• search
 • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭವಿಷ್ಯ: ''ಚತುರ್ ಗ್ರಹಗಳ ಸಮ್ಮಿಲನ, ಏ. 15ಕ್ಕೆ ಕೊರೊನಾ ನಿರ್ನಾಮ''

By ದಾವಣಗೆರೆ ಪ್ರತಿನಿಧಿ
|

ಮಲೇಬೆನ್ನೂರು, ಮಾರ್ಚ್ 31: ಕೊರೊನಾವೈರಸ್ ವಿರುದ್ಧ ಅತ್ಯಂತ ಬಲಿಷ್ಠ ರಾಷ್ಟ್ರಗಳು ಹೋರಾಟ ನಡೆಸಿದರೂ ಫಲ ಸಿಕ್ಕಿಲ್ಲ. ಆದರೆ, ಏಪ್ರಿಲ್ 15ಕ್ಕೆ ಚತುರ್ ಗ್ರಹಗಳ ಸಮ್ಮಿಲನದಿಂದ ಇಡೀ ಜಗತ್ತು ಕೊರೊನಾ ವೈರಸ್ ವಿರುದ್ಧ ಹೋರಾಡುವ ಧನಾತ್ಮಕ ಶಕ್ತಿ ಸಿಗಲಿದೆ, ಕೊರೊನಾ ಬಲ ಕುಗ್ಗಲಿದೆ ಎಂದು ವಿನಾಯಕ ನಗರ (ಜಿಗಳಿ ಕ್ಯಾಂಪ್)ಕ್ಯಾಂಪಿನ ಶ್ರೀ ಸಿದ್ಧಲಿಂಗೇಶ್ವರ ಗದ್ದುಗೆ ಮಠ ಹಾಗೂ ಶ್ರೀ ಶಾಸ್ತ್ರ ಪೀಠದ ಶ್ರೀ ಡಾ. ಸಿದ್ಧಲಿಂಗ ಶಿವಾಚಾರ್ಯಸ್ವಾಮೀಜಿ ಹೇಳಿದ್ದಾರೆ.

   ಜನರ ನೆರವಿಗೆ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯ | Oneindia Kannada

   ಗುರುಗ್ರಹವು ಧನು ರಾಶಿಯಲ್ಲಿದ್ದು, ಕೇತುವಿನ ಜೊತೆ ಗುರು-ಕೇತು ಗ್ರಹಗಳ ಸಮ್ಮಿಲನವಾಗಿ ಈ ಕೊರೊನಾ ಮಹಾಮಾರಿ ಉಂಟಾಗಿ ಇಡೀ ಜಗತ್ತನ್ನೇ ಭಯದ ಭೀತಿಯಲ್ಲಿ ಮುಳುಗಿಸಿ, ತನ್ನ ರುದ್ರ ನರ್ತನವನ್ನು ತೋರಿಸುತ್ತಿದೆ.

   Fact Check: ಕರ್ನಾಟಕದಲ್ಲಿ ಮದ್ಯದಂಗಡಿ ಓಪನ್‌ಗೆ ಆದೇಶ?

   ಆದರೆ ಇದೇ ಗುರು ಗ್ರಹವು ಇದೇ ದಿನಾಂಕ 30ರಂದು ಮಕರ ರಾಶಿಗೆ ಪ್ರವೇಶ ಮಾಡುವುದರಿಂದ ಕೊರೊನಾ ಬಲಹೀನವಾಗಿ ಕಾಲಕ್ರಮೇಣ ನಶಿಸಲಿದೆ ಹಾಗೂ ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳಲಿದೆ. ನಂತರ ಸ್ವಸ್ಥಾನದಲ್ಲಿರುವ ಶನಿಯು ಗುರು ನಂತರ ಅಗ್ನಿ ಕಾರಕನಾದ ಮಂಗಳ ಗ್ರಹ ಸಂಯೋಗದಿಂದ ಅನೇಕ ಬದಲಾವಣೆಗಳು ಕಾಣಲಿವೆ. ಈ ಚಂದ್ರಗ್ರಹವು ಜನರಿಗೆ ಆತ್ಮಸ್ಥೈರ್ಯ ಹಾಗೂ ಸಾಮಾಜಿಕ ಸ್ವಾಸ್ಥ್ಯವನ್ನು ನೀಡಲಿದೆ ಎಂದು ಸ್ವಾಮೀಜಿ ಹೇಳಿದರು.

   ಏಪ್ರಿಲ್ 15ಕ್ಕೆ ಸೂರ್ಯಗ್ರಹಣ

   ಏಪ್ರಿಲ್ 15ಕ್ಕೆ ಸೂರ್ಯಗ್ರಹಣ

   ಏಪ್ರಿಲ್ 15ಕ್ಕೆ ಸೂರ್ಯಗ್ರಹಣ ಮೇಷ ರಾಶಿಯಲ್ಲಿ ಉಚ್ಚನಾಗಿರುವುದರಿಂದ ಅನೇಕ ಕಾಯಿಲೆಗಳಿಗೆ ಮದ್ದು ಸಿಗಲಿದ್ದು, ಜನರಿಂದ ಅನಾರೋಗ್ಯವನ್ನು ದೂರ ಮಾಡುತ್ತಾನೆ. ರವಿಯು ನವಗ್ರಹಗಳ ಅಧಿಪತಿ ಆಗಿರುವುದರಿಂದ ಸೂರ್ಯಗ್ರಹವು ಆರೋಗ್ಯ, ಅಧಿಕಾರ, ತೇಜಸ್ಸು ನೀಡುವಂಥನಾಗಿರುತ್ತಾನೆ ಮತ್ತು ಶುಕ್ರ ವೃಷಭದಲ್ಲಿ ಇರುವುದರಿಂದ ಆರ್ಥಿಕತೆಯು ಸುಧಾರಣೆಯಾಗಿ ಎಲ್ಲಾ ವರ್ಗದವರಿಗೂ. ಎಲ್ಲಾ ರಾಜ್ಯ ದವರಿಗೂ ವ್ಯಾಪಾರ ವಹಿವಾಟುಗಳು ಬೆಳೆದು ಶುಭದಾಯಕವಾಗಲಿದೆ.

