ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬ್ಯಾಂಕ್ ಸಿಬ್ಬಂದಿ ಯಡವಟ್ಟಿನಿಂದ ಪಾಲಿಕೆ ಸದಸ್ಯರಿಗೆ ಬಂತು ಲಕ್ಷ ಲಕ್ಷ ಹಣ!

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಜೂನ್ 5: ಬ್ಯಾಂಕ್ ಸಿಬ್ಬಂದಿಯ ಯಡವಟ್ಟಿನಿಂದಾಗಿ ಪಾಲಿಕೆ ಮೇಯರ್, ಉಪಮೇಯರ್ ಸೇರಿದಂತೆ 50 ಸದಸ್ಯರ ಖಾತೆಗೆ ಲಕ್ಷ ಲಕ್ಷ ಹಣ ಸಂದಾಯವಾಗಿರುವ ಸಂಗತಿ ದಾವಣಗೆರೆಯಲ್ಲಿ ಶನಿವಾರ ಬೆಳಕಿಗೆ ಬಂದಿದೆ.

ಸರ್ಕಾರದಿಂದ ಬರುವ ಸಹಾಯಧನದ ಹಣವು ಸಾವಿರ ರೂಪಾಯಿಗಳಲ್ಲಿ ಸಂದಾಯ ಆಗಬೇಕಿತ್ತು. ಆದರೆ, ಬ್ಯಾಂಕ್ ಸಿಬ್ಬಂದಿ ಮಾಡಿದ ಯಡವಟ್ಟಿನಿಂದಾಗಿ ಈ ತಪ್ಪು ಆಗಿದೆ. ಮೇಯರ್‌ಗೆ 16 ಸಾವಿರ, ಉಪಮೇಯರ್‌ಗೆ 10 ಸಾವಿರ ಹಾಗೂ ಪಾಲಿಕೆಯ ನಾಮನಿರ್ದೇಶಿತರೂ ಸೇರಿದಂತೆ ಇತರೆ ಸದಸ್ಯರಿಗೆ 6 ಸಾವಿರ ರೂಪಾಯಿ ಜಮಾ ಆಗಬೇಕಿತ್ತು. ಆದರೆ ಬ್ಯಾಂಕ್ ಸಿಬ್ಬಂದಿ ಎಸಗಿದ ಪ್ರಮಾದದಿಂದ ಕಳೆದ ತಿಂಗಳ 28ನೇ ತಾರೀಕಿನಂದು ಸುಮಾರು 3 ಕೋಟಿ 20 ಲಕ್ಷ ರೂಪಾಯಿ ಹಣ ಜಮೆಯಾಗಿದ್ದು ತಡವಾಗಿ ಗೊತ್ತಾಗಿದೆ.

Lakhs Of Rupees Credited To Corporation Members By Bank Staffs Mistake

ಮೇಯರ್‌ಗೆ 16 ಲಕ್ಷ, ಉಪ ಮೇಯರ್‌ಗೆ 10 ಲಕ್ಷ, ಪಾಲಿಕೆಯ 48 ಸದಸ್ಯರಿಗೆ ಒಟ್ಟು 6 ಲಕ್ಷ ರೂಪಾಯಿ ಜಮಾ ಆಗಿದೆ. ಕೆಲವೊಬ್ಬರ ಲೋನ್ ಹಣ ಕಟ್ ಆಗಿದ್ದರೆ, ಮತ್ತೆ ಕೆಲವರು ನೋಡಿಕೊಂಡಿಯೇ ಇಲ್ಲ. ಬ್ಯಾಂಕ್ ಸಿಬ್ಬಂದಿಗೆ ಇದು ಗೊತ್ತಾಗುತ್ತಿದ್ದಂತೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬ್ಯಾಂಕ್ ಅಧಿಕಾರಿಗಳು ಎಲ್ಲರಿಗೂ ಕರೆ ಮಾಡಿ ಆಗಿರುವ ಪ್ರಮಾದದ ಬಗ್ಗೆ ಮಾಹಿತಿ ನೀಡಿದ್ದಾರೆ. ಹಣ ವಾಪಸ್ ಪಡೆದಿರುವುದಾಗಿ ಮೇಯರ್ ಎಸ್. ಟಿ. ವೀರೇಶ್ ತಿಳಿಸಿದ್ದಾರೆ.

ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಲೋಪದೋಷವಾದರೆ ಅಧಿಕಾರಿಗಳೇ ಹೊಣೆಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಲೋಪದೋಷವಾದರೆ ಅಧಿಕಾರಿಗಳೇ ಹೊಣೆ

Recommended Video

ಲೆಕ್ಕ ಕೊಟ್ಟು DC Rohini Sindhuri ತಿರುಗೇಟು ಕೊಟ್ಟ Shilpa Nag | Oneindia Kannada

ಇನ್ನು ಪಾಲಿಕೆಯ ನಾಮನಿರ್ದೇಶಿತ ಸದಸ್ಯ ಶಿವನಗೌಡ ಮಾತನಾಡಿ, ಆರು ಲಕ್ಷ ರೂಪಾಯಿ ನನಗೆ ಬಂದಿತ್ತು. ಸುಮಾರು 50 ಜನರಿಗೂ ಬಂದಿದೆ. ಗೌರವಧನದ ಬದಲಾಗಿ ತಾಂತ್ರಿಕ ದೋಷದಿಂದ ಈ ರೀತಿಯಾಗಿದೆ. ಪಾಲಿಕೆಯ ಲೆಕ್ಕಾಧಿಕಾರಿ ಕರೆ ಮಾಡಿ ಹಣ ಪ್ರಮಾದದಿಂದ ಬಂದಿದೆ. ಇದನ್ನು ಬಳಸಿಕೊಳ್ಳಬೇಡಿ ಎಂದು ಮನವಿ ಮಾಡಿದ್ದರು ಎಂದು ತಿಳಿಸಿದರು.

English summary
Lakhs of rupees credited to davangere corporation members by bank staff mistake
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X