ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆ ಪಾಲಿಕೆ ಚುನಾವಣೆ; ಈ ಬಾರಿ ಮಹಿಳೆಯರದ್ದೇ ದರ್ಬಾರ್

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ನವೆಂಬರ್ 9: ದಾವಣಗೆರೆ ಪಾಲಿಕೆ‌ ಚುನಾವಣೆ ದಿನಾಂಕ‌ ನಿಗದಿಯಾದಾಗಿನಿಂದಲೂ ಜಿಲ್ಲೆಯಲ್ಲಿ ರಾಷ್ಟ್ರೀಯ ಪಕ್ಷಗಳ ನಡುವೆ ನೇರವಾದ ಪೈಪೋಟಿ ಎದುರಾಗಿದೆ. ನವೆಂಬರ್ 12ರಂದು ನಡೆಯಲಿರುವ ಪಾಲಿಕೆ ಚುನಾವಣೆಗೆ ಪ್ರಚಾರ ಕಾರ್ಯವೂ ಜೋರಾಗಿ ಸಾಗಿದೆ. ಈ ಬಾರಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮಹಿಳೆಯರ ಕಾರುಬಾರೇ ಜೋರಾಗಿರುವಂತಿದೆ.

ಈ ಬಾರಿ 45 ವಾರ್ಡ್ ಗಳಲ್ಲಿ ಮಹಿಳಾಮಣಿಗಳೇ ಹೆಚ್ಚಾಗಿ ಸ್ಪರ್ಧಿಸಿದ್ದು, ನಾವು ಯಾರಿಗೂ ಕಮ್ಮಿ‌ ಇಲ್ಲ ಎನ್ನುತ್ತಿದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ವಿಸ್ತರಣೆ ಮಾಡಿದ ಫಲವಾಗಿ ದಾವಣಗೆರೆ ಮಹಾನಗರ ಪಾಲಿಕೆಯ 20 ವಾರ್ಡುಗಳು ಮಹಿಳೆಯರಿಗೆ ಮೀಸಲಾಗಿವೆ.

88 ಮಹಿಳೆಯರು ಕಣಕ್ಕೆ

88 ಮಹಿಳೆಯರು ಕಣಕ್ಕೆ

ಇದೇ ಪ್ರಥಮ ಬಾರಿಗೆ ಪಾಲಿಕೆ ಚುನಾವಣೆಯಲ್ಲಿ ಗೆದ್ದು ಸದಸ್ಯರ ಸ್ಥಾನ ಅಲಂಕರಿಸಲು 88 ಮಹಿಳಾ ಮಣಿಗಳು ಕಣಕ್ಕಿಳಿದಿದ್ದಾರೆ. ರಾಷ್ಟ್ರೀಯ ಪಕ್ಷಗಳಲ್ಲಿ ಅಷ್ಟೇ ಅಲ್ಲ, ಪಕ್ಷೇತರವಾಗಿ ಕೂಡ ಮಹಿಳೆಯರು ಸ್ಫರ್ಧಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲು ಶತ ಪ್ರಯತ್ನ ಮಾಡುತ್ತಿದ್ದಾರೆ. ಪಾಲಿಕೆ‌ ಚುನಾವಣೆಯಲ್ಲಿ ಮಹಿಳೆಯರದ್ದೇ ಕಾರುಬಾರಾಗಿದೆ. 45 ಸದಸ್ಯ ಬಲದ ಪೈಕಿ ಅಂದಾಜು 20 ಮಹಿಳಾ ಸದಸ್ಯರಂತೂ ಆಯ್ಕೆಯಾಗುವುದು ನಿಶ್ಚಿತ.

ದಾವಣಗೆರೆ ಪಾಲಿಕೆ ಚುನಾವಣೆ; ಚುನಾವಣಾ ಕಸರತ್ತಿಗೆ ಜೊತೆಯಾಯ್ತು ಬಂಡಾಯದ ಬಿಸಿದಾವಣಗೆರೆ ಪಾಲಿಕೆ ಚುನಾವಣೆ; ಚುನಾವಣಾ ಕಸರತ್ತಿಗೆ ಜೊತೆಯಾಯ್ತು ಬಂಡಾಯದ ಬಿಸಿ

