ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸುಭದ್ರ ಸರ್ಕಾರಕ್ಕಾಗಿ ಕೆಂಡ ಹಾರಿದ ಹೊನ್ನಾಳಿ ಶಾಸಕ ರೇಣುಕಾಚಾರ್ಯ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ಹೊನ್ನಾಳಿ, ಆಗಸ್ಟ್ 28: ಹೊನ್ನಾಳಿ ತಾಲ್ಲೂಕಿನ ಹಿರೇಕಲ್ಮಠದ ಪವಿತ್ರ ಪುಣ್ಯ ಕ್ಷೇತ್ರ ಪರಮ ಪೂಜ್ಯ ಚನ್ನಪ್ಪ ಸ್ವಾಮೀಜಿಯವರ ಶ್ರೀಮಠದ ಸನ್ನಿಧಿಯಲ್ಲಿ ಪೂಜ್ಯ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳವರ ಉಪಸ್ಥಿತಿಯಲ್ಲಿ ಶ್ರೀವೀರಭದ್ರೇಶ್ವರ ದೇವರ ಕೆಂಡದಾರ್ಚನೆ ಶ್ರೀಮಠದ ಸನ್ನಿಧಿಯ ಆವರಣದಲ್ಲಿ ಭಕ್ತ ಸಮೂಹದ ನಡುವೆ ಸಂಭ್ರಮದಿಂದ ನಡೆಯಿತು.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ನಡೆದ ಹಿರೇಕಲ್ಮಠದ ಜಾತ್ರ ಮಹೋತ್ಸವದಲ್ಲಿ ಶಾಸಕ ರೇಣುಕಾಚಾರ್ಯ ಕೆಂಡ ಹಾರಿ ಭಕ್ತಿ ತೋರಿಸಿದ್ದು ವಿಶೇಷವಾಗಿತ್ತು. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಸುಭದ್ರವಾಗಿರಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾಗಿ ರೇಣುಕಾಚಾರ್ಯ ಹೇಳಿದರು.

ಮಳೆಯಾದರೂ ದಾವಣಗೆರೆಯಲ್ಲಿ ನಡೆಯಿತು ಮಳೆಯಾದರೂ ದಾವಣಗೆರೆಯಲ್ಲಿ ನಡೆಯಿತು "ಅಜ್ಜಿ ಹಬ್ಬ"

‌ಪ್ರತಿ ವರ್ಷದಂತೆ ಹಿರೇಕಲ್ಮಠದ ನಡೆದ ಜಾತ್ರಾ ಮಹೋತ್ಸವಕ್ಕೆ ಭಾಗವಹಿಸಿದ ರಥೋತ್ಸವವನ್ನು ನೆರವೇರಿಸಿದರು. ಸಕಲವಾದ್ಯ ಮೇಳಗಳೊಂದಿಗೆ ಶ್ರೀವೀರಭದ್ರೇಶ್ವರ ಸ್ವಾಮಿ ಸ್ವಾಮಿ ದೇವರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಹೊತ್ತು, ವೀರಗಾಸೆ, ಒಡಪು ಹಾಡುತ್ತ, ಶ್ರೀ ಮಠದ ಸುತ್ತ ಉತ್ಸವ ನಡೆಸಿ, ಭಕ್ತ ಮಂಡಳಿಯ ಸಮ್ಮುಖದಲ್ಲಿ ಜರುಗಿತು.

