• search
 • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೋವಿಡ್ ಸೋಂಕಿತರ ಜೊತೆ ಶಾಸಕ ರೇಣುಕಾಚಾರ್ಯ ದಂಪತಿ ಮಸ್ತ್ ಡ್ಯಾನ್ಸ್

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಮೇ 27: ಕೋವಿಡ್ ಕೇರ್ ಸೆಂಟರ್‌ನಲ್ಲಿ ಸೋಂಕಿತರಿಗೆ ಆತಸ್ಥೈರ್ಯ ತುಂಬಲು ಹೊನ್ನಾಳಿ ಶಾಸಕ ಎಂ.‌ಪಿ ರೇಣುಕಾಚಾರ್ಯ ಮತ್ತು ಅವರ ಪತ್ನಿ ನೃತ್ಯ ಮಾಡಿ ಹುರಿದುಂಬಿಸಿದರು.

ನ್ಯಾಮತಿ ತಾಲ್ಲೂಕಿನ ಮಾದನಬಾವಿಯಲ್ಲಿರುವ ಕೋವಿಡ್ ಕೇರ್ ಸೆಂಟರ್‌ನಲ್ಲಿ 180 ಕೋವಿಡ್ ಸೋಂಕಿತರಿದ್ದು, ಶಾಸಕ ರೇಣುಕಾಚಾರ್ಯ ಮತ್ತು ಅವರ ಪತ್ನಿ ಸುಮಾ ರೇಣುಕಾಚಾರ್ಯ ಸತ್ಯಹರಿಶ್ಚಂದ್ರ ಚಿತ್ರದ "ಕುಲದಲ್ಲಿ ಮೇಲಾವುದೋ ಹುಚ್ಚಪ್ಪಾ' ಹಾಡಿಗೆ ಸಖತ್ ಸ್ಟೆಪ್ ಹಾಕಿ ಮನರಂಜಿಸಿದರು.

ವಿಡಿಯೋ ವೈರಲ್: ಕೊರೊನಾ ಸೋಂಕಿತರ ಜೊತೆ ಶಾಸಕ ರೇಣುಕಾಚಾರ್ಯ ಸಖತ್ ಡ್ಯಾನ್ಸ್ ವಿಡಿಯೋ ವೈರಲ್: ಕೊರೊನಾ ಸೋಂಕಿತರ ಜೊತೆ ಶಾಸಕ ರೇಣುಕಾಚಾರ್ಯ ಸಖತ್ ಡ್ಯಾನ್ಸ್

ಬುಧವಾರ ರಾತ್ರಿಯೂ ಸಹ ಶಿವಮೊಗ್ಗ ಆರ್ಕೆಸ್ಟ್ರಾ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. "ಹೂವಾ ರೋಜಾ ಹೂವಾ', ಪೊಗರು ಚಿತ್ರದ ಹಾಡಿಗೆ ಟಪ್ಪಾಂಗುಚ್ಚಿ ಡ್ಯಾನ್ಸ್ ಮಾಡಿದ ಶಾಸಕ ರೇಣುಕಾಚಾರ್ಯ, ಕೊರೊನಾ ಸೋಂಕಿತ ಮಹಿಳೆಯರು, ಪುರುಷರಿಗೆ ಆತ್ಮಸ್ಥೈರ್ಯ ಮೂಡಿಸಿದರು.

   Yaas Cyclone: ಈ ಚಂಡಮಾರುತದಿಂದ ರಾಜ್ಯದಲ್ಲಿ ಮಳೆ ಆಗುವ ಸಾಧ್ಯತೆ!! | Oneindia Kannada

   ಅಲ್ಲಿಯೇ ಇದ್ದ ರೇಣುಕಾಚಾರ್ಯ ಪತ್ನಿ ಸುಮಾ ಸಹ "ಕುಲದಲ್ಲಿ ಮೇಲಾವುದೋ ಹುಚ್ಚಪ್ಪ' ಹಾಡಿಗೆ ನೃತ್ಯ ಮಾಡಿದರು. ಇದರಿಂದ ಸೋಂಕಿತರ ಮೊಗದಲ್ಲಿ ಮಂದಹಾಸ ಮೂಡಿತು. ಬೇಸರ ಕಳೆಯಲು ಈ ರೀತಿಯ ಕಾರ್ಯಕ್ರಮ ಏರ್ಪಡಿಸಿದ ಹೊನ್ನಾಳಿ ಶಾಸಕ ರೇಣುಕಾಚಾರ್ಯಗೆ ಸೋಂಕಿತರು ಧನ್ಯವಾದ ಅರ್ಪಿಸಿದರು‌.

   English summary
   Honnali MLA M.P Renukacharya and his wife dance and cheered at the Covid Care Center In Nyamathi.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X