ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಖಾಸಗಿ ಸುಪರ್ದಿಯಲ್ಲಿ ಸರ್ಕಾರಿ ಆಸ್ಪತ್ರೆ; ಚಿಕಿತ್ಸೆಗೆ ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಅಕ್ಟೋಬರ್ 24: ಗ್ರಾಮದಲ್ಲಿನ ಸರ್ಕಾರಿ ಆಸ್ಪತ್ರೆಯನ್ನು ಸುಪರ್ದಿಗೆ ಪಡೆದ ಖಾಸಗಿ ಆಸ್ಪತ್ರೆ ಸರಿಯಾದ ಚಿಕಿತ್ಸೆ ನೀಡದಿರುವ ಬಗ್ಗೆ ಅಸಮಾಧಾನಗೊಂಡ ಗ್ರಾಮಸ್ಥರು ಆಸ್ಪತ್ರೆಗೆ ಬೀಗ ಜಡಿದು ಪ್ರತಿಭಟಿಸಿರುವ ಘಟನೆ ತಾಲ್ಲೂಕಿನ ಲೋಕಿಕೆರೆ ಗ್ರಾಮದಲ್ಲಿಂದು ನಡೆದಿದೆ.

ಗ್ರಾಮದಲ್ಲಿನ ಎರಡೂವರೆ ಎಕರೆ ಪ್ರದೇಶದಲ್ಲಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 13 ವರ್ಷಗಳ ಹಿಂದೆ ಖಾಸಗಿ ಆಸ್ಪತ್ರೆಯೊಂದರ ಸುಪರ್ದಿಗೆ ನೀಡಲಾಗಿತ್ತು. ಆದರೆ ಖಾಸಗಿ ಆಸ್ಪತ್ರೆಯು ಈ ಕೇಂದ್ರದಲ್ಲಿ ಸರಿಯಾದ ಚಿಕಿತ್ಸೆ ನೀಡದೇ ತಮ್ಮ ಆಸ್ಪತ್ರೆಗೆ ಶಿಫಾರಸು ಮಾಡಿಕೊಡುತ್ತಿರುವುದಾಗಿ ಆರೋಪಿಸಿ ಕೇಂದ್ರದ ಮುಂದೆ ಜಮಾಯಿಸಿದ್ದ ಗ್ರಾಮಸ್ಥರು, ಖಾಸಗಿ ಆಡಳಿತದಿಂದ ಮುಕ್ತಿ ನೀಡಿ ಸರ್ಕಾರವೇ ಆಡಳಿತ ವಹಿಸಿಕೊಳ್ಳಲಿ ಎಂದು ಪಟ್ಟು ಹಿಡಿದು ಕೇಂದ್ರಕ್ಕೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಡ್ಯದ ಮಿಮ್ಸ್ ಆಸ್ಪತ್ರೆ ಬೆಡ್‌ನಲ್ಲಿ ಬೀದಿನಾಯಿಗಳ ನಿದ್ದೆ...ಮಂಡ್ಯದ ಮಿಮ್ಸ್ ಆಸ್ಪತ್ರೆ ಬೆಡ್‌ನಲ್ಲಿ ಬೀದಿನಾಯಿಗಳ ನಿದ್ದೆ...

ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವು ಸರ್ಕಾರಿ ಆಡಳಿತದಲ್ಲಿದ್ದಾಗ ಉತ್ತಮ ಸೇವೆ ನೀಡುತ್ತಿತ್ತು. ಗ್ರಾಮಸ್ಥರಿಗೂ ಇದು ಅನುಕೂಲವಾಗಿತ್ತು. ಖಾಸಗಿ ಆಸ್ಪತ್ರೆ ವ್ಯಾಪ್ತಿಗೆ ಈ ಕೇಂದ್ರವನ್ನು ಒಪ್ಪಿಸಿದರೆ ಇನ್ನೂ ಹೆಚ್ಚಿನ ಆರೋಗ್ಯ ಸೌಲಭ್ಯ ಸಿಗುತ್ತದೆ ಎಂದು ಹಲವು ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ 2007ರಲ್ಲಿ ಈ ಕೇಂದ್ರವನ್ನು ಖಾಸಗಿ ಆಸ್ಪತ್ರೆಗೆ ನೀಡುವ ಸರ್ಕಾರದ ಪ್ರಸ್ತಾವನೆಗೆ ಗ್ರಾಮ ಪಂಚಾಯತಿ ಸ್ಪಂದಿಸಿತ್ತು. ಅಂದಿನಿಂದ ಗ್ರಾಮದಲ್ಲಿ ಆರೋಗ್ಯ ಸೇವೆ ಗಗನ ಕುಸುಮವಾಯಿತು. ಸಣ್ಣ ಪುಟ್ಟ ಚಿಕಿತ್ಸೆಗೂ ದಾವಣಗೆರೆಯಲ್ಲಿನ ಆ ಖಾಸಗಿ ಆಸ್ಪತ್ರೆಗೆ ಎಡತಾಕುವ ಪರಿಸ್ಥಿತಿ ಬಂತು. 2007ರಿಂದ ಈವರೆಗೆ ಪ್ರತಿ ವರ್ಷವೂ ಖಾಸಗಿ ಒಪ್ಪಂದ ನವೀಕರಣ ಆಗುತ್ತಲೇ ಬಂದಿತ್ತು ಎಂದು ಗ್ರಾಮದ ಮುಖಂಡ ಆನಂದ್ ಅಳಲಿಟ್ಟಿದ್ದಾರೆ.

Davanagere:Lokikere Villagers Protest Demanding Proper Treatment In Hospital

Recommended Video

ಎಲ್ಲರೂ BJPಗೆ ಸೇರೋದು ಪಕ್ಕ!! | Oneindia Kannada

ಸೂಕ್ತ ಆರೋಗ್ಯ ಸೇವೆ ದೊರೆಯದೇ ಲೋಕಿಕೆರೆ ಗ್ರಾಮಸ್ಥರು ಪರದಾಡುತ್ತಿದ್ದು, ಸರ್ಕಾರಕ್ಕೆ ಆಸ್ಪತ್ರೆ ಸೇರಿಸುವ ತನಕ ಬೀಗ ತೆಗೆಯಲ್ಲ. ಗ್ರಾಮದ ಪಿಎಚ್ ‌ಸಿ ಕೇಂದ್ರವನ್ನು ಇನ್ನಾದರೂ ಖಾಸಗಿ ಒಡೆತನದ ಒಪ್ಪಂದದಿಂದ ಮುಕ್ತಗೊಳಿಸಿ ಸರ್ಕಾರವೇ ತನ್ನ ಸುಪರ್ದಿಗೆ ಪಡೆದು ಗ್ರಾಮಸ್ಥರಿಗೆ ಅನುಕೂಲ ಮಾಡಬೇಕಿದೆ ಎಂದು ಗ್ರಾಮಸ್ಥ ಪುರಂದರ್ ಒತ್ತಾಯಿಸಿದ್ದಾರೆ.

English summary
Lokikere villagers in davanagere protested infront of private hospital demanding proper treatment
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X