 ಚನ್ನಮಲ್ಲಿಕಾರ್ಜುನ ಸ್ವಾಮೀಜಿಯವರ ಸನ್ನಿಧಿ

ಚನ್ನಮಲ್ಲಿಕಾರ್ಜುನ ಸ್ವಾಮೀಜಿಯವರ ಸನ್ನಿಧಿ

ಪೂಜ್ಯ ಚನ್ನಮಲ್ಲಿಕಾರ್ಜುನ ಸ್ವಾಮೀಜಿಯವರ ಸನ್ನಿಧಿಯಲ್ಲಿ ನಡೆದ ಕೆಂಡಾರ್ಚನೆ ಸೇವೆಯಲ್ಲಿ ಪಾಲ್ಗೊಂಡು ಸ್ವತಃ ಶಾಸಕರೇ ಕೆಂಡವನ್ನು ಹಾರಿದ್ರು. ಪ್ರತಿ ವರ್ಷ ನಡೆಯುವ ಜಾತ್ರಗೆ ತಪ್ಪದೇ ಭಾಗಿಯಾಗುವ ಶಾಸಕ ರೇಣುಕಾಚಾರ್ಯ ರವರು ಶ್ರೀಗಳಿಗೆ ಶ್ರದ್ದಾ ಭಕ್ತಿಯಿಂದ ಪೂಜೆ ಸಲ್ಲಿಸಿ ಅನ್ನಸಂತರ್ಪಣೆಯನ್ನು ನೆರವೇರಿಸುತ್ತಾರೆ.

ಇನ್ನು ಹಿರೇಕಲ್ಮಠ ಶ್ರೀ ಗಳ ಜಾತ್ರಾಮಹೋತ್ಸವಕ್ಕೆ ಸಾವಿರಾರು ಭಕ್ತರು ಭಾಗಿಯಾಗಿ ರಥೋತ್ರವವನ್ನು ನೆರವೇರಿಸಿ ನಂತರ ಹರಕೆ ಮಾಡಿಕೊಂಡ ಭಕ್ತರು ಕೆಂಡದ ಹೊಂಡವನ್ನು ಹಾದು ಹೋಗಿ ತಮ್ಮ ಇಷ್ಟಾರ್ಥ ಗಳನ್ನು ನೆರವೇರಿಸುಯವಂತೆ ಪ್ರಾರ್ಥನೆ ಮಾಡಿಕೊಳ್ಳುತ್ತಾರೆ.

ಅಗ್ನಿಕುಂಡದ ಮೇಲೆ ನಡೆದ ರೇಣುಕಾಚಾರ್ಯ

ಅಗ್ನಿಕುಂಡದ ಮೇಲೆ ನಡೆದ ರೇಣುಕಾಚಾರ್ಯ

ಶಾಸಕ ಎಂ.ಪಿ.ರೇಣುಕಾಚಾರ್ಯ ಪ್ರತಿ ವರ್ಷದ ಪದ್ದತಿಯಂತೆ ಮಠಕ್ಕೆ ಆಗಮಿಸಿ, ಸಾವಿರಾರು ಭಕ್ತರ ನಡುವೆ ಭಗವಂತನ ನಾಮ ಸ್ಮರಣೆ ಮಾಡಿ ಅಗ್ನಿಕುಂಡದ ಮೇಲೆ ನಡೆದು ತಮ್ಮ ಸೇವೆಯನ್ನು ಸಮರ್ಪಿಸಿದರು.

ನಂತರ ಮಾತನಾಡಿದ ಅವರು," ನಮ್ಮ ಸನಾತನ ಸಂಸ್ಕೃತಿ ವಿಶ್ವದಲ್ಲಿಯೇ ಪವಿತ್ರ ಸಂಸ್ಕೃತಿಯಾಗಿದ್ದು ದೇವರು, ಧರ್ಮಗಳ ನಂಬಿಕೆ ಮತ್ತು ನಮ್ಮ ಸನಾತನ ಹಿರಿಯರು ಮನುಕುಲದ ಏಳಿಗೆಗಾಗಿ ಸಂತರು, ಶರಣರು, ದಾರ್ಶನಿಕರು ಬಿಟ್ಟು ಹೋದ ಅನೇಕ ಸಂಸ್ಕೃತಿಯನ್ನು ನಾವಿಂದು 21ನೇ ಶತಮಾನದಲ್ಲೂ ಉಳಿಸಿ ಬೆಳೆಸುತ್ತಿರುವುದು ಹೆಮ್ಮೆಯ ವಿಚಾರ. ಸಕಲ 85 ಲಕ್ಷ ಜೀವರಾಶಿಗಳಿಗೂ ಮತ್ತು ಲೋಕ ಕಲ್ಯಾಣಕ್ಕಾಗಿ ಇಂತಹ ಧಾರ್ಮಿಕ ಸಂಸ್ಕೃತಿಯನ್ನು ದಿನನಿತ್ಯ ಆಚರಿಸಿ ನಮ್ಮ ಮುಂದಿನ ಪೀಳಿಗೆಗೂ ಸಾಂಪ್ರದಾಯಿಕ ಪೂಜಾ ವಿಧಿಗಳನ್ನು ಕಲಿಸಬೇಕಾಗಿದೆ" ಎಂದರು.