23 ವಾರ್ಡ್ ಗಳಲ್ಲಿ ಮಹಿಳೆಯರ ಸ್ಪರ್ಧೆ

23 ವಾರ್ಡ್ ಗಳಲ್ಲಿ ಮಹಿಳೆಯರ ಸ್ಪರ್ಧೆ

ಪಾಲಿಕೆಯ 45 ವಾರ್ಡುಗಳ ಪೈಕಿ 23 ವಾರ್ಡುಗಳಲ್ಲಿ ಮಹಿಳೆಯರು ಸ್ಪರ್ಧೆಗಿಳಿದಿದ್ದಾರೆ. ಸಾಮಾನ್ಯ ಕ್ಷೇತ್ರಕ್ಕೆ ಮೀಸಲಾಗಿದ್ದ ಗಣೇಶ ಪೇಟೆ 10ನೇ ವಾರ್ಡ್, ಸರಸ್ವತಿ ಬಡಾವಣೆಯ 33ನೇ ವಾರ್ಡ್ ಗಳಲ್ಲಿ ಹಾಗೂ ಅನುಸೂಚಿತ ಜಾತಿಗೆ ಮೀಸಲಾಗಿದ್ದ 34ನೇ ವಾರ್ಡ್ ನಲ್ಲೂ ತಲಾ ಒಬ್ಬರು ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ಮಹಿಳೆಯರಿಗೆ ಮೀಸಲಿದ್ದ ವಾರ್ಡ್ ಗಳಲ್ಲಿ ಪ್ರಚಾರವೂ ಚುರುಕು ಪಡೆದಿದೆ. ಪತ್ನಿಯರ ಗೆಲುವಿಗೆ ಗಂಡಂದಿರೂ ಪಣತೊಟ್ಟಿರುವುದರಿಂದ ಚುನಾವಣೆಯ ಕಾವು ಹೆಚ್ಚಾಗಿಯೇ ಇದೆ.

ಮೇಯರ್ ಸ್ಥಾನದ ಮೇಲೆ ಕಣ್ಣು

ಮೇಯರ್ ಸ್ಥಾನದ ಮೇಲೆ ಕಣ್ಣು

ಮೇಯರ್ ಪದವಿಯ ಆಸೆ ಅನೇಕ ಮಹಿಳಾ ಸ್ಪರ್ಧಿಗಳಲ್ಲಿ ಮೊಳಕೆಯೊಡಿದಿದೆ. ಈ ಬಾರಿಯ ಮೇಯರ್ ಸ್ಥಾನ ಸಾಮಾನ್ಯ ಸ್ಥಾನಕ್ಕೆ ಮೀಸಲಿದ್ದು, ಇಲ್ಲಿ ಯಾರು ಬೇಕಾದರೂ ಮೇಯರ್ ಆಗಬಹುದಾದರೂ, ಪುರುಷರು ಮಹಿಳೆಯರಿಗೆ ಮೇಯರ್ ಗಿರಿ ಬಿಟ್ಟು ಕೊಡುತ್ತಾರೆಯೇ ಎನ್ನುವುದು ಕಾದು ನೋಡಬೇಕಿದೆ. ಇನ್ನು ಸಾಮಾನ್ಯ ಮಹಿಳೆಗೆ ಮೀಸಲಾದ ಅಹಮದ್‌ ನಗರ 12ನೇ ವಾರ್ಡ್ ನಲ್ಲಿ 5 ಜನ, ನಿಟುವಳ್ಳಿ ಹೊಸ ಬಡಾವಣೆ 35ನೇ ವಾರ್ಡ್ ಗೆ 3 ಜನ, ಕೆಇಬಿ ಕಾಲೋನಿ 37ನೇ ವಾರ್ಡ್ ಗೆ 4ಜನ, ನಿಟುವಳ್ಳಿ ಚಿಕ್ಕನಳ್ಳಿ ಬಡಾವಣೆ 32ನೇ ವಾರ್ಡ್ ಗೆ ಮೂವರು, ಕೆಟಿಜೆ ನಗರ 27ನೇ ವಾರ್ಡ್ ಗೆ 4 ಜನ, 8ನೇ ವಾರ್ಡ್ ಸುರೇಶ್ ನಗರ 5 ಜನ, 2ನೇ ವಾರ್ಡ್ ಎಸ್.ಎಸ್. ಎಂ ನಗರ ಮತ್ತು ಮುಸ್ತಾಫ ನಗರ 8 ಜನ, ಆಂಜನೇಯ ಬಡಾವಣೆ 40ನೇ ವಾರ್ಡ್ ಗೆ ಇಬ್ಬರು, 12ನೇ ವಾರ್ಡ್ ಅಹಮದ್ ನಗರದಲ್ಲಿ 5 ಜನ, 41ನೇ ವಾರ್ಡ್ ಬನಶಂಕರಿ ಬಡಾವಣೆಯಲ್ಲಿ ಇಬ್ಬರು, ನಿಟುವಳ್ಳಿ ಆಂಜನೇಯ ಬಡಾವಣೆ, ಶ್ರೀರಾಮ ಬಡಾವಣೆ 29ನೇ ವಾರ್ಡ್ 4 ಜನ, 42ನೇ ವಾರ್ಡ್ ಸಿದ್ದವೀರಪ್ಪ ಬಡಾವಣೆಯಲ್ಲಿ 4 ಜನ ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಡಿ. ಕೆ. ಶಿವಕುಮಾರ್ ಪ್ರಭಾವ; 7 ಅಭ್ಯರ್ಥಿಗಳು ಅವಿರೋಧ ಆಯ್ಕೆಡಿ. ಕೆ. ಶಿವಕುಮಾರ್ ಪ್ರಭಾವ; 7 ಅಭ್ಯರ್ಥಿಗಳು ಅವಿರೋಧ ಆಯ್ಕೆ

