ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆ: ಕ್ಷತ್ರಿಯ ಮರಾಠ ಸಮಾಜದಿಂದ ಬೃಹತ್ ಪ್ರತಿಭಟನೆ

By Mahesh
|
Google Oneindia Kannada News

ದಾವಣಗೆರೆ, ಸೆ. 08: ರಾಜ್ಯ ಕ್ಷತ್ರಿಯ ಮರಾಠ ಸಮಾಜವನ್ನು ಪ್ರವರ್ಗ 3 (ಬಿ) ಯಿಂದ 2(ಎ) ಪ್ರವರ್ಗಕ್ಕೆ ಸೇರ್ಪಡೆಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕ್ಷತ್ರಿಯ ಮರಾಠ ವಿದ್ಯಾವರ್ಧಕ ಸಂಘದ ನೇತೃತ್ವದಲ್ಲಿ ಸಕಲ ಮರಾಠ ಸಮಾಜ, ಏಕ್ ಮರಾಠ ಲಾಕ್ ಮರಾಠಾ ಕ್ರಾಂತಿ ಮೋರ್ಚಾದಿಂದ ಬೃಹತ್ ಪ್ರತಿಭಟನಾ ಜಾಥಾ ನಡೆಸಲಾಗಿದೆ.

ಕ್ಷತ್ರಿಯ ಮರಾಠರೇ, ಬೆಂಗಳೂರು ಚಲೋಗೆ ಸಿದ್ಧರಾಗಿ; ಸಿಂಧ್ಯಾಕ್ಷತ್ರಿಯ ಮರಾಠರೇ, ಬೆಂಗಳೂರು ಚಲೋಗೆ ಸಿದ್ಧರಾಗಿ; ಸಿಂಧ್ಯಾ

ನಗರದ ದುರ್ಗಾಂಬಿಕ ದೇವಸ್ಥಾನದ ಹತ್ತಿರದ ಛತ್ರಪತಿ ಶಿವಾಜಿ ಸರ್ಕಲ್ ಬಳಿಯಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಉಪವಿಭಾಗಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು, ಉಪ ವಿಭಾಗಾಧಿಕಾರಿಗಳ ಮುಖೇನ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

Kshatriya Maratha Kranti Morcha rally with various demand

ಪ್ರವರ್ಗ 3 (ಬಿ) ಯಲ್ಲಿ ಅನೇಕ ಮುಂದುವರೆದ ಮತ್ತು ಬಲ ಸಮಾಜಗಳಿರುವುದರಿಂದ ಕ್ಷತ್ರಿಯ ಮರಾಠ ಸಮಾಜ ಬಾಂಧವರು ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಲು ಹಾಗೂ ಸರ್ಕಾರದ ಸೌಲಭ್ಯಗಳನ್ನು ಪಡೆಯುವಲ್ಲಿ ವಂಚಿತರಾಗಿದ್ದಾರೆ.

ಮರಾಠ ಸಮಾಜವನ್ನು ಸದ್ಯ 3ಬಿಯಲ್ಲಿ ಸೇರಿಸಲಾಗಿದೆ. ಇದರಿಂದ ಸಮಾಜದ ವಿದ್ಯಾರ್ಥಿಗಳು ಸರ್ಕಾರಿ ಹಾಗೂ ಶೈಕ್ಷಣಿಕ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಶೇ.95ಕ್ಕಿಂತಲೂ ಹೆಚ್ಚು ಅಂಕ ಪಡೆದರೂ ಸೌಲಭ್ಯ ದೊರೆಯುತ್ತಿಲ್ಲ ಎಂದು ಪ್ರತಿಭಟನೆಯ ಮುಂದಾಳತ್ವ ವಹಿಸಿದ್ದ ಸಂಘದ ಗೌರವಾಧ್ಯಕ್ಷ ಯಶವಂತರಾವ್ ಜಾಧವ್ ಹೇಳಿದರು.

* ಉಪ ಪಂಗಡಗಳಾದ ಭಾವಸಾರ ಕ್ಷತ್ರಿಯ, ಸೂರ್ಯವಂಶಿ ಕ್ಷತ್ರಿಯ, ನಾಮದೇವ ಸಿಂಪಿ, ಸ್ವಕುಳಸಾಳಿ ಸಮಾಜ, ಸಹಸ್ರಾರ್ಜುನ ಆರ್ಯ ಕ್ಷತ್ರಿಯ, ಲಾಡ್ ಸಮಾರ ಈಗಾಗಲೇ 2ಎ ಪ್ರವರ್ಗದಲ್ಲಿವೆ. ಕರ್ನಾಟಕ ರಾಜ್ಯ ಸರ್ಕಾರದ ಹಿಂದುಳಿದ ಆಯೋಗದ ಶಿಫಾರಸ್ಸಿನಂತೆ ಕ್ಷತ್ರೀಯ ಸಮಾಜವನ್ನು 2ಎಗೆ ಸೇರಿಸಬೇಕೆಂದು ಆಗ್ರಹಿಸಿದರು.
* ಚನ್ನಗಿರಿ ತಾಲ್ಲೂಕಿನ ಹೊದಿಗೆರೆಯಲ್ಲಿರುವ ಷಹಾಜಿ ರಾಜೇ ಭೋಂಸ್ಲೆ ಅವರ ಸಮಾಧಿ ಸ್ಥಳವನ್ನು ಪುಣ್ಯ ಸ್ಥಳವೆಂದು ಘೋಷಿಸಿ ಸಮಗ್ರ ವಿಕಾಸಕ್ಕೆ ಪ್ರಾತಿನಿಧ್ಯ ಹಾಗೂ ಪ್ರೇಕ್ಷಣಿಯ ಸ್ಥಳದ ಮಾನ್ಯತೆ ನೀಡಬೇಕು. ಇಲ್ಲಿಯೇ ಸೈನಿಕ ಶಾಲೆಯನ್ನು ಆರಂಭಿಸಬೇಕು.
* ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಷಹಾಜಿ ರಾಜೇ ಭೋಂಸ್ಲೆ ಅವರ ಅಧ್ಯಯನ ಪೀಠ ಸ್ಥಾಪಿಸಬೇಕು. ದಾವಣಗೆರೆ ವಿವಿಗೆ ಛತ್ರಪತಿ ಶಿವಾಜಿ ಮಹಾರಾಜರ ಹೆಸರು ನಾಮಕರಣ ಮಾಡಬೇಕು.
* ಕಾಗಿನೆಲೆ, ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರ ರಚನೆಯಂತೆ ರಾಜ್ಯ ಕ್ಷತ್ರಿಯ ಪ್ರಾಧಿಕಾರ ರಚಿಸಬೇಕೆಂದು ಒತ್ತಾಯಿಸಿದರು.

English summary
Davanagere: Kshatriya Maratha Kranti Morcha conducted huge rally and government to include Kshatriya Maratha Community to 2A category instead of 3A.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X