• search
 • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲಾಕ್ ಡೌನ್ ಘೋಷಣೆ; ಮದ್ಯ ಖರೀದಿಗೆ ಮುಗಿಬಿದ್ದ ಜನ!

By ದಾವಣಗೆರೆ ಪ್ರತಿನಿಧಿ
|

ದಾವಣಗೆರೆ, ಏಪ್ರಿಲ್ 26; ಕರ್ನಾಟಕ ಸರ್ಕಾರ ಕೋವಿಡ್ ಹರಡುವಿಕೆ ತಡೆಯಲು 14 ದಿನಗಳ ಕಾಲ ಲಾಕ್ ಡೌನ್ ಘೋಷಣೆ ಮಾಡಿದೆ. ಬುಧವಾರ ರಾತ್ರಿಯಿಂದ ಲಾಕ್ ಡೌನ್ ಜಾರಿಗೆ ಬರಲಿದೆ.

ಲಾಕ್ ಡೌನ್ ಘೋಷಣೆಯಾಗುತ್ತಿದ್ದಂತೆ ಮದ್ಯ ಖರೀದಿಸಲು ಮದ್ಯಪ್ರಿಯರು ಬೆಣ್ಣೆನಗರಿ ದಾವಣಗೆರೆಯಲ್ಲಿ ಮುಗಿಬಿದ್ದಿದ್ದಾರೆ. ನಗರದಲ್ಲಿ ವೈನ್ ಶಾಪ್ ಹಾಗೂ ಎಂಐಎಸ್ಎಲ್‌ಗಳ ಮುಂದೆ ಜನರು ಜಮಾಯಿಸಿದ ದೃಶ್ಯ ಕಂಡು ಬರುತ್ತಿದೆ‌.

ಕರ್ನಾಟಕ; 14 ದಿನ ಲಾಕ್ ಡೌನ್, ಏನು ಓಪನ್, ಕ್ಲೋಸ್? ಕರ್ನಾಟಕ; 14 ದಿನ ಲಾಕ್ ಡೌನ್, ಏನು ಓಪನ್, ಕ್ಲೋಸ್?

ದಾವಣಗೆರೆ ನಗರದಲ್ಲಿ ಮದ್ಯದಂಗಡಿಗಳು ಫುಲ್ ರಶ್ ಆಗಿದ್ದು, ಮದ್ಯದ ವಹಿವಾಟು ಜೋರಾಗಿ ನಡೆಯುತ್ತಿದೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಲಾಕ್ ಡೌನ್ ಘೋಷಣೆ ಮಾಡಿದ ಬಳಿಕ ಪಾನಪ್ರಿಯರು ಮದ್ಯದಂಗಡಿಗಳಿಗೆ ಆಗಮಿಸುತ್ತಿದ್ದಾರೆ.

ಸರಳವಾಗಿ ನೆರವೇರಿದ ಮದ್ಯ, ಸಿಗರೇಟು ಪ್ರಿಯ ಖಾಪ್ರಿ ದೇವರ ಜಾತ್ರೆಸರಳವಾಗಿ ನೆರವೇರಿದ ಮದ್ಯ, ಸಿಗರೇಟು ಪ್ರಿಯ ಖಾಪ್ರಿ ದೇವರ ಜಾತ್ರೆ

ಚೀಲದಲ್ಲಿ, ಡಬ್ಬಗಳಲ್ಲಿ, ಸ್ಕೂಟಿ ಹಾಗೂ ಕಾರ್ ಗಳಲ್ಲಿ ಬಂದು ಅಗತ್ಯಕ್ಕೆ ತಕ್ಕಷ್ಟು ಪಾರ್ಸೆಲ್ ತೆಗೆದುಕೊಂಡು ಹೋಗುತ್ತಿದ್ದಾರೆ. ಪರಿಣಾಮ ದಾವಣಗೆರೆಯ ಬಾರ್‌ಗಳು ಇದೀಗ ಪಾನಪ್ರಿಯರಿಂದ ತುಂಬಿ ತುಳುಕುತ್ತಿವೆ.

ಲಾಕ್‌ಡೌನ್ ಮಾಡಿದರೆ ಮುಂದೆ ಮದ್ಯದ ಸಿಗಲ್ಲ ಎಂಬ ಭಯದಿಂದ ವಾರ ಮತ್ತು ಎರಡು ವಾರಕ್ಕೆ ಸ್ಟಾಕ್ ಇರಲಿ‌‌ ಎಂದು ಇಂದೇ ಸಂಗ್ರಹವನ್ನು ಆರಂಭಿಸಿದ್ದಾರೆ. ಕಳೆದ ವರ್ಷ ಲಾಕ್ ಡೌನ್ ಮಾಡಿದಾಗ ಮದ್ಯಪ್ರಿಯರು ಪರದಾಡಿದ್ದರು.

   ಕೊರೋನ ತಡಿಯೋಕೆ 14 ದಿನಗಳ ಕಾಲ Lock Down! | Oneindia Kannada

   ಲಾಕ್ ಡೌನ್ ಘೋಷಣೆ ಮಾಡಿದರೂ ಬೆಳಗ್ಗೆ 6 ರಿಂದ 10 ಗಂಟೆಯ ತನಕ ಮದ್ಯದಂಗಡಿಗಳು ತೆರೆದಿರುತ್ತವೆ ಎಂದು ಸ್ಪಷ್ಟನೆ ನೀಡಲಾಗಿದೆ. ಆದರೆ, ಜನರು ಮಾತ್ರ ಈಗಲೇ ಖರೀದಿಗೆ ತಾ ಮುಂದು ನಾ ಮುಂದು ಎಂದು ಮುಗಿಬಿದ್ದಿದ್ದಾರೆ.

   English summary
   Karnataka government announced lock down for 14 days. People spotted queuing up outside the liquor stores in Davanagere.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X