ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆ: ಶಿಷ್ಯ ವೇತನಕ್ಕಾಗಿ ವೈದ್ಯಕೀಯ ವಿದ್ಯಾರ್ಥಿಗಳ ಪ್ರತಿಭಟನೆ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಜೂನ್ 30: ಕೋವಿಡ್ ವಾರ್ಡ್ ಗಳಲ್ಲಿ ಕೊರೊನಾ ವಾರಿಯರ್ಸ್ ಗಳಾಗಿ ಸೇವೆ ಸಲ್ಲಿಸುತ್ತಿರುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸರ್ಕಾರ ಶಿಷ್ಯ ವೇತನ ನೀಡದೇ ಸತಾಯಿಸುತ್ತಿದ್ದು, ಇದರಿಂದ ವೈದ್ಯಕೀಯ ವಿದ್ಯಾರ್ಥಿಗಳು ಪರದಾಟ ಅನುಭವಿಸುತ್ತಿದ್ದಾರೆ. ಶಿಷ್ಯ ವೇತನಕ್ಕಾಗಿ ಹೋರಾಟದ ಮೊರೆ ಹೋಗಿದ್ದು, ದಾವಣಗೆರೆ ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

Recommended Video

ಮುಂಬೈ, ದೆಹಲಿ ತೋರಿಸಿ 'ಚಂದಮಾಮ' ಕಥೆ ಹೇಳುತ್ತಿರುವ ಯಡಿಯೂರಪ್ಪ | Yediyurappa | Karnataka | Oneindia Kannada

ತಮ್ಮ ಪ್ರಾಣದ ಹಂಗನ್ನು ತೊರೆದು ಕೊರೊನಾ ವೈರಸ್ ವಿರುದ್ಧ ಹೋರಾಟ ಮಾಡುವ ವಾರಿಯರ್ಸ್ ಗಳು, ಶಿಷ್ಯವೇತನ ಸಿಗುತ್ತದೆ, ಅದರಲ್ಲೇ ಓದು ಮುಗಿಸಿ ವೈದ್ಯರಾಗಬೇಕು ಎಂಬ ಕನಸು ಕಂಡಿರುತ್ತಾರೆ. ಅದೆಷ್ಟೊ ಬಡ ವಿದ್ಯಾರ್ಥಿಗಳು ತಮ್ಮ ಶಿಷ್ಯ ವೇತನದಿಂದಲೇ ಓದು ಮುಗಿಸುತ್ತಾರೆ.

ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಹತ್ವದ ಘಟ್ಟ: ಎಂಪಿಆರ್ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಹತ್ವದ ಘಟ್ಟ: ಎಂಪಿಆರ್

ದಾವಣಗೆರೆಯ ಜೆಜೆಎಂ ಮೆಡಿಕಲ್ ಕಾಲೇಜಿನಲ್ಲಿ ಗೃಹ ವೈದ್ಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಕಷ್ಟಪಟ್ಟು ಓದಿ, ಸರ್ಕಾರಿ ಕೋಟಾದಡಿ ಪ್ರವೇಶ ಗಿಟ್ಟಿಸಿಕೊಂಡವರು. ಶಿಷ್ಯ ವೇತನ ನೀಡದೆ ಸರ್ಕಾರ ಹಲವು ವರ್ಷಗಳಿಂದ ಎಳ್ಳು ನೀರು ಬಿಡುತ್ತಲೇ ಬರುತ್ತಿದೆ.

ಶಿಷ್ಯ ವೇತನ ಕೇವಲ ಆಶ್ವಾಸನೆಗೆ ಮಾತ್ರ

ಶಿಷ್ಯ ವೇತನ ಕೇವಲ ಆಶ್ವಾಸನೆಗೆ ಮಾತ್ರ

ಶಿಷ್ಯ ವೇತನ ಪಾವತಿಸುವಂತೆ ಕಳೆದ 16 ತಿಂಗಳಿನಿಂದಲೂ ಹೋರಾಟ ಮಾಡುತ್ತಲೇ ಬಂದಿದ್ದೇವೆ ಆದರೆ ನಮ್ಮ ಹೋರಾಟಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ವೈದ್ಯಕೀಯ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ದಾವಣಗೆರೆಯ ಕೋವಿಡ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಕೇವಲ ಆಶ್ವಾಸನೆಗೆ ಮಾತ್ರ. ಕಳೆದ 16 ತಿಂಗಳಿನಿಂದ ಶಿಷ್ಯ ವೇತನಕ್ಕಾಗಿ ಮುಖ್ಯಮಂತ್ರಿಗಳು, ಡಿಸಿಎಂ, ವೈದ್ಯಕೀಯ ಶಿಕ್ಷಣ ಸಚಿವರಲ್ಲಿ ಸಾಕಷ್ಟು ಮನವಿ ಮಾಡಿದ್ದೇವೆ. ಆದರೂ ಯಾವುದೇ ಪ್ರಯೊಜನವಾಗಿಲ್ಲ ಎಂದು ತಿಳಿಸಿದರು.