   ಕೊರೊನಾ ವಿರುದ್ಧ ಹೋರಾಡುವ ಲಸಿಕೆಗಳು

   ಕೊರೊನಾ ವಿರುದ್ಧ ಹೋರಾಡುವ ಲಸಿಕೆಗಳು

   ಕೊರೊನಾ ವಿರುದ್ಧ ಹೋರಾಡುವ ಲಸಿಕೆಗಳು ದೊರೆಯಲಿವೆ. ಬರುವ ಮೇ 28ಕ್ಕೆ ಜಾಗತಿಕವಾಗಿ ಹಿಡಿದಿರುವ ಕಾಳಸರ್ಪ ಯೋಗ ಕೊನೆಗೊಳ್ಳುವುದರಿಂದ ರಾಹುಕೇತುಗಳ ಅನುಗ್ರಹ ಉಂಟಾಗಿ ಈ ರೋಗಗಳು ಕೊನೆಗೊಳ್ಳಲಿವೆ. ಮುಂಬರುವ ಸೂರ್ಯಗ್ರಹಣದ ನಂತರ ನೆಮ್ಮದಿ ಕಾಣಲಿದೆ.

   ಜೂನ್ ನಲ್ಲಿ ಗಣ್ಯವ್ಯಕ್ತಿಗಳ ಅಗಲಿಕೆ

   ಜೂನ್ ನಲ್ಲಿ ಗಣ್ಯವ್ಯಕ್ತಿಗಳ ಅಗಲಿಕೆ

   ಜೂನ್ ನಲ್ಲಿ ನಡೆಯುತ್ತಿರುವ ರಾಹುಗ್ರಸ್ತ ಚೂಡಾಮಣಿ ಸೂರ್ಯಗ್ರಹಣ ಭಾರತದಲ್ಲಿ ಸಂಭವಿಸುತ್ತಿರುವುದರಿಂದ ಜಾಗತಿಕವಾಗಿ ವಾಯುಭಾರ ಕುಸಿತ, ಅಕಾಲಿಕ ಮಳೆ, ಅತಿ ಹೆಚ್ಚು ಉಷ್ಣ, ಅಗ್ನಿ ಅವಘಡಗಳು, ಭೀಕರ ಬಿರುಗಾಳಿ, ಭೂಕಂಪ, ಜಲಪ್ರಳಯ, ಚಂಡಮಾರುತಗಳು, ಸಿಡಿಲು ಬಡಿತಗಳು, ಜಲ ವಿಕೋಪಗಳು ಉಂಟಾಗಲಿವೆ. ಗಣ್ಯ ವ್ಯಕ್ತಿಗಳ ಜೀವಕ್ಕೆ ಕುತ್ತಾಗಬಹುದು. ರಾಜಕಾರಣಿಗಳಿಗೆ ಹಿನ್ನಡೆ, ದೇಶದ ಹಾಗೂ ರಾಜ್ಯದ ಪ್ರಭುಗಳಿಗೆ ತೊಂದರೆ ಎಂದು ಸ್ವಾಮೀಜಿ ಭವಿಷ್ಯ ಹೇಳಿದ್ದಾರೆ.

   ಬಾಲ ಜ್ಯೋತಿಷಿ ಭವಿಷ್ಯ

   ಬಾಲ ಜ್ಯೋತಿಷಿ ಭವಿಷ್ಯ

   ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಾಳೆಯಿಂದ (ಮಾ 29) ಮುಂದಿನ ಐದು ದಿನ, ಈ ಅವಧಿಯಲ್ಲಿ ಜನರು ವಿಶೇಷ ಎಚ್ಚರಿಕೆಯಿಂದ ಇರುವುದು ಸೂಕ್ತ ಎಂದು ಬಾಲ ಜ್ಯೋತಿಷಿ ಅಭಿಜ್ಞ ಅಭಿಪ್ರಾಯ ಪಟ್ಟಿದ್ದಾನೆ. ಮಾರ್ಚ್ 31ರಿಂದ ಏಪ್ರಿಲ್ 1ರ ಅವಧಿಯಲ್ಲಿ ಮಂಗಳ ಮತ್ತು ಶನಿ ಸಂಪೂರ್ಣವಾಗಿ ಸಂಯೋಗಗೊಳ್ಳಲಿದೆ. ಈ ಅವಧಿಯಲ್ಲಿ ಮಾರಣಾಂತಿಕ ಕಾಯಿಲೆ ಅತಿಹೆಚ್ಚು ಹರಡುವ ಸಮಯವಾಗಬಹುದು ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

   English summary
   Malebennur Siddalingeshwar Gadduge mutt Dr. Siddalinga Shivacharya predicted Coronavirus effect will weaken by March 30 and diminish by April 15.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more