ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೇ 3ರವರೆಗೆ ಮದ್ಯ ಸಿಗೋಲ್ಲ: ದಾವಣಗೆರೆ ಡಿಸಿ ಆದೇಶ

|
Google Oneindia Kannada News

ದಾವಣಗೆರೆ, ಏಪ್ರಿಲ್ 15: ಲಾಕ್‌ಡೌನ್‌ನಿಂದ ಇಡೀ ದೇಶದಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ. ಕರ್ನಾಟಕದಲ್ಲಿ ಕೂಡ ಇದೇ ನಿಯಮ ಇದ್ದು, ಮದ್ಯ ಪ್ರಿಯರಿಗೆ ಬೇಸರದ ಸಂಗತಿಯಾಗಿದೆ. ಇಂದು ದಾವಣಗೆರೆಯಲ್ಲಿ ಜಿಲ್ಲಾಧಿಕಾರಿಗಳು ಮದ್ಯ ಮಾರಾಟ ಬಗ್ಗೆ ಆದೇಶವನ್ನು ಹೊರಡಿಸಿದ್ದಾರೆ.

ಮೇ 3ರವರೆಗೆ ಮದ್ಯ ಮಾರಾಟ ಮಾಡಬಾರದು ಎಂದು ದಾವಣಗೆರೆ ಡಿಸಿ ಮಹಂತೇಶ್ ಬೆಳಗಿ ಆದೇಶ ನೀಡಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಇರುವ ಯಾವುದೇ ಬಾರ್‌ಗಳು ಮದ್ಯ ಮಾರಾಟವನ್ನು ಮಾಡುವಂತಿಲ್ಲ. ಯಾರಾದರೂ, ನಿಯಮ ಪಾಲನೆ ಮಾಡದೆ ಇದ್ದರೆ, ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಮದ್ಯದ ಅಂಗಡಿ ತೆರೆಯುವ ಬಗ್ಗೆ ಅಬಕಾರಿ ಸಚಿವರ ಪ್ರತಿಕ್ರಿಯೆ ಮದ್ಯದ ಅಂಗಡಿ ತೆರೆಯುವ ಬಗ್ಗೆ ಅಬಕಾರಿ ಸಚಿವರ ಪ್ರತಿಕ್ರಿಯೆ

ಮೇ 3ರವರೆಗೆ ಭಾರತ ಲಾಕ್‌ಡೌನ್ ಮುಂದುವರೆದಿದ್ದು, ಅಲ್ಲಿಯವರೆಗೆ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು ದಾವಣಗೆರೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಮದ್ಯ ಮಾರಾಟ ಆಗದಂತೆ ಅಬಕಾರಿ ಅಧಿಕಾರಿಗಳು ಹಾಗೂ ಪೊಲೀಸರಿಗೆ ಸೂಚನೆ ನೀಡಿದ್ದಾರೆ.

Liquor Ban Will Continue Till May 3rd Says Davanagere DC

ರಾಜ್ಯದಲ್ಲಿ ಏಪ್ರಿಲ್ 20ರ ನಂತರ ಮದ್ಯ ಮಾರಾಟ ಪುನರಾರಂಭ ಆಗಬಹುದು ಎನ್ನುವ ಮಾತುಗಳು ಇತ್ತು. ಅಬಕಾರಿ ಸಚಿವರು ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಚರ್ಚೆ ಮಾಡುವುದಾಗಿ ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆ ಮದ್ಯ ಮಾರಾಟದ ಬಗ್ಗೆ ಮಾತನಾಡಿದ್ದ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಶಾಸಕ ರೇಣುಕಾಚಾರ್ಯ ತಮ್ಮ ಕ್ಷೇತ್ರದಲ್ಲಿ ಹಲವರು ಜನರು ಮದ್ಯ ಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ ಎಂದು ತಿಳಿಸಿದ್ದರು.

English summary
Liquor ban will continue till may 3rd says Davanagere deputy commissioner Mahantesh Bilagi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X