• search
  • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆರು ವರ್ಷದ ಹಿಂದೆ ಮದುವೇಲಿ ಕಳೆದಿದ್ದ ವ್ಯಕ್ತಿ ವಾಟ್ಸಪ್ ಮೂಲಕ ಪತ್ತೆ

|

ದಾವಣಗೆರೆ, ಅಕ್ಟೋಬರ್ 10: ಮಾನಸಿಕ ಅಸ್ವಸ್ಥನೊಬ್ಬ ಆರು ವರ್ಷಗಳ ಹಿಂದೆ ಮದುವೆಯಲ್ಲಿ ನಾಪತ್ತೆಯಾಗಿದ್ದ, ಬಳಿಕ ಸಾಮಾಜಿಕ ಜಾಲತಾಣ ವಾಟ್ಸಪ್ ಮೂಲಕ ಕುಟುಂಬ ಸೇರಿದ ಘಟನೆ ಇದಾಗಿದೆ.

ಸಹಪಾಠಿಗೆ ಅಶ್ಲೀಲ ವಿಡಿಯೋ ಕಳುಹಿಸುತ್ತಿದ್ದ ಯುವಕ ಅರೆಸ್ಟ್ ಸಹಪಾಠಿಗೆ ಅಶ್ಲೀಲ ವಿಡಿಯೋ ಕಳುಹಿಸುತ್ತಿದ್ದ ಯುವಕ ಅರೆಸ್ಟ್

ಆರು ವರ್ಷಗಳ ಹಿಂದೆ ಮದುವೆಯ ಕಾರ್ಯಕ್ಕಾಗಿ ಕುಟುಂಬದವರ ಜತೆಗೆ ಹೋಗಿದ್ದ ವ್ಯಕ್ತಿ ಬೇರೊಂದು ಊರಲ್ಲಿ ಆಶ್ರಯ ಪಡೆದಿದ್ದ. ಅಲ್ಲದೆ ತನಗೆ ಅನ್ನ ನೀಡಿದವರು ನೆಟ್ಟಿದ್ದ ಸಸಿಗಳಿಗೆ ಪ್ರತಿನಿತ್ಯ ನೀರು ಹಾಕುತ್ತಿದ್ದ, ಇದನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದನ್ನು ನೋಡಿದ ಕುಟುಂಬಸ್ಥರು ಬಂದು ಆತನನ್ನು ಮನೆಗೆ ಕರೆದೊಯ್ದಿದ್ದಾರೆ.

ವಾಟ್ಸ್ ಆಪ್ ಸಂದೇಶ ಜೈಲು ತಲುಪಿಸಬಹುದು, ಎಚ್ಚರ! ವಾಟ್ಸ್ ಆಪ್ ಸಂದೇಶ ಜೈಲು ತಲುಪಿಸಬಹುದು, ಎಚ್ಚರ!

ಆತನ ಹೆಸರು ನರಸಿಂಹ ಮೂಲತಃ ದಾವಣಗೆರೆಯ ಗೋವಿನಕೊಪ್ಪ ಗ್ರಾಮದವನು, ಆತನಿಗೆ ಇಬ್ಬರು ಅಕ್ಕಂದಿರು ಓರ್ವ ಅಣ್ಣನೊಂದಿಗೆ ವಾಸವಾಗಿದ್ದ. ಆರು ವರ್ಷಗಳ ಹಿಂದೆ ಮದುವೆಗೆ ಹೊನ್ನಾಳಿಗೆ ತೆರಳಿದಾಗ ಅಲ್ಲಿಂದ ತಪ್ಪಿಸಿಕೊಂಡಿದ್ದ, ಮಾನಸಿಕವಾಗಿ ಅಸ್ವಸ್ಥನಾಗಿದ್ದ ನರಸಿಂಹ ಇಳಕಲ್ ಕಂಠಿ ವೃತ್ತದ ಆಸುಪಾಸು ಓಡಾಡಿಕೊಂಡಿದ್ದರು.

ಚಿನ್ನಾಭರಣ ಧರಿಸಿ ವಾಟ್ಸಾಪ್ ಡಿಪಿ ಹಾಕಿದ್ದ ಕಳ್ಳಿ ಸಿಕ್ಕಿ ಬಿದ್ದಳು ಚಿನ್ನಾಭರಣ ಧರಿಸಿ ವಾಟ್ಸಾಪ್ ಡಿಪಿ ಹಾಕಿದ್ದ ಕಳ್ಳಿ ಸಿಕ್ಕಿ ಬಿದ್ದಳು

ಈತನನ್ನು ಗಮನಿಸಿದ ಸಂಸ್ಥೆಯ ಕೆಲವು ಸದಸ್ಯರು ಹಾಗೂ ಊರಿನವರು ಒಟ್ಟಾಗಿ ಆತನಿಗೆ ಊಟದ ವ್ಯವಸ್ಥೆ ಮಾಡಿದರು. ಸಸಿಗಳನ್ನು ನೆಟ್ಟು ಅದನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ತನಿಗೆ ವಹಿಸಿದ್ದರು. ಇದೀಗ ಆರು ವರ್ಷಗಳ ಬಳಿಕ ಕುಟುಂಬವನ್ನು ಸೇರಿದ್ದು ಅವರ ಸಹೋದರ ಸಹೋದರಿಯರಿಗೆ ಸಂತಸವಾಗಿದೆ.

English summary
A mentality disabled person from Nyamathi of Davangere district has found through WhatsApp video in Ilkal of Bagalkot district after six years who was gone missing during marriage function.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X