• search
 • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

"ವಾಟಾಳ್ ನಾಗರಾಜ್, ನಿನಗೆ ತಾಕತ್ತಿದ್ದರೇ ರಾಜ್ಯ ಬಂದ್ ಮಾಡು''

By ದಾವಣಗೆರೆ ಪ್ರತಿನಿಧಿ
|

ದಾವಣಗೆರೆ, ನವೆಂಬರ್ 25: ವಾಟಾಳ್ ನಾಗರಾಜ್, ನಿನಗೆ ತಾಕತ್ತಿದ್ದರೇ ಈ ರಾಜ್ಯ ಬಂದ್ ಮಾಡಲಿ ಎಂದು ದಾವಣಗೆರೆಯಲ್ಲಿ ಬಿಜೆಪಿ ಪಕ್ಷದ ಹೊನ್ನಾಳಿ ಶಾಸಕ ಎಂ‌.ಪಿ‌ ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಾವಣಗೆರೆ ನಗರದ ಅಪೂರ್ವ ಹೋಟೆಲ್ ನಲ್ಲಿ ಮಾತನಾಡಿದ ಅವರು, ಸಿಎಂ ಬಗ್ಗೆ ಕೇವಲವಾಗಿ ಮಾತನಾಡಿದರೆ ಹುಷಾರ್ ಎಂದು ಎಚ್ಚರಿಕೆ ನೀಡಿದರು.

"ಪರಿವರ್ತನೆ ಮತ್ತು ರಾಷ್ಟ್ರಧಾರೆಯ ಮೂಲಕ ಭಾರತ ಕಟ್ಟುವುದು ಪಕ್ಷದ ಗುರಿ''

ಕನ್ನಡಪರ ಸಂಘಟನೆಗಳ ಬಂದ್ ಯಶಸ್ವಿ ಆಗದಂತೆ ನೋಡಿಕೊಳ್ಳುತ್ತೇವೆ ಎಂದರು. ವಾಟಾಳ್ ನಾಗರಾಜ್ ಒಬ್ಬ ಬುಟಾಟಿಕೆ ವ್ಯಕ್ತಿ. ಎಷ್ಟು ಅಕ್ರಮ ಮಾಡಿದ್ದಾರೆ ಎನ್ನುವುದು ಗೊತ್ತಿದೆ. ಮಗಳ, ಅಳಿಯನ ಹೆಸರಿನಲ್ಲಿ ಎಷ್ಟು ಅಕ್ರಮ ಗಳಿಕೆ ಮಾಡಿದ್ದಾರೆ ಜೊತೆಗೆ ಮೈಸೂರಿನ ವರುಣ ಕ್ಷೇತ್ರದಲ್ಲಿ 70 ಎಕರೆ ಭೂಮಿ ಅಕ್ರಮವಾಗಿ ವಶ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ಅವರು ಎಸ್ಸಿ-ಎಸ್.ಟಿ ಜಮೀನುಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ, ಅವರ ಜಮೀನಿನಲ್ಲಿ ಕೆಲಸ ಮಾಡುತ್ತಿರುವುದು ತಮಿಳರು, ಆದರೆ ಕನ್ನಡದ ನಾಡು, ನುಡಿ ಬಗ್ಗೆ ಮಾತನಾಡುತ್ತಾರೆ ಎಂದು ಹರಿಹಾಯ್ದರು.

   Virat Kohli ಪರ ಬ್ಯಾಟ್ ಬೀಸಿದ Harbhajan singh | Oneindia Kannada

   ಬೆಂಗಳೂರಿನಲ್ಲಿ ಎಷ್ಟು ಸೈಟ್ ಮಾಡಿಕೊಂಡಿದ್ದಾರೆ ಎನ್ನುವುದರ ಬಗ್ಗೆ ನನ್ನ ಕಡೆ ದಾಖಲೆಗಳಿವೆ. ಸಿಎಂಗೆ ಬಗ್ಗೆ ಕೆಟ್ಟ ಪದ ಬಳಕೆ ಮಾಡಿದರೆ ಹುಷಾರ್ ಎಂದು ವಾಟಾಳ್ ನಾಗರಾಜ್ ಅವರಿಗೆ ಎಚ್ಚರಿಕೆ ನೀಡಿದರು. ಯಾರು ಯಾರ ಕಾಲ್ ಹಿಡಿದು ಕೆಲಸ ಮಾಡಿಕೊಂಡಿದ್ದೀರಿ ಎನ್ನುವುದು ಗೊತ್ತಿದೆ. ನಮ್ಮ ಮುಖ್ಯಮಂತ್ರಿಗಳು ಕೆಲಸ ಮಾಡಿಕೊಟ್ಟಾಗ ಕೊಂಡಾಡಿದ್ದೀರಿ. ವಾಟಾಳ್ ನಾಗರಾಜ್ ವಿರುದ್ದ ರೇಣುಕಾಚಾರ್ಯ ಕಿಡಿಕಾರಿದರು.

   English summary
   BJP's Honnali MLA MP Renukacharya challenged To Vatal Nagaraj in Davanagere.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X