• search
 • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಡವರಿಂದ ಹಣ ವಸೂಲಿ ಮಾಡ್ತೀಯಾ; ರೇಣುಕಾಚಾರ್ಯ ಗರಂ!

By ದಾವಣಗೆರೆ ಪ್ರತಿನಿಧಿ
|

ದಾವಣಗೆರೆ, ಏಪ್ರಿಲ್ 28; "ಎಂಆರ್‌ಪಿ ರೇಟ್‌ಗೆ ಕೊಡಬೇಕು. ಜಾಸ್ತಿ ಹಣಕ್ಕೆ ಮಾರಾಟ ಮಾಡುತ್ತೀಯಾ. ಆಸ್ಪತ್ರೆಯಲ್ಲಿ ಸುಲಿಗೆ ಮಾಡಲು ಬಂದಿದ್ದೀಯಾ. ತೆಗೆದು ಹಾಕಿಬಿಡ್ತೀನಿ, ಹೊರಗೆ ಹಾಕಿಸಿಬಿಡ್ತೀನಿ ಹುಷಾರ್. ಇದು ಮತ್ತೆ ಮರುಕಳಿಸಿದರೆ ಹೊರಗೆ ಹಾಕಿಬಿಡಿ'' ಎಂದು ಶಾಸಕ ಎಂ. ಪಿ. ರೇಣುಕಾಚಾರ್ಯ ವೈದ್ಯಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬುಧವಾರ ಶಾಸಕರು ಹೊನ್ನಾಳಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದರು. ರೇಣುಕಾಚಾರ್ಯ ಅವರಿಗೆ ರೋಗಿಗಳು ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ದೂರುಗಳನ್ನು ನೀಡಿದರು. ಔಷಧ ಸೇರಿದಂತೆ ಇತರೆ ವಸ್ತುಗಳನ್ನು ಪಡೆಯಲು ಇಲ್ಲಿನ ಕೆಲ ಸಿಬ್ಬಂದಿ ಹಣ ಇಲ್ಲದೆ ಕೊಡುವುದಿಲ್ಲ ಎಂದು ಆರೋಪಿಸಿದರು.

Video: ದೆಹಲಿ ಆಸ್ಪತ್ರೆ ಬಳಿ ಕಾರಿನ ಒಳಗೆ ರೋಗಿ, ಕಾರಿನ ಹೊರಗೆ ಆಕ್ಸಿಜನ್!Video: ದೆಹಲಿ ಆಸ್ಪತ್ರೆ ಬಳಿ ಕಾರಿನ ಒಳಗೆ ರೋಗಿ, ಕಾರಿನ ಹೊರಗೆ ಆಕ್ಸಿಜನ್!

ಆಗ ಕೋಪಗೊಂಡ ಎಂ. ಪಿ. ರೇಣುಕಾಚಾರ್ಯ ಅವರು, "ಇಲ್ಲಿ ಯಾಕೆ ಇನ್ನು ಇಟ್ಟುಕೊಂಡಿದ್ದೀರಾ?" ಎಂದು ವೈದ್ಯಾಧಿಕಾರಿ ಅವರನ್ನು ತರಾಟೆಗೆ ತೆಗೆದುಕೊಂಡರು‌. ಕೊರೊನಾ ಸೋಂಕಿಗೆ ತುತ್ತಾಗಿ ಗುಣಮುಖರಾದ ಬಳಿಕ ಹೊನ್ನಾಳಿಗೆ ಎಂ. ಪಿ. ರೇಣುಕಾಚಾರ್ಯ ಭೇಟಿ ನೀಡಿದ್ದಾರೆ. ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ನೀಡುತ್ತಿರುವ ಬಗ್ಗೆ ಮಾಹಿತಿಯನ್ನು ಅವರು ಪಡೆದರು.

ದಾವಣಗೆರೆ: ವೆಂಟಿಲೇಟರ್ ಸಿಗದ ಮಹಿಳೆಗೆ ಮಾಜಿ ಸಚಿವರಿಂದ ಸಹಾಯದಾವಣಗೆರೆ: ವೆಂಟಿಲೇಟರ್ ಸಿಗದ ಮಹಿಳೆಗೆ ಮಾಜಿ ಸಚಿವರಿಂದ ಸಹಾಯ

ಆಗ ಕೋವ್ಯಾಕ್ಸಿನ್ ಖಾಲಿಯಾಗಿದೆ ಎಂದು ಹೇಳಿದ್ದಕ್ಕೂ ಆಕ್ರೋಶ ವ್ಯಕ್ತಪಡಿಸಿದ ಅವರು, "ಈಗಾಗಲೇ ನಾನು ಮಾತನಾಡಿದ್ದೇನೆ, ಲಸಿಕೆ ಬರುತ್ತವೆ. ಜನರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಿ" ಎಂದು ಸೂಚನೆ ನೀಡಿದರು.

ದಾವಣಗೆರೆ; ರೆಮ್ಡೆಸಿವಿರ್ ಅಕ್ರಮ ಮಾರಾಟ, ಇಬ್ಬರ ಬಂಧನ ದಾವಣಗೆರೆ; ರೆಮ್ಡೆಸಿವಿರ್ ಅಕ್ರಮ ಮಾರಾಟ, ಇಬ್ಬರ ಬಂಧನ

   ಬೆಂಗಳೂರಿನ 3 ಸಾವಿರ ಸೋಂಕಿತರು ನಾಪತ್ತೆ! ಹಳ್ಳಿಗಳಿಗೆ ತೆರಳಿದ್ದರೆ ಅಪಾಯ ಕಟ್ಟಿಟ್ಟಬುತ್ತಿ.. | Oneindia Kannada

   "ಮಾಸ್ಕ್ ಧರಿಸದೇ ಬರುವವರನ್ನು ಯಾವುದೇ ಕಾರಣಕ್ಕೂ ಆಸ್ಪತ್ರೆ ಒಳಬಿಡಬೇಡಿ. ಸಾಮಾಜಿಕ ಅಂತರ ಕಾಪಾಡಿಕೊಳ್ಳಿ. ತುರ್ತು ಚಿಕಿತ್ಸೆಗೆ ಬರುವ ರೋಗಿಗಳನ್ನು ನಿರ್ಲಕ್ಷಿಸದೇ ಚಿಕಿತ್ಸೆ ನೀಡಿ. ಬೆಡ್ ಖಾಲಿಯಿದ್ದರೆ ಸುಮ್ಮನಿರದೇ ಕೊರೊನಾ ಸೋಂಕಿತರಿಗೆ ವ್ಯವಸ್ಥೆ ಮಾಡಿಕೊಡಿ" ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

   English summary
   Honnali BJP MLA M. P. Renukacharya visited government hospital and warned officials for taking money from people for medicine.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X