ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊನ್ನಾಳಿ ಕ್ಷೇತ್ರದಲ್ಲಿ ಕೊರೊನಾ ಸೋಂಕಿನ ಬಗ್ಗೆ ಎಚ್ಚರಿಕೆ ನೀಡಿದ ಶಾಸಕ ಎಂಪಿಆರ್

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಜುಲೈ 17: ಬೆಂಗಳೂರಿನಿಂದ‌ ಹೊನ್ನಾಳಿ ತಾಲ್ಲೂಕಿನ ಸೋಮನಮಲ್ಲಾಪುರ ಗ್ರಾಮಕ್ಕೆ ಬಂದ ಇಬ್ಬರು ಯುವಕರಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾದ ಹಿನ್ನೆಲೆ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಗ್ರಾಮಸ್ಥರಿಗೆ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಿದರು.

Recommended Video

Bengaluru Lockdown ಮುಂದಿನ ವಾರವೂ ಇರುತ್ತಾ ? | Oneindia Kannada

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸೋಮನಮಲ್ಲಾಪುರ ಹಾಗೂ ಎಚ್.ಗೋಪಗೊಂಡನಹಳ್ಳಿ ಗ್ರಾಮದಲ್ಲಿ ಇಂದು ಕ್ಷೇತ್ರದ ಶಾಸಕ ರೇಣುಕಾಚಾರ್ಯ ಅವರು ಸೀಲ್ ಡೌನ್ ನಲ್ಲಿನ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಿದರು.

ಕೊರೊನಾ ವೈರಸ್ ಸೋಂಕಿಗೆ ಹೊನ್ನಾಳಿ ಮಠಾಧೀಶ ವಿಶ್ವಾರಾಧ್ಯ ಸ್ವಾಮೀಜಿ ಸಾವುಕೊರೊನಾ ವೈರಸ್ ಸೋಂಕಿಗೆ ಹೊನ್ನಾಳಿ ಮಠಾಧೀಶ ವಿಶ್ವಾರಾಧ್ಯ ಸ್ವಾಮೀಜಿ ಸಾವು

ಹೊನ್ನಾಳಿ ತಾಲೂಕಿನ ಸೋಮನಮಲ್ಲಾಪುರ ಹಾಗೂ ಎಚ್.ಗೋಪಗೊಂಡನಹಳ್ಳಿ ಗ್ರಾಮಕ್ಕೆ ರಾಜ್ಯದಲ್ಲಿ ಅತೀ ಹೆಚ್ಚು ಸೋಂಕು ಇರುವ ಬೆಂಗಳೂರಿನಿಂದ ಬಂದ ಇಬ್ಬರು ಯುವಕರಿಗೆ ಕೊರೊನಾ ಪಾಸಿಟಿವ್ ದೃಢವಾಗಿತ್ತು.

MLA Renukacharya Who Warned About Coronavirus Infection In Honnali

ಈ ಹಿನ್ನೆಲೆಯಲ್ಲಿ ಗ್ರಾಮಕ್ಕೆ ತೆರಳಿ ಜನರಿಗೆ ಮಾಸ್ಕ್ ನೀಡಿ ಕೊರೊನಾ ಬಗ್ಗೆ ಮುನ್ನೆಚ್ಚರಿಕೆಯಿಂದ ಇರುವಂತೆ ಜಾಗೃತಿ ಮೂಡಿಸಿದರು.

ಲಾಕ್ ಡೌನ್ ಹಿನ್ನೆಲೆ: ಬೆಂಗಳೂರಿನಿಂದ ದಾವಣಗೆರೆಗೆ ಬಂದಿರುವ ಜನರೆಷ್ಟು?ಲಾಕ್ ಡೌನ್ ಹಿನ್ನೆಲೆ: ಬೆಂಗಳೂರಿನಿಂದ ದಾವಣಗೆರೆಗೆ ಬಂದಿರುವ ಜನರೆಷ್ಟು?

ಎಚ್.ಗೋಪಗೊಂಡನಹಳ್ಳಿ ಗ್ರಾಮದ ಸೀಲ್ ಡೌನ್ ನಲ್ಲಿದ್ದ 16 ಕುಟುಂಬಗಳಿಗೆ ಹಾಗೂ ಸೋಮನಮಲ್ಲಾಪುರ ಗ್ರಾಮದ ಒಂದು ಕುಟುಂಬಕ್ಕೆ ಆಹಾರದ ಕಿಟ್ ನೀಡಿದರು.

MLA Renukacharya Who Warned About Coronavirus Infection In Honnali

ಗ್ರಾಮದ ಪ್ರತಿಯೊಂದು ಮನೆಗೂ ಮೂರರಿಂದ ನಾಲ್ಕು ಕಿಟ್ ನೀಡಿ ವೃದ್ಧೆಗೆ ಮಾಸ್ಕ್ ಹಾಕುವ ಮೂಲಕ ಪ್ರತಿಯೊಬ್ಬರೂ ಮಾಸ್ಕ್ ಹಾಕಿಕೊಂಡು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ವಿನಾಕಾರಣ ಜನರು ಮನೆಯಿಂದ ಹೊರ ಬಾರದು, ಹಳ್ಳಿ ಹಳ್ಳಿಗೂ ಕೊರೊನಾ ಹೆಜ್ಜೆ ಇಡುತ್ತಿದ್ದು, ಗ್ರಾಮಸ್ಥರು ಜಾಗರೂಕತೆಯಿಂದ ಇರುವಂತೆ ಮನವಿ ಮಾಡಿದರು. ಗ್ರಾಮದ ಪ್ರತಿಯೊಂದು‌ ಮನೆಗೂ ಭೇಟಿ ನೀಡಿ ಕೊರೊನಾ ಸೋಂಕಿನ ಬಗ್ಗೆ ತಿಳಿ ಹೇಳುವಂತೆ ಸ್ಥಳದಲ್ಲೇ ಅಧಿಕಾರಿಗಳಿಗೆ ಸೂಚಿಸಿದರು.

English summary
Honnali MLA Renukacharya, a distributed food kits to families in Sealdown Area today of Somanamallapura and H. Gopagandanahalli.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X