ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಪಿಡಿ ಸೇವೆ ಬಂದ್ ಮಾಡಿ ದಾವಣಗೆರೆ ವೈದ್ಯಕೀಯ ವಿದ್ಯಾರ್ಥಿಗಳ ಮುಷ್ಕರ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಜುಲೈ 10: ಶಿಷ್ಯವೇತನಕ್ಕೆ ಆಗ್ರಹಿಸಿ ಜೆಜೆಎಂ ಮೆಡಿಕಲ್ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಹೌಸ್ ಸರ್ಜನ್ಸ್ ವಿದ್ಯಾರ್ಥಿಗಳು ಅನಿರ್ದಿಷ್ಟಾವಧಿ ಮುಷ್ಕರ ಇಂದು ಕೂಡ ಮುಂದುವರೆದಿದೆ.

Recommended Video

ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾದ ಕಾಮೇಗೌಡರು | KameGowda | Oneindia Kannada

ಇಂದು ಕೊರೊನಾ ಸೋಂಕು ಹೊರತುಪಡಿಸಿ ಹೊರ ರೋಗಿಗಳ ವಿಭಾಗದ (ಒಪಿಡಿ) ಎಲ್ಲಾ ಸೇವೆಗಳನ್ನು ಸ್ತಬ್ಧಗೊಳಿಸುವ ಮೂಲಕ ವಿದ್ಯಾರ್ಥಿಗಳು ಮುಷ್ಕರ ನಡೆಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಉಚಿತ ಮಾಸ್ಕ್ ಹಾಗೂ ಸ್ಯಾನಿಟೈಸರ್‍ಗಳನ್ನು ನೀಡುವುದರ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.

Davanagere Medical Students Protest By Stopping Opd Service

ಪ್ರತಿ ಬಾರಿಯೂ ಸಾರ್ವಜನಿಕರಿಗೆ ಹಾಗೂ ರೋಗಿಗಳಿಗೆ ತೊಂದರೆಯಾಗದಂತೆ ಪ್ರತಿಭಟನೆ ನಡೆಸಿ ನಮ್ಮ ಹಕ್ಕನ್ನು ಶಾಂತಿಯುತವಾಗಿ ಕೇಳುತ್ತಿದ್ದೇವೆ. ಆದರೆ ಪರಿಹಾರ ಮಾತ್ರ ಸಿಗುತ್ತಿಲ್ಲ.

ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡುವುದು ನಮ್ಮಿಂದ ಆಗದು; ಶಾಮನೂರು ಶಿವಶಂಕರಪ್ಪವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡುವುದು ನಮ್ಮಿಂದ ಆಗದು; ಶಾಮನೂರು ಶಿವಶಂಕರಪ್ಪ

ಸರ್ಕಾರಕ್ಕೆ ನಮ್ಮ ಕೂಗು ಕೇಳಿಸದೆ ಕಿವುಡಾಗಿದೆ. ಇದೀಗ ಕೇವಲ ಒಪಿಡಿ ಚಿಕಿತ್ಸೆಗಳನ್ನಷ್ಟೇ ನಿಲ್ಲಿಸಿದ್ದು, ಜು.12ರ ಒಳಗೆ ಸರ್ಕಾರ ನಮಗೆ ಪರಿಹಾರ ನೀಡದಿದ್ದಲ್ಲಿ ಕೊರೊನಾ ಹೊರತುಪಡಿಸಿ ತುರ್ತು ಹಾಗೂ ಹೆರಿಗೆ ಸೇವೆಗಳು ಸೇರಿದಂತೆ ಎಲ್ಲಾ ವೈದ್ಯಕೀಯ ಸೇವೆಗಳನ್ನು ನಿಲ್ಲಿಸುತ್ತೇವೆ ಎಂದು ವೈದ್ಯಕೀಯ ವಿದ್ಯಾರ್ಥಿಗಳು ಎಚ್ಚರಿಸಿದ್ದಾರೆ.

English summary
Students of Davanagere JJM Medical College went on strike today by stopping opd service except coronavirus
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X