ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗನ ಕೈಗೆ ಸ್ಟೇರಿಂಗ್ ಕೊಟ್ಟು ಕೆಲಸ ಕಳೆದುಕೊಂಡ ಕೆಎಸ್‌ಆರ್‌ಟಿಸಿ ಚಾಲಕ

|
Google Oneindia Kannada News

Recommended Video

ಮಂಗನ ಕೈಯಲ್ಲಿ ಬಸ್ ಸ್ಟೇರಿಂಗ್ ನೀಡಿದ ಚಾಲಕ- ಕೆಲಸದಿಂದ ಅಮಾನತು | Oneindia Kannada

ದಾವಣಗೆರೆ, ಅಕ್ಟೋಬರ್ 6: ಕೆಎಸ್‌ಆರ್‌ಟಿಸಿ ಚಾಲಕನೊಬ್ಬ ಬಸ್‌ನ ಸ್ಟೇರಿಂಗ್ ಮಂಗನ ಕೈಗೆ ಕೊಟ್ಟು ತನ್ನ ನೌಕರಿಗೆ ಕುತ್ತು ತಂದುಕೊಂಡಿದ್ದಾನೆ.

ಮಂಗನ ಕೈಗೆ ಮಾಣಿಕ್ಯ ಕೊಟ್ಟಂತೆ ಎನ್ನುವ ಗಾದೆಯೇ ಇಲ್ಲವೇ, ಎಲ್ಲಾ ತಿಳಿದು ಹೋಗಿ ಹೋಗಿ ಮಂಗನ ಕೈಗೆ ಬಸ್ ಸ್ಟೇರಿಂಗ್ ಕೊಟ್ಟಿದಾರಲ್ಲ ಡ್ರೈವರ್‌ಗೆ ಏನನ್ನಬೇಕು. ಪ್ರಾಣಿಗಳ ಬಗ್ಗೆ ಎಷ್ಟೇ ಕಾಳಜಿ ಇರಲಿ ಆದರೆ ಬಸ್‌ನಲ್ಲಿ ನೂರಾರು ಮಂದಿ ಪ್ರಯಾಣಿಕರಿರುತ್ತಾರೆ ಅವರ ಜೀವದ ಗತಿಯೇನು ಎನ್ನುವುದನ್ನು ಆಲೋಚಿಸಬೇಕಿತ್ತು.

ಸಾಮಾಜಿಕ ಜಾಲತಾಣದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಚಾಲಕನೊಬ್ಬ ಬಸ್ ನಲ್ಲಿ ಕುಳಿತಾಗ ಮಂಗನ ಕೈಗೆ ಸ್ಟೇರಿಂಗ್ ಕೊಟ್ಟು ಮಂಗ ಬಸ್ ಓಡಿಸುತ್ತಿದ್ದ ದೃಶ್ಯ ವ್ಯಾಪಕ ಟೀಕೆಗೆ ಒಳಗಾಗಿತ್ತು.

ಮಂಗಳೂರಿನಲ್ಲಿ ಮನೆ ಮಾತಾಯ್ತು ಸೆಕ್ಯೂರಿಟಿ ಗಾರ್ಡ್, ಕೋತಿಯ ಫ್ರೆಂಡ್ ಶಿಪ್ ಮಂಗಳೂರಿನಲ್ಲಿ ಮನೆ ಮಾತಾಯ್ತು ಸೆಕ್ಯೂರಿಟಿ ಗಾರ್ಡ್, ಕೋತಿಯ ಫ್ರೆಂಡ್ ಶಿಪ್

ಈ ಹಿನ್ನೆಲೆಯಲ್ಲಿ ಕೆಎಸ್ ಆರ್ ಟಿಸಿ ಎಂಬ ದಾವಣಗೆರೆ ವಿಭಾಗದ ಕೆಎಸ್‌ಆರ್‌ಟಿಸಿ ಬಸ್ ಚಾಲಕನನ್ನು ಸೇವೆಯಿಂದ ಅಮಾನತುಗೊಳಿಸಿದೆ. ಕಳೆದ ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಕೋತಿಯೊಂದು ಕೆಎಸ್‌ಆರ್‌ಟಿಸಿ ಬಸ್ ಓಡಿಸುತ್ತಿರುವ ದೃಶ್ಯ ವೈರಲ್ ಆಗಿತ್ತು. ಸುಮಾರು ಮೂರ್ನಾಲ್ಕು ನಿಮಿಷಗಳ ಕಾಲ ಚಾಲಕನ ಜತೆಗೆ ಕುಳಿತಿದ್ದ ಕೋತಿ ಸ್ಟೇರಿಂಗ್ ನಿಯಂತ್ರಿಸುತ್ತಿತ್ತು.

