ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋವಿಡ್ ಬಗ್ಗೆ ಪತ್ರ ಲೇಖನ ಸ್ಪರ್ಧೆ; ಬಹುಮಾನ 25,000 ರೂ.

|
Google Oneindia Kannada News

ದಾವಣಗೆರೆ, ಮಾರ್ಚ್ 18; ಕೋವಿಡ್ 19 ಕಳೆದ ವರ್ಷದಿಂದ ವಿಶ್ವದಲ್ಲಿಯೇ ಆತಂಕ ಮೂಡಿಸಿರುವ ಹೆಸರು. ಕೋವಿಡ್ ವಿಚಾರವನ್ನು ಇಟ್ಟುಕೊಂಡು ಈಗ ಅಂತರಾಷ್ಟ್ರೀಯ ಪತ್ರ ಲೇಖನ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿದೆ. ವಿಜೇತರಾದವರಿಗೆ ನಗದು ಬಹುಮಾನವನ್ನು ನೀಡಲಾಗುತ್ತದೆ.

ಭಾರತೀಯ ಅಂಚೆ ಇಲಾಖೆ ಚಿತ್ರದುರ್ಗ ವಿಭಾಗದ ವತಿಯಿಂದ 15 ವರ್ಷದ ಒಳಗಿನ ಯುವಜನತೆಗೆ ಈ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿದೆ. ಕೋವಿಡ್ 19 ಕುರಿತ ತಮ್ಮ ಅನುಭವವನ್ನು ತಮ್ಮ ಕುಟುಂಬದ ಸದಸ್ಯರಿಗೆ ಪತ್ರ ಬರೆಯುವ ಮೂಲಕ ವಿವರಿಸಬೇಕು.

ಕೋವಿಡ್ ಲಸಿಕೆ ಪಡೆಯಿರಿ: 25 ಸಾವಿರ ಮಕ್ಕಳಿಂದ ಪೋಷಕರಿಗೆ ಪತ್ರ ಕೋವಿಡ್ ಲಸಿಕೆ ಪಡೆಯಿರಿ: 25 ಸಾವಿರ ಮಕ್ಕಳಿಂದ ಪೋಷಕರಿಗೆ ಪತ್ರ

ಈ ಅಂತರಾಷ್ಟ್ರೀಯ ಪತ್ರ ಲೇಖನ ಸ್ಪರ್ಧೆಯನ್ನು ಮಾರ್ಚ್ 28ರಂದು ಆಯೋಜನೆ ಮಾಡಲಾಗಿದೆ. ಸ್ಪರ್ಧೆಯು ಒಂದು ಗಂಟೆಯ ಅವಧಿಯದಾಗಿದ್ದು, 100 ಅಂಕಗಳನ್ನು ಒಳಗೊಂಡಿದೆ.

ಬೆಳಗಾವಿ ಉಪ ಚುನಾವಣೆ; ಬರಲಿದೆ ಹೊಸ ಕೋವಿಡ್ ಮಾರ್ಗಸೂಚಿ ಬೆಳಗಾವಿ ಉಪ ಚುನಾವಣೆ; ಬರಲಿದೆ ಹೊಸ ಕೋವಿಡ್ ಮಾರ್ಗಸೂಚಿ

Letter Writing Competition On COVID 19

ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳು 800 ಪದಗಳನ್ನು ಮೀರದಂತೆ ಪತ್ರ ಬರೆಯಬೇಕು. ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವವರು ತಮ್ಮ ಮೂರು ಭಾವಚಿತ್ರದೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು.

ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಹೊಂದಿದವರಿಗೆ ಮಾತ್ರ ಉತ್ತರ ಕನ್ನಡ ಜಿಲ್ಲೆಗೆ ಪ್ರವೇಶ ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಹೊಂದಿದವರಿಗೆ ಮಾತ್ರ ಉತ್ತರ ಕನ್ನಡ ಜಿಲ್ಲೆಗೆ ಪ್ರವೇಶ

ನಗದು ಬಹುಮಾನ; ಪತ್ರ ಲೇಖನ ಸ್ಪರ್ಧೆಯಲ್ಲಿ ಕರ್ನಾಟಕ ವೃತ್ತ ಮಟ್ಟದಲ್ಲಿ ಪ್ರಥಮ ಬಹುಮಾನ ರೂ. 25000, ದ್ವಿತೀಯ 10,000 ಹಾಗೂ ತೃತೀಯ 4,500 ರೂ.ಗಳಾಗಿವೆ. ಪ್ರಮಾಣ ಪತ್ರವನ್ನು ಸಹ ನೀಡಲಾಗುತ್ತದೆ.

Recommended Video

ಆರೋಗ್ಯಾಧಿಕಾರಿಗಳ ತುರ್ತು ಸಭೆ ಕರೆದ ಆರೋಗ್ಯ ಸಚಿವ ಸುಧಾಕರ್ | Oneindia Kannada

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ದಾವಣಗೆರೆ ಪ್ರಧಾನ ಅಂಚೆ ಕಚೇರಿಯನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ 9986038721.

English summary
Indian post Chitradurga division organized letter writing competition on COVID 19. Children less than age of 15 can participate in the competition.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X