವಧಿಯ ಅಧ್ಯಕ್ಷೆರ ಅವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಚುನಾವಣೆ ನಡೆಸಲಾಯಿತು. ಪ್ರಾದೇಶಿಕ ಆಯುಕ್ತರಾದ ಹರ್ಷ ಗುಪ್ತಾ ನೇತೃತ್ವದಲ್ಲಿ ಚುನಾವಣೆ ನಡೆಸಲಾಗಿದ್ದು, ನಾಮಪತ್ರ ಸಲ್ಲಿಕೆಗೆ ಸೂಚನೆ ನೀಡಲಾಗಿತ್ತು. ಆದರೆ, ಬಿಜೆಪಿ ಅಭ್ಯರ್ಥಿಯಾಗಿ ಯಶೋದಮ್ಮ ಎಂಬುವವರಷ್ಟೇ ನಾಮಪತ್ರ ಸಲ್ಲಿಸಿದ್ದು, ಅವರೇ ಜಿಲ್ಲಾ ಪಂಚಾಯತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

 Only One contested the District Panchayat elections.

ಯಶೋದಮ್ಮ ಒಬ್ಬರೇ ಅರ್ಜಿ ಸಲ್ಲಿಸಿದ್ದು:

ದಾವಣಗೆರೆ ಜಿಲ್ಲಾ ಪಂಚಾಯಿತ್ ಅಧ್ಯಕ್ಷರಾಗಿ ಬಿಜೆಪಿಯ ಯಶೋದಮ್ಮ ಅವಿರೋಧ ಆಯ್ಕೆಯಾಗಿದ್ದಾರೆ. ಇಲ್ಲಿ ಅಚ್ಚರಿಯ ವಿಚಾರ ಅಂದರೆ ಅಧ್ಯಕ್ಷ ಗಾದಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದು, ಚನ್ನಗಿರಿ ತಾಲೂಕಿನ ಹೊದಿಗೆರೆ ಕ್ಷೇತ್ರದ ಯಶೋಧಮ್ಮ ಒಬ್ಬರೇ. ಒಟ್ಟು 29 ಸದಸ್ಯ ಬಲದ ದಾವಣಗೆರೆ ಜಿಲ್ಲಾ ಪಂಚಾಯತಿಯಲ್ಲಿ 18 ಬಿಜೆಪಿ, 07 ಕಾಂಗ್ರೆಸ್, 02 ಜೆಡಿಎಸ್ ಹಾಗೂ ಇಬ್ಬರು ಪಕ್ಷೇತರ ಸದಸ್ಯರಿದ್ದಾರೆ.

 Only One contested the District Panchayat elections.

ದಾವಣಗೆರೆ ಪಾಲಿಕೆ ಚುನಾವಣೆ; ಚುನಾವಣಾ ಕಸರತ್ತಿಗೆ ಜೊತೆಯಾಯ್ತು ಬಂಡಾಯದ ಬಿಸಿ

ಚುನಾವಣೆಗೆ ಕಾಂಗ್ರೆಸ್ ಸದಸ್ಯರು ಬರಲೇ ಇಲ್ಲ:

ಇಂದಿನ ಚುನಾವಣೆ ವೇಳೆ ಕಾಂಗ್ರೆಸ್ ಸದಸ್ಯರು ಗೈರು ಹಾಜರಾಗಿದ್ದರು. ಅಧ್ಯಕ್ಷ ಸ್ಥಾನಕ್ಕೆ ಯಶೋಧಮ್ಮ ಮಾತ್ರ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅವರನ್ನು ಅವಿರೋಧವಾಗಿ ಆಯ್ಕೆಯಾದರು.

English summary
A Single contested the District Panchayat elections. Unanimously elected BJP member.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X