Monkey drives bus, conductor loses job

ಕೋತಿಯೊಂದು ಬಸ್ ಓಡಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಿತ್ತಲ್ಲದೆ ಅದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಘಟನೆ ಅಕ್ಟೋಬರ್ 1 ರಂದು ಕೆಎಸ್‌ಆರ್‌ಟಿಸಿ ಗಮನಕ್ಕೆ ಬಂದಿದ್ದು, ದಾವಣಗೆರೆ ಯಿಂದ ಭರಮಸಾಗರ ನಡುವೆ ಬಸ್ ಓಡಿಸುತ್ತಿದ್ದ ಪ್ರಕಾಶ್ ಎಂಬ ಚಾಲಕನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಪ್ರತಿನಿತ್ಯ ದಾವಣಗೆರೆಯಿಂದ ಭರಮಸಾಗರಕ್ಕೆ ಸಂಚರಿಸುವ ಬಸ್ ನಲ್ಲಿ ಶಿಕ್ಷಕರೊಬ್ಬರು ತಮ್ಮ ಕೋತಿಯನ್ನು ತಮ್ಮ ಜತೆಗೆ ಕರೆದುಕೊಂಡು ಪ್ರಯಾಣಿಸುತ್ತಿದ್ದರು. ಹೀಗಿರುವಾಗಲೇ ಒಂದು ದಿನ ಚಾಲಕ ಬಸ್ ಓಡಿಸುತ್ತಿರುವಾಗ ಮಂಗ ಚಾಲಕನ ತೊಡೆಯ ಮೇಲೆ ಏರಿ ಕುಳಿತು ಸ್ಟೇರಿಂಗ್ ನಿಯಂತ್ರಿಸಲು ಮುಂದಾಯಿತು ಅದನ್ನು ಪ್ರೋತ್ಸಾಹಿಸಿದ ಚಾಲಕ ಮಂಗನ ಕೈಗೆ ಸ್ಟೇರಿಂಗ್ ಕೊಟ್ಟು ಕೆಲ ನಿಮಿಷಗಳ ಕಾಲ ಬಸ್ ಓಡಿಸಲು ಅನುವು ಮಾಡಿಕೊಟ್ಟಿದ್ದ.

ನರಳಾಡುತ್ತಿದ್ದ ಕೋತಿಗೆ ನೆರವಾಗಿ, ಆಸರೆಯಾದ ಪೊಲೀಸ್ ಅಧಿಕಾರಿ! ನರಳಾಡುತ್ತಿದ್ದ ಕೋತಿಗೆ ನೆರವಾಗಿ, ಆಸರೆಯಾದ ಪೊಲೀಸ್ ಅಧಿಕಾರಿ!

ಇದನ್ನು ಸಹಪ್ರಯಾಣಿಕರೊಬ್ಬರು ಮೊಬೈಲ್ ನಲ್ಲಿ ಚಿತ್ರೀಕರಿಸುತ್ತಿದ್ದರು. ಆದರೆ ಮಂಗ ಬಸ್ ಓಡಿಸುತ್ತಿದ್ದರೆ ಯಾರೊಬ್ಬರೂ ಅದಕ್ಕೆ ವಿರೋಧ ವ್ಯಕ್ತಪಡಿಸಿರಲಿಲ್ಲ. ಇದೀಗ ಸಾಮಾಜಿಕ ಜಾಲತಾಣದ ಮೂಲಕ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕೆಲ ಪ್ರಯಾಣಿಕರು ಚಾಲಕ ಪ್ರಕಾಶ್ ಮುಗ್ದನಾಗಿದ್ದು, ಪ್ರಾಣಿಗಳ ಮೇಲೆ ಅಪಾರ ಪ್ರೀತಿಯನ್ನು ಹೊಂದಿದ್ದಾನೆ, ಅದರ ಮೇಲಿನ ಪ್ರೇತಿಗೆ ಅನುವು ಮಾಡಿಕೊಟ್ಟಿದ್ದಾನೆ ಹೊರತು ಬೇರೇನಿಲ್ಲ, ಸಮರ್ಥಿಸಿಕೊಂಡಿದ್ದರೆ ಇನ್ನು ಕೆಲವರು ಚಾಲಕರಿಗಿಂತ ಮಂಗನೇ ಬಸ್ ಚೆನ್ನಾಗಿ ಓಡಿಸಿದೆ ಎಂದು ಟಾಂಟ್ ಕೊಟ್ಟಿದ್ದಾರೆ.

ಒಟ್ಟಾರೆ ಘಟನೆಯಿಂದ ಚಾಲಕನ ಕೆಲಸಕ್ಕೆ ಕುತ್ತು ಬಂದಿದ್ದು, ಈ ಬಗ್ಗೆ ಕೆಎಸ್‌ಆರ್‌ಟಿಸಿ ವಿಭಾಗೀಯ ಪರೀಕ್ಷಣಾ ಅಧಿಕಾರಿ ತನಿಖೆಗೆ ಆದೇಶಿಸಿದ್ದಾರೆ. ತನಿಖೆ ಮುಗಿಯುವವರೆಗೂ ಆರೋಪಿ ಚಾಲಕನಿಗೆ ಕೆಲಸಕ್ಕೆ ಹಾಜರಾಗದಂತೆ ಸೂಚಿಸಲಾಗಿದೆ.

English summary
A KSRTC bus driver was suspended from duties who was handed over the bus staring for fun in Davangere division.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X