ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆ; ಹಳೇ ಪ್ರವಾಸಿ ಮಂದಿರದಲ್ಲಿ ಅಡಗಿ ಕುಳಿತಿದ್ದ ಚಿರತೆ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಅಕ್ಟೋಬರ್ 10: ಜಿಲ್ಲೆಯ ಚನ್ನಗಿರಿ ತಾಲೂಕಿನ ಸೂಳೆಕೆರೆಯ ಹಳೇ ಪ್ರವಾಸಿ ಮಂದಿರದಲ್ಲಿ ಚಿರತೆಯೊಂದು ಅವಿತು ಕುಳಿತಿದ್ದು, ಅದರ ಘರ್ಜನೆ ಕೇಳಿ ಪ್ರವಾಸಿಗರು, ಸ್ಥಳೀಯರು ಬೆಚ್ಚಿಬಿದ್ದ ಸಂಗತಿ ನಡೆದಿದೆ.

ಸೂಳೆಕೆರೆಯ ಹಳೆ ಪ್ರವಾಸಿ ಮಂದಿರದೊಳಗೆ ಚಿರತೆಯೊಂದು ಅವಿತು ಕುಳಿತಿದೆ. ಈ ಪ್ರವಾಸಿ ಮಂದಿರ ಕೆಲವು ಸಮಯದಿಂದ ಬಳಕೆಯಲ್ಲಿರಲಿಲ್ಲ. ಇದೇ ವೇಳೆ ನೆರಳನ್ನು ಹುಡುಕಿಕೊಂಡು ಕೆಲವು ಪ್ರವಾಸಿಗರು ಈ ಮಂದಿರದತ್ತ ತೆರಳಿದ್ದಾರೆ. ಪ್ರವಾಸಿ ಮಂದಿರದ ಒಳಗಿನಿಂದ ಇದ್ದಕ್ಕಿದ್ದಂತೆ ಚಿರತೆ ಘರ್ಜಿಸುವ ಸದ್ದು ಕೇಳಿಸಿದೆ. ತಕ್ಷಣ ಎಚ್ಚೆತ್ತುಕೊಂಡ ಪ್ರವಾಸಿಗರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

 ಶಿವಮೊಗ್ಗದ ಗ್ರಾಮಕ್ಕೆ ಬಂದ ಚಿರತೆ: ಕ್ರಮ ಕೈಗೊಳ್ಳದ ಅರಣ್ಯ ಇಲಾಖೆ ಶಿವಮೊಗ್ಗದ ಗ್ರಾಮಕ್ಕೆ ಬಂದ ಚಿರತೆ: ಕ್ರಮ ಕೈಗೊಳ್ಳದ ಅರಣ್ಯ ಇಲಾಖೆ

ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಅವಿತಿದ್ದ ಚಿರತೆ ಹಿಮ್ಮೆಟ್ಟಿಸಲು ಮುಂದಾಗಿದ್ದಾರೆ. ಕಿಟಕಿಗಳಿಂದ ಪಟಾಕಿ ಸಿಡಿಸಿದ್ದರಿಂದ ಪಟಾಕಿ ಶಬ್ದಕ್ಕೆ ಹೆದರಿದ ಚಿರತೆಯು ಪ್ರವಾಸಿ ಮಂದಿರದ ಮುಂಬಾಗಿಲಿಂದ ಹಾರಿ ಗುಡ್ಡದ ಕಡೆಗೆ ಓಡಿದೆ. ಆತಂಕಗೊಂಡಿದ್ದ ಸ್ಥಳೀಯರು ಚಿರತೆ ಕಾಡಿನೆಡೆ ಓಡಿದ್ದನ್ನು ಕಂಡು ನಿಟ್ಟುಸಿರುಬಿಟ್ಟಿದ್ದಾರೆ.

Recommended Video

ಇವರೇ ನೋಡಿ ಯುದ್ಧ ವಿಮಾನ ಮಾಹಿತಿ Pakistanನಕ್ಕೆ ಹೇಳ್ತಿರೋದು | Oneindia Kannada
Davanagere: Leopard Hiding In Channagiri Sulekere Old Travellers Centre

ಚಿರತೆ ನೋಡಲು ಜನರು ಸೇರಿದ್ದು, ನೂಕುನುಗ್ಗಲು ಉಂಟಾಗಿತ್ತು. ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

English summary
Tourists and locals were shocked to see leopard which was hiding in old travellers centre at Sulekere at Channagiri taluk in Davanagere,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X