ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆ; ಕೆಎಸ್ಆರ್‌ಟಿಸಿಯಿಂದ ಶಿರಡಿ, ಶ್ರೀಶೈಲಕ್ಕೆ ಹೊಸ ಬಸ್

|
Google Oneindia Kannada News

ದಾವಣಗೆರೆ, ಫೆಬ್ರವರಿ 16 : ಕೆಎಸ್ಆರ್‌ಟಿಸಿಯ ದಾವಣಗೆರೆ ವಿಭಾಗದಿಂದ ಶಿರಡಿ ಮತ್ತು ಶ್ರೀಶೈಲಕ್ಕೆ ಹೊಸ ಬಸ್‌ಗಳ ಸಂಚಾರವನ್ನು ಆರಂಭಿಸಲಾಗುತ್ತಿದೆ. 19/2/2020ರಿಂದ ಈ ಬಸ್‌ಗಳ ಸಂಚಾರ ಆರಂಭವಾಗುತ್ತಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ದಾವಣಗೆರೆ ವಿಭಾಗದಿಂದ ಸಾರ್ವಜನಿಕರ ಬೇಡಿಕೆಗೆ ಅನುಸಾರವಾಗಿ ಬಸ್ ಸಂಚಾರವನ್ನು ಆರಂಭಿಸಲಾಗುತ್ತಿದೆ. ಶಿರಡಿಗೆ ಹವಾನಿಯಂತ್ರಣ ರಹಿತ ಸ್ಲೀಪರ್ ಬಸ್, ಶ್ರೀಶೈಲಕ್ಕೆ ಕರ್ನಾಟಕ ಸಾರಿಗೆ ವಾಹನವನ್ನು ಓಡಿಸಲಾಗುತ್ತದೆ.

ಶಿರಡಿ ಬಂದ್; ಸಾಯಿಬಾಬಾ ದರ್ಶನಕ್ಕಿಲ್ಲ ವಿಘ್ನ ಶಿರಡಿ ಬಂದ್; ಸಾಯಿಬಾಬಾ ದರ್ಶನಕ್ಕಿಲ್ಲ ವಿಘ್ನ

ಶಿರಡಿ ಸಾಯಿಬಾಬ ಹಾಗೂ ಶ್ರೀಶೈಲ ಮಲ್ಲಿಕಾರ್ಜುನ ದೇವಾಲಯದ ಭಕ್ತರು ನೂತನ ಬಸ್ ಸೇವೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಲಾಗಿದೆ. ಮುಂಗಡ ಟಿಕೆಟ್ ಬುಕ್ಕಿಂಗ್ ಸೌಲಭ್ಯವನ್ನು ಸಹ ಆರಂಭಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಯಾಣದರ ಕಡಿತಗೊಳಿಸಿದ ಕೆಎಸ್ಆರ್‌ಟಿಸಿ ಪ್ರಯಾಣದರ ಕಡಿತಗೊಳಿಸಿದ ಕೆಎಸ್ಆರ್‌ಟಿಸಿ

New KSRTC Bus From Davanagere To Shirdi And Srisailam

ದಾವಣಗೆರೆಯಿಂದ ಹೊರಡುವ ಶಿರಡಿ ನಾನ್ ಎಸಿ ಸ್ಲೀಪರ್ ಬಸ್ ಹರಿಹರ, ರಾಣೆಬೆನ್ನೂರು, ಹಾವೇರಿ, ಹುಬ್ಬಳ್ಳಿ, ಬೆಳಗಾವಿ, ಕೊಲ್ಹಾಪುರ, ಪೂನಾ, ಅಹಮದ್ ನಗರ ಮಾರ್ಗದ ಮೂಲಕ ಶಿರಡಿ ತಲುಪಲಿದೆ.

ಕೆಎಸ್ಆರ್‌ಟಿಸಿ ನೌಕರರಿಗೆ ಸಿಹಿಸುದ್ದಿ ನೀಡಿದ ಹೈಕೋರ್ಟ್‌ಕೆಎಸ್ಆರ್‌ಟಿಸಿ ನೌಕರರಿಗೆ ಸಿಹಿಸುದ್ದಿ ನೀಡಿದ ಹೈಕೋರ್ಟ್‌

ದಾವಣಗೆರೆಯಿಂದ ಶ್ರೀಶೈಲಕ್ಕೆ ಹೊರಡುವ ಕರ್ನಾಟಕ ಸಾರಿಗೆ ಬಸ್ ಹರಿಹರ, ಹರಪನಹಳ್ಳಿ, ಹೊಸಕೋಟೆ, ಬಳ್ಳಾರಿ, ಕರ್ನೂಲ್, ಡೋರ್ನಾಳು, ಆತ್ಮಕೂರು ಮಾರ್ಗದ ಮೂಲಕ ಸಂಚಾರ ನಡೆಸಲಿದೆ.

ಬಸ್ಸಿನ ವೇಳಾಪಟ್ಟಿ

* ದಾವಣಗೆರೆ-ಶಿರಡಿ ಬಸ್‌ನ ಪ್ರಯಾಣ ದರ 1000 ರೂ. ಗಳು. ದಾವಣಗೆರೆಯಿಂದ ಸಂಜೆ 5.15ಕ್ಕೆ ಹೊರಡುವ ಬಸ್ ಬೆಳಗ್ಗೆ 7.45ಕ್ಕೆ ಶಿರಡಿ ತಲುಪಲಿದೆ. ಶಿರಡಿಯಿಂದ ಸಂಜೆ 5.15ಕ್ಕೆ ಹೊರಡುವ ಬಸ್ ಮರುದಿನ ಬೆಳಗ್ಗೆ 7.45ಕ್ಕೆ ದಾವಣಗೆರೆಗೆ ಬರಲಿದೆ.

* ದಾವಣಗೆರೆ-ಶ್ರೀಶೈಲ ಬಸ್‌ನ ಪ್ರಯಾಣ ದರ 646 ರೂ.ಗಳು. ದಾವಣಗೆರೆಯಿಂದ ಸಂಜೆ 4.30ಕ್ಕೆ ಹೊರಡುವ ಬಸ್ ಬೆಳಗ್ಗೆ 5.45ಕ್ಕೆ ಶ್ರೀಶೈಲ ತಲುಪಲಿದೆ. ಶ್ರೀಶೈಲದಿಂದ ಸಂಜೆ 5.35ಕ್ಕೆ ಹೊರಡುವ ಬಸ್ ಬೆಳಗ್ಗೆ 6.45ಕ್ಕೆ ದಾವಣಗೆರೆಗೆ ತಲುಪಲಿದೆ.

English summary
Karnataka State Road Transport Corporation (KSRTC) Davanagere depot will start new bus service Shirdi and Srisailam. Bus will run from February 19, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X