ವಿದ್ಯಾರ್ಥಿ ವೇತನ ನೀಡದಿದ್ದರೆ ಶಿಸ್ತುಕ್ರಮ

ವಿದ್ಯಾರ್ಥಿ ವೇತನ ನೀಡದಿದ್ದರೆ ಶಿಸ್ತುಕ್ರಮ

ಕೊರೊನಾ ವೈರಸ್ ನಂತಹ ಸಂಕಷ್ಟದ ಈ ಸಮಯದಲ್ಲಿ ವಾರಿಯರ್ಸ್ ಗಳಾಗಿ ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ನಮ್ಮ ಕರ್ತವ್ಯ ಮಾಡುತ್ತಿದ್ದೇವೆ. ಆದರೂ ನಮ್ಮ ಶಿಷ್ಯ ವೇತನ ನೀಡುವಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿರುವುದು ಬೇಸರ ಮೂಡಿಸಿದೆ ಎಂದರು.

ಹೆಚ್ಚಿದ ಕೊರೊನಾ ಸೋಂಕು: ಚನ್ನಗಿರಿಯಲ್ಲಿ ಲಾಕ್‌ಡೌನ್ಹೆಚ್ಚಿದ ಕೊರೊನಾ ಸೋಂಕು: ಚನ್ನಗಿರಿಯಲ್ಲಿ ಲಾಕ್‌ಡೌನ್

ಖಾಸಗಿ ವೈದ್ಯಕೀಯ ಕಾಲೇಜುಗಳ ವೈದ್ಯ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುವ ಬಗ್ಗೆ ತೀರ್ಮಾನ ಆಗಿದೆ, ಖಾಸಗಿ ಕಾಲೇಜುಗಳ ವೈದ್ಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಬೇಕು. ಆದರೆ ವಿದ್ಯಾರ್ಥಿ ವೇತನ ನೀಡದಿರುವ ಬಗ್ಗೆ ಮಾಹಿತಿ ಇದ್ದು, ಈಗಾಗಲೇ ಅಂತಹ ಕಾಲೇಜುಗಳಿಗೆ ಎರಡು ಬಾರಿ ನೋಟಿಸ್ ನೀಡಲಾಗಿದೆ. ವಿದ್ಯಾರ್ಥಿ ವೇತನ ನೀಡದಿದ್ದರೆ ಶಿಸ್ತುಕ್ರಮ ಜರುಗಿಸುತ್ತೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶದ ಅನ್ವಯ ನೀಡಬೇಕು

ಸುಪ್ರೀಂ ಕೋರ್ಟ್ ಆದೇಶದ ಅನ್ವಯ ನೀಡಬೇಕು

ಮಧ್ಯಮ, ಬಡ ವರ್ಗದವರಾದ ನಮಗೆ ಕಾಲೇಜಿನ ಶುಲ್ಕ ಸಹ ಭರಿಸಲು ಸಾಧ್ಯವಾಗುತ್ತಿಲ್ಲ. ಕಷ್ಟಪಟ್ಟು ಅಭ್ಯಾಸ ಮಾಡಿ ಸರ್ಕಾರಿ ಕೋಟಾದಡಿ ಪ್ರವೇಶ ಪಡೆದಿದ್ದೇವೆ, ನಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದೇವೆ. ಕಳೆದ 2020 ಜೂನ್ 17 ರಂದು ಸುಪ್ರೀಂ ಕೋರ್ಟ್ ಕೂಡ ಕೊರೊನಾ ವೈದ್ಯರಿಗೆ ವೇತನ ನೀಡುವಂತೆ ಎಲ್ಲಾ ರಾಜ್ಯ ಸರ್ಕಾರಗಳಿಗೆ ಆದೇಶ ನೀಡಿದೆ ಇದರ ಅನ್ವಯವಾದರೂ ನಮ್ಮ ಹಕ್ಕು ನಮಗೆ ನೀಡಬೇಕು ಎಂದು ವಿದ್ಯಾರ್ಥಿಗಳು ಬೇಡಿಕೆ ಇಟ್ಟಿದ್ದಾರೆ.

ಆದರೆ ಹೋರಾಟ ಮಾಡಿದರೆ ವೈದ್ಯಕೀಯ ನೋಂದಣಿ ರದ್ದು ಮಾಡುತ್ತೇವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ ಎಂದು ವೈದ್ಯ ವಿದ್ಯಾರ್ಥಿಗಳು ಆರೋಪಿಸಿದರು.

ಶಿಷ್ಯ ವೇತನ ನೀಡಿದರೆ ವಿದ್ಯಾಭ್ಯಾಸಕ್ಕೆ ಅನುಕೂಲ

ಶಿಷ್ಯ ವೇತನ ನೀಡಿದರೆ ವಿದ್ಯಾಭ್ಯಾಸಕ್ಕೆ ಅನುಕೂಲ

ಒಟ್ಟಾರೆ ವಿದ್ಯಾಭ್ಯಾಸದ ಜೊತೆ ತಮ್ಮ ಪ್ರಾಣದ ಹಂಗನ್ನು ತೊರೆದು ಕೋವಿಡ್ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಿದರೂ ಸರ್ಕಾರ ಶಿಷ್ಯ ವೇತನ ನೀಡುತ್ತಿಲ್ಲ. ಬಾಯಿ ಮಾತಿನಲ್ಲಿ ಕೊರೊನಾ ವಾರಿಯರ್ಸ್ ಗಳಿಗೆ ಇಂದ್ರ-ಚಂದ್ರ ಎಂದು ತೋರಿಸುವ ಬದಲು ಶಿಷ್ಯ ವೇತನ ನೀಡಿದರೆ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ದಾರಿದೀಪವಾಗುತ್ತದೆ ಎಂಬುದು ನಮ್ಮ ಆಶಯ.

English summary
The government is not paying Fellowship to medical students who serve as corona warriors in COVID-19 wards, so protested at Jayadeva circle in Davanagere city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X