ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿಷ್ಯವೇತನ ಭರವಸೆ: ಲಿಖಿತ ರೂಪ ದಾಖಲೆಗೆ ವೈದ್ಯಕೀಯ ವಿದ್ಯಾರ್ಥಿಗಳ ಪಟ್ಟು

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಜುಲೈ 16: ಶಿಷ್ಯ ವೇತನಕ್ಕೆ ಸಂಬಂಧಿಸಿದಂತೆ ಜೂನ್ 2020 ರವರೆಗಿನ ಬಾಕಿಯಿರುವ ವೇತನವನ್ನು ಸರ್ಕಾರ ಭರಿಸಲಿದೆ, ಆದರೆ ಈ ಬಗ್ಗೆ ಮೌಖಿಕ ಆದೇಶದ ಬದಲು ಲಿಖಿತವಾಗಿ ನೀಡಬೇಕು ಎಂದು ಜೆಜೆಎಂ ವೈದ್ಯಕೀಯ ಕಾಲೇಜಿನ ಸ್ನಾತಕೋತ್ತರ ಹಾಗೂ ಗೃಹವೈದ್ಯ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

Recommended Video

Obama , Musk , Apple , Uber and may Twitter account Hacked | Oneindia Kannada

ದಾವಣಗೆರೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸ್ನಾತಕೋತ್ತರ ವಿದ್ಯಾರ್ಥಿ ಡಾ.ಹರೀಶ್, ಜೆಜೆಎಂಎಂಸಿ ವೈದ್ಯ ವಿದ್ಯಾಲಯದ ಸರ್ಕಾರಿ ಕೋಟಾದಡಿ ನಾವು ಶಿಷ್ಯ ವೇತನ ಪಡೆದುಕೊಳ್ಳುತ್ತಿದ್ದೇವೆ. ಆದರೆ ಕಳೆದ 16 ತಿಂಗಳಿನಿಂದ ಸ್ಥಗಿತಗೊಂಡಿತ್ತು, ಶಿಷ್ಯ ವೇತನಕ್ಕಾಗಿ ಕಳೆದ 17 ದಿನಗಳಿಂದಲೂ ನಿರಂತರವಾಗಿ ಜಯದೇವ ವೃತ್ತದಲ್ಲಿ ಧರಣಿ ನಡೆಸಿದ್ದೇವೆ ಎಂದರು.

ದಾವಣಗೆರೆ: ವೈದ್ಯಕೀಯ ವಿದ್ಯಾರ್ಥಿಗಳಿಗೆ ವಿನಯ್ ಕುಮಾರ್, ರಘು ದೀಕ್ಷಿತ್ ಬೆಂಬಲದಾವಣಗೆರೆ: ವೈದ್ಯಕೀಯ ವಿದ್ಯಾರ್ಥಿಗಳಿಗೆ ವಿನಯ್ ಕುಮಾರ್, ರಘು ದೀಕ್ಷಿತ್ ಬೆಂಬಲ

 Davanagere: Medical College Students Asking To Give Written Guarantee Of Scholarship Payment

ಸರ್ಕಾರ ಹಾಗೂ ಆಡಳಿತ ಮಂಡಳಿಯ ಆಂತರಿಕ ನಡೆಯಿಂದ ಬೇಸತ್ತಿದ್ದೇವೆ. ನಮ್ಮ ಹೋರಾಟದ ಫಲವಾಗಿ ಸರ್ಕಾರ ಜೂನ್ 2020 ರವರೆಗಿನ ಶಿಷ್ಯವೇತನ ನೀಡಲು ಮುಂದಾಗಿರುವುದು ಸ್ವಾಗತಾರ್ಹ. ಆದರೆ ಇದು ಕೇವಲ ಆಶ್ವಾಸನೆಯಾಗಿದೆ ನಮಗೆ ಲಿಖಿತ ರೂಪದಲ್ಲಿ ನೀಡಬೇಕು ಹಾಗೂ ಜುಲೈ 2020 ರಿಂದ ನಮ್ಮ ಶಿಷ್ಯ ವೇತನವನ್ನು ಆಡಳಿತ ಮಂಡಳಿಯೇ ನೀಡಲಿದೆ ಎನ್ನಲಾಗಿದೆ. ಈ ಬಗ್ಗೆಯೂ ನಮಗೆ ಲಿಖಿತ ರೂಪದ ದಾಖಲೆ ನೀಡಬೇಕೆಂದು ಒತ್ತಾಯಿಸಿದರು.

ದಾವಣಗೆರೆ: ಆಶಾ ಕಾರ್ಯಕರ್ತೆಯರಿಂದ ಅಂಚೆಪತ್ರ ಚಳುವಳಿದಾವಣಗೆರೆ: ಆಶಾ ಕಾರ್ಯಕರ್ತೆಯರಿಂದ ಅಂಚೆಪತ್ರ ಚಳುವಳಿ

 Davanagere: Medical College Students Asking To Give Written Guarantee Of Scholarship Payment

ಮೂರು ದಿನಗಳೊಳಗಾಗಿ ನಮ್ಮ ಎರಡೂ ಬೇಡಿಕೆಗಳನ್ನು ಈಡೇರಿಸದಿದ್ದರೆ ಜು.20 ರಿಂದ ಮತ್ತೆ ಧರಣಿ ನಡೆಸಲಾಗುವುದು. ಜುಲೈ 2020 ರಿಂದ ಸರ್ಕಾರಿ ಕೋಟಾದ ಸ್ನಾತಕೋತ್ತರ ಮತ್ತು ಗೃಹವೈದ್ಯ ವಿದ್ಯಾರ್ಥಿಗಳಿಗೆ ನಿಗದಿಪಡಿಸಿದ ಶಿಷ್ಯ ವೇತನವನ್ನು ಯಾರು ಭರಿಸಬೇಕು ಎಂಬುದರ ಬಗ್ಗೆ ಸರ್ಕಾರದಿಂದ ಲಿಖಿತ ರೂಪದಲ್ಲಿ ದಾಖಲೆ ನೀಡಬೇಕು ಮತ್ತು ಜುಲೈ ನಂತರದ ಶಿಷ್ಯ ವೇತನವನ್ನು ಆಡಳಿತ ಮಂಡಳಿ ಸರ್ಕಾರಕ್ಕೆ ನೀಡಬೇಕು, ನಮಗೆ ಸರ್ಕಾರ ಆ ವೇತನ ಭರಿಸಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಡಾ.ಹಿತಾ,ಡಾ.ಸುಧಾಕರ್, ಡಾ.ನಿಧಿ ಇದ್ದರು.

English summary
Medical students have demanded that the government pay the pending salary up to June 2020 for student salary, but this should be given in writing instead of a verbal order.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X