ಎಲ್ಲಾ ವಾರ್ಡ್ ಗಳಲ್ಲೂ ಮಹಿಳೆಯರ ಪ್ರಾತಿನಿಧ್ಯ

ಎಲ್ಲಾ ವಾರ್ಡ್ ಗಳಲ್ಲೂ ಮಹಿಳೆಯರ ಪ್ರಾತಿನಿಧ್ಯ

ಹಿಂದುಳಿದ ವರ್ಗ (ಎ) ಮಹಿಳೆಗೆ ಮೀಸಲಾದ ಜಗಜೀವನ ರಾಂ ನಗರ 5ನೇ ವಾರ್ಡ್ ‍ಗೆ 4 ಮಹಿಳೆಯರು, ಮುದ್ದಾಭೋವಿ ಕಾಲೋನಿ, ಕೊರಚರಟ್ಟಿಯ 13ನೇ ವಾರ್ಡ್ ನಲ್ಲಿ 6 ಜನ, ದೇವರಾಜ ಅರಸು ಬಡಾವಣೆಯ 15ನೇ ವಾರ್ಡ್ ನಲ್ಲಿ 4 ಜನ, ನಿಜಲಿಂಗಪ್ಪ ಬಡಾವಣೆ ಹಾಗೂ ಎಸ್.ಎಸ್. ಬಡಾವಣೆ ಎ ಬ್ಲಾಕ್ ನ 24ನೇ ವಾರ್ಡ್ ‍ನಲ್ಲಿ 2 ಜನ, 39ನೇ ವಾರ್ಡ್ ವಿದ್ಯಾನಗರದಲ್ಲಿ 3 ಜನ ಮಹಿಳಾ ಸ್ಪರ್ಧಿಗಳಿದ್ದಾರೆ. ಅನುಸೂಚಿತ ಜಾತಿ ಮಹಿಳಾ ಮೀಸಲಿಗೆ ಕಾಯ್ದಿರಿಸಿದ ವಾರ್ಡ್ 44ರ ಎಸ್.ಎಸ್. ಬಡಾವಣೆ ಬಿ ಬ್ಲಾಕ್, ಹಳೇ ಕುಂದವಾಡಕ್ಕೆ 4 ಜನ, ಲೆನಿನ್ ನಗರ 36ನೇ ವಾರ್ಡ್ ನಲ್ಲಿ ಇಬ್ಬರು ಮಹಿಳೆಯರು, ಅನುಸೂಚಿತ ಪಂಗಡ ಮಹಿಳೆಗೆ ಮೀಸಲಾದ ಭಾರತ್ ಕಾಲೋನಿ 20ನೇ ವಾರ್ಡ್ ‍ಗೆ 3 ಜನ, ಹಿಂದುಳಿದ ವರ್ಗ ಬಿಗೆ ಮೀಸಲಾದ ಬಸಾಪುರ 21ನೇ ವಾರ್ಡ್ ಗೆ 3 ಮಹಿಳೆಯರು, ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾದ ಆವರಗೆರೆ 30ನೇ ವಾರ್ಡ್ ಗೆ 10 ಮಹಿಳೆಯರು ಸ್ಪರ್ಧೆ ನಡೆಸಲಿದ್ದಾರೆ.

English summary
There has been direct competition between the national parties in the district ever since the Davanagere corporation election date announced. This time women candidates are competing more in election
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X