ದಾವಣಗೆರೆಯಲ್ಲಿ ಬಸ್ ಗಳ ಮುಖಾಮುಖಿ ಡಿಕ್ಕಿ; 40 ಪ್ರಯಾಣಿಕರಿಗೆ ಗಾಯ
ದಾವಣಗೆರೆ, ನವೆಂಬರ್ 19: ರಾಜ್ಯ ಹೆದ್ದಾರಿ 65ರಲ್ಲಿ ಎರಡು ಖಾಸಗಿ ಬಸ್ ಗಳು ಮುಖಾಮುಖಿ ಡಿಕ್ಕಿಯಾಗಿ, ಘಟನೆಯಲ್ಲಿ 40 ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ಗುರುವಾರ ನಡೆದಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಜೋಳದಹಾಳು ಗ್ರಾಮದ ಬಳಿ ಬಸ್ ಗಳ ನಡುವೆ ಅಪಘಾತ ಸಂಭವಿಸಿದೆ. ಒಂದು ಬಸ್ ಚನ್ನಗಿರಿಯಿಂದ ಭದ್ರಾವತಿಯತ್ತ ಹೊರಟಿತ್ತು. ಮತ್ತೊಂದು ಬಸ್ ಭದ್ರಾವತಿಯಿಂದ ಚನ್ನಗಿರಿ ಕಡೆಗೆ ಹೋಗುತ್ತಿತ್ತು. ಜೋಳದಹಾಳು ಗ್ರಾಮದ ಬಳಿಯ ತಿರುವಿನಲ್ಲಿ ಎರಡೂ ಬಸ್ ಗಳು ಮುಖಾಮುಖಿ ಡಿಕ್ಕಿಯಾಗಿವೆ.
ಚಿತ್ರದುರ್ಗದಲ್ಲಿ ಸರಣಿ ಅಪಘಾತ; ಸ್ಥಳದಲ್ಲೇ ಇಬ್ಬರ ಸಾವು
ಬಸ್ ಅಪಘಾತವಾಗುತ್ತಿದ್ದಂತೆ ಬಸ್ ಹಿಂದೆ ಬರುತ್ತಿದ್ದ ವ್ಯಾನ್ ದಿಢೀರ್ ಬ್ರೇಕ್ ಹಾಕಿದ್ದರಿಂದ, ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಕೆಳಗೆ ಇಳಿದಿದೆ. ಬಸ್ ಗಳಲ್ಲಿದ್ದ 40 ಪ್ರಯಾಣಿಕರಿಗೂ ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಚನ್ನಗಿರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ.