ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಾಕ್ ಡೌನ್ ಹಿನ್ನೆಲೆ: ಬೆಂಗಳೂರಿನಿಂದ ದಾವಣಗೆರೆಗೆ ಬಂದಿರುವ ಜನರೆಷ್ಟು?

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಜುಲೈ 15: ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ಎರಡನೇ ಅವಧಿಗೆ ಲಾಕ್‌ಡೌನ್‌ ಜಾರಿಗೊಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ರಾಜಧಾನಿಯಿಂದ ಎರಡು ದಿನಗಳ ಅವಧಿಯಲ್ಲಿ ಸುಮಾರು ಒಂದೂವರೆ ಸಾವಿರ ಜನ ದಾವಣಗೆರೆ ಜಿಲ್ಲೆಗೆ ಬಂದಿದ್ದಾರೆ.

Recommended Video

China ಸೈನಿಕರಿಗೆ ಅವಮಾನ | Oneindia Kannada

ಮಂಗಳವಾರ ರಾತ್ರಿಯಿಂದ ಬೆಂಗಳೂರು ನಗರ ಲಾಕ್‌ಡೌನ್‌ ಆಗುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಕೂಲಿ ಕಾರ್ಮಿಕರು, ಜನಸಾಮಾನ್ಯರು ಮೂರು ದಿನಗಳಿಂದ ತಮ್ಮ ಊರಿನತ್ತ ಮುಖ ಮಾಡಿದ್ದಾರೆ. ರಾಜಧಾನಿಯಲ್ಲಿ ಕೋವಿಡ್ ನ ತೀವ್ರತೆಯಿಂದ ಆತಂಕಕ್ಕೊಳಗಾಗಿ ಹಲವರು ಕುಟುಂಬ ಸಮೇತ ಬಸ್‌ ಹಾಗೂ ಖಾಸಗಿ ವಾಹನಗಳಲ್ಲೂ ಜಿಲ್ಲೆಗೆ ಮರಳುತ್ತಿದ್ದಾರೆ.

ಇನ್ನೆರಡು ದಿನದಲ್ಲಿ ದಾವಣಗೆರೆ ಲಾಕ್ ಡೌನ್ ಆಗುತ್ತಾ?; ಡಿಸಿ ಉತ್ತರ ಹೀಗಿದೆ...ಇನ್ನೆರಡು ದಿನದಲ್ಲಿ ದಾವಣಗೆರೆ ಲಾಕ್ ಡೌನ್ ಆಗುತ್ತಾ?; ಡಿಸಿ ಉತ್ತರ ಹೀಗಿದೆ...

'ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಜನ ಊರಿಗೆ ಬರುತ್ತಿದ್ದಾರೆ. ಹೀಗಾಗಿ 50 ಬಸ್‌ಗಳನ್ನು ಬೆಂಗಳೂರಿಗೆ ಕಳುಹಿಸಿಕೊಡಲಾಗಿತ್ತು. ಸೋಮವಾರ ಬೆಂಗಳೂರಿನಿಂದ 34 ಬಸ್‌ಗಳಲ್ಲಿ ಸುಮಾರು ಒಂದು ಸಾವಿರ ಜನ ದಾವಣಗೆರೆಗೆ ಬಂದಿದ್ದರು.'

Lockdown Effect: More Than Thousand People Came To Davanagere From Bengaluru

'ಮಂಗಳವಾರ ಬೆಳಿಗ್ಗೆಯೂ 20 ಬಸ್‌ಗಳನ್ನು ಬೆಂಗಳೂರಿಗೆ ಕಳುಹಿಸಿಕೊಡಲಾಗಿದೆ. ಸಂಜೆ 4 ಗಂಟೆ ಹೊತ್ತಿಗೆ 10 ಬಸ್‌ಗಳಲ್ಲಿ ಸುಮಾರು 300 ಜನ ಜಿಲ್ಲೆಗೆ ಬಂದಿದ್ದಾರೆ. ಈಗಾಗಲೇ ಇನ್ನೂ 10 ಬಸ್‌ಗಳಲ್ಲಿ ಜನ ಬೆಂಗಳೂರಿನಿಂದ ಹೊರಟಿದ್ದಾರೆ' ಎಂದು ಕೆ.ಎಸ್‌.ಆರ್‌.ಟಿ.ಸಿ. ದಾವಣಗೆರೆ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಹೆಬ್ಬಾಳ್ ಮಾಹಿತಿ ನೀಡಿದರು.

'ಲಾಕ್‌ಡೌನ್‌ ಜಾರಿಗೊಳ್ಳುತ್ತಿರುವುದರಿಂದ ನಮ್ಮ ವಿಭಾಗದ ಎಲ್ಲಾ ಬಸ್‌ಗಳನ್ನೂ ರಾತ್ರಿ 8 ಗಂಟೆಯೊಳಗೆ ಬೆಂಗಳೂರಿನಿಂದ ಜಿಲ್ಲೆಯತ್ತ ಹೊರಡಿಸುವಂತೆ ಈಗಾಗಲೇ ಸೂಚಿಸಿದ್ದೇವೆ. ಸೋಮವಾರಕ್ಕೆ ಹೋಲಿಸಿದರೆ ಮಂಗಳವಾರ ಸ್ವಲ್ಪ ಕಡಿಮೆ ಜನರಿದ್ದರು. ರಾತ್ರಿ ಹೊತ್ತು ಜಿಲ್ಲೆಗೆ ಬರಲು ಜನರಿಲ್ಲದಿದ್ದರೆ ಬೆಂಗಳೂರಿನಿಂದ ಹುಬ್ಬಳ್ಳಿಗೆ ಟ್ರಿಪ್‌ ಹೊಡೆಯುವಂತೆಯೂ ಸೂಚಿಸಿದ್ದೇವೆ' ಎಂದು ಸಿದ್ದೇಶ್ವರ ಹೆಬ್ಬಾಳ್ ಹೇಳಿದರು.

ದಾವಣಗೆರೆ: ಸೀಲ್ ಡೌನ್ ಪ್ರದೇಶದಲ್ಲೇ ಅದ್ಧೂರಿ ವಿವಾಹದಾವಣಗೆರೆ: ಸೀಲ್ ಡೌನ್ ಪ್ರದೇಶದಲ್ಲೇ ಅದ್ಧೂರಿ ವಿವಾಹ

'ದಾವಣಗೆರೆ ಜಿಲ್ಲೆಯಲ್ಲೂ ಲಾಕ್‌ಡೌನ್‌ ಜಾರಿಗೊಳ್ಳುವ ಸಾಧ್ಯತೆ ಇದೆ ಎಂಬ ಆತಂಕದಿಂದ ಎರಡು ದಿನಗಳಿಂದ ಜನ ನಗರಕ್ಕೆ ಬಂದು ಅಗತ್ಯ ವಸ್ತುಗಳನ್ನು ಖರೀದಿಸಿ ಊರಿಗೆ ವಾಪಸ್ಸಾಗುತ್ತಿದ್ದಾರೆ. ಕೊರೊನಾ ವೈರಸ್ ಹಿನ್ನೆಲೆಯಲ್ಲಿ 360 ಬಸ್‌ಗಳ ಪೈಕಿ 120 ಬಸ್‌ಗಳು ಮಾತ್ರ ಓಡಿಸುತ್ತಿದ್ದೆವು. ಜನ ಸಂಚಾರ ಹೆಚ್ಚಿದ್ದರಿಂದ ಸೋಮವಾರ ಹಾಗೂ ಮಂಗಳವಾರ 250 ಬಸ್‌ಗಳನ್ನು ಓಡಿಸಿದ್ದೇವೆ' ಎಂದು ಮಾಹಿತಿ ನೀಡಿದರು.

English summary
As the number of coronavirus cases is on the rise, the state government is implementing a lockdown for a second term in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X