ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಿಂಚಣಿ; ಜೀವಂತ ಪ್ರಮಾಣ ಪತ್ರ ಸಲ್ಲಿಕೆ ಬದಲಾವಣೆ

|
Google Oneindia Kannada News

ದಾವಣಗೆರೆ, ನವೆಂಬರ್ 04: ಪಿಂಚಣಿ ಪಡೆಯುವ ನಿವೃತ್ತ ಸರ್ಕಾರಿ ನೌಕರರು ಪ್ರತಿ ವರ್ಷ ಜೀವಂತ ಪ್ರಮಾಣ ಪತ್ರ ಸಲ್ಲಿಸಬೇಕು. ಕೋವಿಡ್ ಸಂದರ್ಭದಲ್ಲಿ ನಿವೃತ್ತ ನೌಕರರ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಕೆಲವು ಬದಲಾವಣೆ ಮಾಡಲಾಗಿದೆ.

ಪಿಂಚಣಿದಾರರ ಅನುಕೂಲಕ್ಕಾಗಿ ಜೀವಂತ ಪ್ರಮಾಣ ಪತ್ರ ಸಲ್ಲಿಸುವ ಅವಧಿಯಲ್ಲಿ ಮಾರ್ಪಾಡು ಮಾಡಲಾಗಿದೆ. ಇನ್ನು ಮುಂದೆ ಹಿಂದಿನ ವರ್ಷದ ಯಾವ ತಿಂಗಳಿನಲ್ಲಿ ಜೀವಂತ ಪ್ರಮಾಣ ಪತ್ರ ಸಲ್ಲಿಸಿದ್ದಾರೋ ಆ ತಿಂಗಳಿನಿಂದ ಮುಂದಿನ ಒಂದು ವರ್ಷದವರೆಗೆ ಪತ್ರ ಸಲ್ಲಿಸಬೇಕಿದೆ.

ಪಿಂಚಣಿ ಮೊತ್ತ ನೇರವಾಗಿ ಬ್ಯಾಂಕ್ ಖಾತೆಗೆ ಜಮೆ: ಅಶೋಕ ಪಿಂಚಣಿ ಮೊತ್ತ ನೇರವಾಗಿ ಬ್ಯಾಂಕ್ ಖಾತೆಗೆ ಜಮೆ: ಅಶೋಕ

ಇಷ್ಟು ದಿನ ನಿವೃತ್ತ ನೌಕರರು ಪ್ರತಿ ವರ್ಷದ ನವೆಂಬರ್ ತಿಂಗಳಿನಲ್ಲಿ ಜೀವಂತ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯವಾಗಿತ್ತು. ಈ ಬಾರಿ ಕೋವಿಡ್ ಪರಿಸ್ಥಿತಿ ಕಾರಣ ಅನಗತ್ಯ ಅಲೆದಾಟ, ಜನಸಂದಣಿ ಸೇರುವುದನ್ನು ತಪ್ಪಿಸಲು ಈ ಬದಲಾವಣೆ ಮಾಡಲಾಗಿದೆ.

ಪಿಂಚಣಿ ಹಣಕ್ಕೆ ಕಿತ್ತಾಟ: ಪತ್ನಿಯನ್ನು ಕೊಂದ 92ರ ವೃದ್ಧಪಿಂಚಣಿ ಹಣಕ್ಕೆ ಕಿತ್ತಾಟ: ಪತ್ನಿಯನ್ನು ಕೊಂದ 92ರ ವೃದ್ಧ

 Now Its Easy To Submit Life Certificate

ಇದರಿಂದಾಗಿ ಪಿಂಚಣಿದಾರರು ನವೆಂಬರ್ ತಿಂಗಳಿನಲ್ಲಿ ಜೀವಂತ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯವಾಗಿಲ್ಲ. ಪಿಂಚಣಿ ಪಡೆಯುವ ಬ್ಯಾಂಕ್ ಖಾತೆ ಸಂಖ್ಯೆ, ಪಿಪಿಓ ನಂಬರ್, ಆಧಾರ್ ಕಾರ್ಡ್ ಮಾಹಿತಿ ಮತ್ತು ಮೊಬೈಲ್‍ ನಂಬರ್‌ಗಳ ಜೊತೆ ಖುದ್ದಾಗಿ ಪಿಂಚಣಿ ಪಡೆಯುವ ಬ್ಯಾಂಕ್ ಅಥವಾ ಕಾಮನ್ ಸರ್ವಿಸ್‍ ಸೆಂಟರ್‌ಗಳನ್ನು ಅವರು ಸಂಪರ್ಕಿಸಬಹುದು.

ಅಧಿಕಾರಿ ದರ್ಪ: ಪಿಂಚಣಿ ಹಣಕ್ಕಾಗಿ ನಡೆದ ಕರುಣಾಜನಕ ಘಟನೆ ಅಧಿಕಾರಿ ದರ್ಪ: ಪಿಂಚಣಿ ಹಣಕ್ಕಾಗಿ ನಡೆದ ಕರುಣಾಜನಕ ಘಟನೆ

ಪಿಂಚಣಿ ಪಡೆಯುವವರು ಹಿರಿಯ ನಾಗರೀಕರು. ಜೀವಂತ ಪ್ರಮಾಣ ಪತ್ರ ನೋಂದಾಯಿಸಲು ತಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳು ಮತ್ತು ಬ್ಯಾಂಕ್‍ಗಳಿಗೆ ಭೇಟಿ ನೀಡಬಹುದಾಗಿದೆ.

Recommended Video

Vote ಮಾಡಿದ ಎಲ್ಲರಿಗೂ ಧನ್ಯವಾದ | DK Shivakumar | Oneindia Kannada

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಪಿಂಚಣಿದಾರರು ದೂರವಾಣಿ ಸಂಖ್ಯೆ 08182-275101/275105 (ಶಿವಮೊಗ್ಗ) ಮತ್ತು 08192-230240 (ದಾವಣಗೆರೆ) ಸಂಪರ್ಕಿಸಬಹುದಾಗಿದೆ.

English summary
Now it's easy to submit the life certificate. It is mandatory for government pensioners to submit the life certificate every year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X