• search
 • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

"ಜಮೀರ್ ಅಹ್ಮದ್ ಗುಜರಿ ಗಿರಾಕಿ" ಕಿಡಿಕಾರಿದ ರೇಣುಕಾಚಾರ್ಯ

By ದಾವಣಗೆರೆ ಪ್ರತಿನಿಧಿ
|

ದಾವಣಗೆರೆ, ಸೆಪ್ಟೆಂಬರ್ 12: ಜಮೀರ್ ಅಹ್ಮದ್ ಒಬ್ಬ ಚಿಲ್ಲರೆ, ಗುಜರಿ ಗಿರಾಕಿ. ಜಮೀರ್ ಅಹ್ಮದ್ ಏನೇ ಗಳಿಸಿದ್ರು ಅದು ಅನೈತಿಕ ಚಟುವಟಿಕೆಗಳಿಂದಲೇ ಎಂದು ಮಾಜಿ ಸಚಿವ ಹಾಗೂ ಹಾಲಿ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಕಿಡಿಕಾರಿದ್ದಾರೆ.

   Zameer Ahmed ದುಡ್ಡು ಮಾಡಿದ್ದು ಹೇಗೆ ಅಂತ ನಂಗೆ ಗೊತ್ತಿದೆ : Renukacharya | Oneindia Kannada

   ದಾವಣಗೆರೆ ಜಿಲ್ಲೆ ಹೊನ್ನಾಳಿ ಪಟ್ಟಣದಲ್ಲಿ ಇಂದು ಹಮ್ಮಿಕೊಂಡಿದ್ದ ಶಂಕು ಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮದ ಮುನ್ನ ಮಾತನಾಡಿದ ಅವರು, ಜಮೀರ್ ಅಹ್ಮದ್ ಈ ಹಿಂದೆ ಯಡಿಯೂರಪ್ಪ ಸಿಎಂ ಆದ್ರೆ ಅವರ ಮನೆ ಮುಂದೆ ಖಾಕಿ ಬಟ್ಟೆ ಹಾಕಿಕೊಂಡು ಕೈಯಲ್ಲಿ ಕೋಲು ಹಿಡಿದು ವಾಚ್ ಮನ್ ಆಗುವುದಾಗಿ ಹೇಳಿದ್ದರು. ಆದ್ರೆ ಈಗ ಯಡಿಯೂರಪ್ಪ ಸಿಎಂ ಆಗಿದ್ದಾರೆ. ಆದರೆ ಜಮೀರ್ ಅವರು ವಾಚ್ ಮನ್ ಆಗಲಿಲ್ಲ. ಒಂದು ರೀತಿ ಎರಡು ನಾಲಿಗೆ ವ್ಯಕ್ತಿ ಎಂದರೆ ಅದು ಜಮೀರ್ ಎಂದು ರೇಣುಕಾಚಾರ್ಯ ಕಿಡಿಕಾರಿದ್ದಾರೆ.

   ಮಕ್ಕಳ ಹಾಸಿಗೆ ದಿಂಬಿನಲ್ಲಿ ಲೂಟಿ ಹೊಡೆದವರು ಲೆಕ್ಕ ಕೇಳುತ್ತಿದ್ದಾರೆ

   ಡ್ರಗ್ಸ್ ಸಂಬಂಧ ಮಾತನಾಡಿದ ಅವರು, ಉಪ್ಪು ತಿಂದವರು ನೀರು‌ ಕುಡಿಯಲೇಬೇಕು. ನಮ್ಮ ಸರ್ಕಾರ ತನಿಖೆಗೆ ಪೊಲೀಸರಿಗೆ ಮುಕ್ತ ಅವಕಾಶ ನೀಡಿದೆ. ಡ್ರಗ್ಸ್ ವಿಚಾರದಲ್ಲಿ ಸತ್ಯಾಂಶ ಹೊರ ಬರಲಿದೆ ಎಂದರು. ಮಾಜಿ ಸಿಎಂ ಕುಮಾರಸ್ವಾಮಿ ಮುಖ್ಯಮಂತ್ರಿಯ ಭೇಟಿ ವಿಚಾರವಾಗಿ ಸ್ಪಷ್ಟನೆ ನೀಡಿದ ಅವರು, ಯಾವುದೇ ರಾಜಕೀಯ ಉದ್ದೇಶದಿಂದ ಭೇಟಿಯಾಗಿಲ್ಲ, ಅಭಿವೃದ್ಧಿ ವಿಷಯವಾಗಿ ಚರ್ಚಿಸಲು ಭೇಟಿಯಾಗಿದ್ದು, ಈ ಹಿಂದೆ ನಾನು ಕೂಡ ಕಾವೇರಿ ಭವನದಲ್ಲಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದೆ ಎಂದರು.

   English summary
   "Whatever zameer ahmed gained till now is through immoraly and unethicaly" said MLA Renukaacharya in davangere
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X