ದಾವಣಗೆರೆಯಲ್ಲಿ ಪುಷ್ಪ ಪ್ರದರ್ಶನ; ಗಾಜಿನ ಮನೆಯಲ್ಲಿ ಅರಳಿದ ಐಫೆಲ್ ಟವರ್ದಾವಣಗೆರೆಯಲ್ಲಿ ಪುಷ್ಪ ಪ್ರದರ್ಶನ; ಗಾಜಿನ ಮನೆಯಲ್ಲಿ ಅರಳಿದ ಐಫೆಲ್ ಟವರ್

ಅನ್ನ ಪ್ರಸಾದವನ್ನು ಉಣಬಡಿಸಿದರು

ಅನ್ನ ಪ್ರಸಾದವನ್ನು ಉಣಬಡಿಸಿದರು

ನಂತರ ಪೂಜ್ಯರ ಉಪಸ್ಥಿತಿಯಲ್ಲಿ ಜರುಗಿದ ಮಹಾ ರಥೋತ್ಸವದಲ್ಲಿ ಪಾಲ್ಗೊಂಡು ಹಿರೇಕಲ್ಮಠದಿಂದ ಖಾಸಗಿ ಬಸ್ ನಿಲ್ದಾಣದವರೆಗೆ ಭಕ್ತರ ನಡುವೆ ಹಗ್ಗ ಜಗ್ಗಿ ರಥ ಎಳೆದು ಭಕ್ತ ಸೇವೆ ಸಮರ್ಪಿಸಿ, ಮಠದ ಆವರಣದಲ್ಲಿ ರಥೋತ್ಸವಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಏರ್ಪಡಿಸಿದ್ದ ಅನ್ನ ದಾಸೋಹದಲ್ಲಿ ಪಾಲ್ಗೊಂಡು ಭಕ್ತರಿಗೆ, ಸ್ವಯಂ ಸೇವಕರೊಂದಿಗೆ ಅನ್ನ ಪ್ರಸಾದವನ್ನು ಉಣಬಡಿಸಿದರು.

ಶ್ರೀವೀರಭದ್ರೇಶ್ವರ ಸ್ವಾಮಿ ದೇವರ ಉತ್ಸವ

ಶ್ರೀವೀರಭದ್ರೇಶ್ವರ ಸ್ವಾಮಿ ದೇವರ ಉತ್ಸವ

ಕೆಂಡದಾರ್ಚನೆಗೆ ಮಂಗಳ ವಾದ್ಯ, ವೀರಗಾಸೆ ಕುಣಿತದಂತಹ ಸಾಂಸ್ಕೃತಿಕ ವಾದ್ಯ ಮೇಳಗಳು ಮೆರಗು ನೀಡಿದವು. ಸಾವಿರಾರು ಭಕ್ತರು ಭಾಗವಹಿಸಿದ್ದರು. ಸಕಲವಾದ್ಯ ಮೇಳಗಳೊಂದಿಗೆ ಶ್ರೀವೀರಭದ್ರೇಶ್ವರ ಸ್ವಾಮಿ ದೇವರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಹೊತ್ತು, ವೀರಗಾಸೆ, ಒಡಪು ಹಾಡುತ್ತ, ಶ್ರೀ ಮಠದ ಸುತ್ತ ಉತ್ಸವ ನಡೆಸಿ, ಭಕ್ತ ಮಂಡಳಿಯ ಸಮ್ಮುಖದಲ್ಲಿ ಜರುಗಿತು.

English summary
MLA Renukacharya Performed special prayer at Honnali Hirekalmatha jatra in front of Odeyar Chandrashekhara Shivaacharya Mahaaswami, Davangere District.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X