ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆಯಲ್ಲಿ ಕೋಳಿಗಳ ಅಸಹಜ ಸಾವು; ಹಕ್ಕಿ ಜ್ವರ ಇಲ್ಲ

|
Google Oneindia Kannada News

ದಾವಣಗೆರೆ, ಮಾರ್ಚ್ 19: ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕು ಕೊಂಡಜ್ಜಿ ಗ್ರಾಮದ ಯಾವುದೇ ಫಾರಂಗಳಲ್ಲಿ ಕೋಳಿಗಳ ಅಸಹಜ ಸಾವು ವರದಿಯಾಗಿರುವುದಿಲ್ಲ ಹಾಗೂ ಹಕ್ಕಿ ಶೀತಜ್ವರದ ಲಕ್ಷಣಗಳು ಕಂಡು ಬಂದಿರುವುದಿಲ್ಲ ಎಂದು ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ. ಭಾಸ್ಕರ್ ನಾಯ್ಕ್ ತಿಳಿಸಿದ್ದಾರೆ.

ಮಾ.15 ಮತ್ತು 16 ರಂದು ಕೆಲವು ದೃಶ್ಯ ಮತ್ತು ಪತ್ರಿಕಾ ಮಾಧ್ಯಮಗಳಲ್ಲಿ ಕೊಂಡಜ್ಜಿ ಗ್ರಾಮದಲ್ಲಿನ ಕೋಳಿ ಫಾರಂಗಳಲ್ಲಿ ಹಕ್ಕಿ ಜ್ವರದಿಂದಾಗಿ ಕೋಳಿಗಳು ಸಾವನ್ನಪ್ಪುತ್ತಿರುವುದಾಗಿ ವರದಿ ಪ್ರಸಾರವಾಗಿದೆ. ಈ ಹಿನ್ನೆಲೆಯಲ್ಲಿ ತಜ್ಞರು ಗ್ರಾಮ ಪಂಚಾಯಿತಿ, ಪಿಡಿಓ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಕೊಂಡಜ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿರುವ ಕೋಳಿ ಫಾರಂಗಳ ತಪಾಸಣೆ ಮಾಡಿದರು.

ದಾವಣಗೆರೆ ಜಿಲ್ಲೆಯಲ್ಲಿ ಮತ್ತೆ ಹಕ್ಕಿ ಜ್ವರದ ಶಂಕೆ: ಒಂದೇ ವಾರದಲ್ಲಿ 8 ಸಾವಿರ ಕೋಳಿಗಳ ಸಾವುದಾವಣಗೆರೆ ಜಿಲ್ಲೆಯಲ್ಲಿ ಮತ್ತೆ ಹಕ್ಕಿ ಜ್ವರದ ಶಂಕೆ: ಒಂದೇ ವಾರದಲ್ಲಿ 8 ಸಾವಿರ ಕೋಳಿಗಳ ಸಾವು

ಅರಣ್ಯದಲ್ಲಿ ಕೆಲವು ಸತ್ತ ಕೋಳಿಗಳನ್ನು ಚೀಲದಲ್ಲಿ ತುಂಬಿ ಎಸೆಯಲಾಗಿತ್ತು. ಇದನ್ನು ಕೂಡಾ ಪರಿಶೀಲನೆ ಮಾಡಿದ್ದು, ಸತ್ತ ಕೋಳಿಗಳು ಅಂದಾಜು ಎರಡು ಕೆ.ಜಿ.ಗೂ ಮೇಲ್ಪಟ್ಟು ತೂಕವುಳ್ಳವಾಗಿದ್ದು, ಆ ವಯೋಮಾನದ ಮತ್ತು ತೂಕದ ಕೋಳಿಗಳು ಕೊಂಡಜ್ಜಿ ಪಂಚಾಯಿತಿ ವ್ಯಾಪ್ತಿಯಲ್ಲಿ ಸದ್ಯಕ್ಕೆ ಇರುವುದಿಲ್ಲ.

ಮನುಷ್ಯನಿಗೂ ಹರಡಿದ ಹಕ್ಕಿ ಜ್ವರ: ರಷ್ಯಾದಲ್ಲಿ ಮೊದಲ ಪ್ರಕರಣ ಮನುಷ್ಯನಿಗೂ ಹರಡಿದ ಹಕ್ಕಿ ಜ್ವರ: ರಷ್ಯಾದಲ್ಲಿ ಮೊದಲ ಪ್ರಕರಣ

No Bird Flu Symptoms Found In Kondajji Village

ಈ ಸತ್ತ ಕೋಳಿಗಳನ್ನು ಪಂಚಾಯಿತಿ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗಳು ವೈಜ್ಞಾನಿಕವಾಗಿ ವಿಲೇವಾರಿ ಮಾಡಿದ್ದಾರೆ. ಈ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 1 ಕೋಳಿಮೊಟ್ಟೆ ಫಾರಂ ಸೇರಿದಂತೆ ಒಟ್ಟು 7 ಕೋಳಿ ಫಾರಂಗಳಿವೆ.

ಚಿಕ್ಕಮಗಳೂರಲ್ಲಿ ಹಕ್ಕಿಗಳ ಸಾವು; ಜನರಲ್ಲಿ ಹಕ್ಕಿ ಜ್ವರದ ಆತಂಕ ಚಿಕ್ಕಮಗಳೂರಲ್ಲಿ ಹಕ್ಕಿಗಳ ಸಾವು; ಜನರಲ್ಲಿ ಹಕ್ಕಿ ಜ್ವರದ ಆತಂಕ

Recommended Video

ಕೇವಲ 24 ಗಂಟೆಗೆ ಎಷ್ಟ್ ಕೇಸ್ ದಾಖಲಾಗಿದೆ ಗೊತ್ತಾ ? | Corona Update | Oneindia Kannada

ಯಾವುದೇ ಫಾರಂಗಳಲ್ಲಿ ಕೋಳಿಗಳ ಅಸಹಜ ಸಾವು ವರದಿಯಾಗಿರುವುದಿಲ್ಲ. ಹಕ್ಕಿ ಶೀತಜ್ವರದ ಲಕ್ಷಣಗಳು ಕಂಡುಬಂದಿರುವುದಿಲ್ಲ. ಫಾರಂ ಮಾಲೀಕರುಗಳು ಕೋಳಿಗಳ ಅಸಹಜ ಸಾವು ಕಂಡುಬಂದಲ್ಲಿ ತಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡಲು ಸೂಚನೆ ಕೊಡಲಾಗಿದೆ.

English summary
No bird flu symptoms found in Kondajji village of Harihara taluk of Davanagere. animal husbandry department issued clarification on the issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X