ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

"ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಅಪಸ್ವರ ಬೇಡ"

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ನವೆಂಬರ್ 21; ರಾಜ್ಯ ಸರ್ಕಾರ ಮರಾಠ ಭಾಷೆಗೆ ನಿಗಮ ರಚಿಸಿಲ್ಲ. ಮರಾಠಿ ಜನಾಂಗಕ್ಕೆ ರಚಿಸಿರುವುದು. ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿರುವುದಕ್ಕೆ ಅಪಸ್ವರ ಬೇಡ ಎಂದು ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ, ಕ್ಷತ್ರಿಯ ಮರಾಠ ವಿದ್ಯಾವರ್ಧಕ ಸಂಘದ ಗೌರವಾಧ್ಯಕ್ಷ ಯಶವಂತರಾವ್‌ ಜಾಧವ್ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಆರ್ಥಿಕವಾಗಿ, ಸಾಮಾಜಿಕವಾಗಿ ಮರಾಠ ಸಮುದಾಯ ಹಿಂದುಳಿದಿದೆ. ರಾಜ್ಯದಲ್ಲಿ 40 ಲಕ್ಷ ಸಮುದಾಯವರು ಇದ್ದಾರೆ. ಅವರ ಅಭಿವೃದ್ಧಿ ದೃಷ್ಟಿಯಿಂದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪ್ರಾಧಿಕಾರ ರಚಿಸಿದ್ದಾರೆ. ಓಲೈಕೆಗಾಗಿ ರಚಿಸಿಲ್ಲ. ಅವರನ್ನು ಸಮಾಜ ಅಭಿನಂದಿಸುತ್ತದೆ' ಎಂದರು.

'ಮರಾಠ ಪ್ರಾಧಿಕಾರದ ಬಗ್ಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸಾಹಿತಿ ಬರಗೂರು ರಾಮಚಂದ್ರಪ್ಪ ಹಾಗೂ ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ. ರಾಜ್ಯದಲ್ಲಿನ ಮರಾಠಿಗರು ಕನ್ನಡಿಗರೇ ಆಗಿದ್ದಾರೆ. ಅವರ ಮನೆ ಮಾತು ಕನ್ನಡ. 500 ವರ್ಷಗಳ ಹಿಂದೆಯೇ ನಮ್ಮ ಪೂರ್ವಜರು ಇಲ್ಲಿಗೆ ಬಂದಿದ್ದಾರೆ. ಬೆಂಗಳೂರಿನಲ್ಲಿ ಆಡಳಿತ ನಡೆಸಿದ್ದಾರೆ. ಗವೀಪುರಂನಲ್ಲಿರುವ ಗೋಸಾಯಿ ಮಠ ಮರಾಠರಿಗೆ ಪೂಜ್ಯನೀಯ ಸ್ಥಳ' ಎಂದು ಹೇಳಿದರು.

Davanagere: Maratha Board Is Formed To The Development Said Yashwanthrao Rao Jadhav

ಬೆಳಗಾವಿಯಲ್ಲಿ ಎಂಇಎಸ್ ಮಾಡುವ ಪುಂಡಾಟಿಕೆಯನ್ನು ರಾಜ್ಯದ ಮರಾಠ ಜನಾಂಗ ಖಂಡಿಸಿದೆ. ಆ ಕಾರಣದಿಂದ ಪ್ರಾಧಿಕಾರ ರಚನೆ ವಿರೋಧಿಸುವುದು ಸರಿಯಲ್ಲ. ಕನ್ನಡಿಗರ ಮೇಲೆ ದಾಳಿ ಮಾಡಿದ, ಮತಾಂತರ ಮಾಡಿದ ಟಿಪ್ಪು ಸುಲ್ತಾನ್‌ ಜಯಂತಿಯನ್ನು ಆಚರಿಸುವ, ಅಲ್ಪಸಂಖ್ಯಾತರಿಗೆ ಪ್ರವಾಸ ಭಾಗ್ಯ, ಶಾದಿ ಭಾಗ್ಯ ನೀಡಿ ಸಮುದಾಯದಲ್ಲಿ ತಾರತಮ್ಯ ಮಾಡುವ ಸಿದ್ದರಾಮಯ್ಯ ಅವರಿಗೆ ಮರಾಠರ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇಲ್ಲ ಎಂದು ದೂರಿದರು.

Recommended Video

26 /11 ಅದೇ ದಿನ ಮತ್ತೊಂದು ದಾಳಿ ಸಾಧ್ಯತೆ | Oneindia Kannada

'ಮರಾಠರೂ ಕನ್ನಡಿಗರೇ. ಪ್ರಾಧಿಕಾರದ ಮೂಲಕ ಹಿಂದುಳಿದವರನ್ನು ಮೇಲೆತ್ತಲು ಎಲ್ಲರೂ ಸಹಕಾರ ನೀಡಿ ಬಂದ್‌ ಕೈಬಿಡಬೇಕು' ಎಂದು ಅವರು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಸಂಘದ ಗೋಪಾಲರಾವ್‌ ಮಾನೆ, ಸೋಮಶೇಖರ್‌ ಪವಾರ್, ಪರಶುರಾಮ್‌ ಸಾಳುಂಕೆ, ಮಂಜುನಾಥ ರಾವ್ ಕಾಠೆ ಇದ್ದರು.

English summary
State government has not formed development board for maratha language. It is created to the development of maratha community said Former president of davanagere BJP district unit, Yashwanthrao Rao Jadhav
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X