ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುರುಬ ಸಮಾವೇಶ: ಸಿದ್ದರಾಮಯ್ಯ ಮೇಲೆ ಸಚಿವ ಈಶ್ವರಪ್ಪ ಗರಂ!

|
Google Oneindia Kannada News

ಬೆಂಗಳೂರು, ಅ. 12: ಕುರುಬ ಸಮಾಜದ ಸಮಾವೇಶಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಅವರ ಮೇಲೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಗರಂ ಆಗಿದ್ದಾರೆ. ದಾವಣಗೆರೆಯಲ್ಲಿ ಈ ಬಗ್ಗೆ ಮಾತನಾಡಿರುವ ಅವರು ಅವರನ್ನೇ ಈ ಬಗ್ಗೆ ಕೇಳಿ ಎಂದಿದ್ದಾರೆ.

ಶನಿವಾರ (ಅ.11) ಕುರುಬ ಸಮುದಾಯಕ್ಕೆ ಎಸ್‌ಟಿ ಮೀಸಲು ಕೊಡುವಂತೆ ಆಗ್ರಹಿಸಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಕುರುಬ ಸಮುದಾಯದ ಬೃಹತ್ ಸಮಾವೇಶ ನಡೆಸಲಾಗಿತ್ತು. ಆ ಸಮಾವೇಶಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಗೈರಾಗಿದ್ದರು.

 KS Eshwarappa objected obscene of Siddaramaiah to shepherd community Convention

ಶ್ರೀರಾಮುಲು ಅವರ ಖಾತೆ ಬದಲಾವಣೆ: ಕೆ.ಎಸ್ ಈಶ್ವರಪ್ಪ ಹೇಳಿದ್ದು ಹೀಗೆಶ್ರೀರಾಮುಲು ಅವರ ಖಾತೆ ಬದಲಾವಣೆ: ಕೆ.ಎಸ್ ಈಶ್ವರಪ್ಪ ಹೇಳಿದ್ದು ಹೀಗೆ

ಸಿದ್ದರಾಮಯ್ಯ ಅವರು ಸಮಾವೇಶದಲ್ಲಿ ಭಾಗವಹಿಸದಿರುವ ಬಗ್ಗೆ ಈಶ್ವರಪ್ಪ ಅವರನ್ನು ಕೇಳಿದಾಗ, ಈ ಬಗ್ಗೆ ಅವರನ್ನೇ ಕೇಳಿ. ನನ್ನನ್ಯಾಕೆ ಈ ಬಗ್ಗೆ ಕೇಳ್ತೀರಿ? ಯಾಕೇ ಬಂದಿಲ್ಲ ಅಂತಾ ಸಿದ್ದರಾಮಯ್ಯ ಅವ್ರನ್ನು ನಾನು ಕೇಳೊದಕ್ಕೆ ಆಗುತ್ತದೆಯಾ? ಎಂದು ಗರಂ ಆಗಿ ಉತ್ತರಿಸಿದರು. ಕುರುಬ ಸಮುದಾಯಕ್ಕೆ ಎಸ್‌ಟಿ ಮೀಸಲು ಬೇಡಿಕೆ 1935 ರಿಂದ ಬೆಂಗಳೂರಿನಿಂದ ದೆಹಲಿಗೆ ಓಡಾಡುತ್ತಲೇ ಇದೆ. ಹೀಗಾಗಿ ಹೋರಾಟದ ನೇತೃತ್ವವನ್ನು ವಹಿಸಿಕೊಳ್ಳುವಂತೆ ಕಾಗಿನೆಲೆ ಶ್ರೀಗಳು ಸೂಚಿಸಿದ್ದರು.

 KS Eshwarappa objected obscene of Siddaramaiah to shepherd community Convention

Recommended Video

Narendra Modi ಇಂದು ಹೊಸ 100 ರುಪಾಯಿಯ ನಾಣ್ಯವನ್ನು ಪರಿಚಯಿಸಿದರು| Oneindia Kannada

ಅದರಂತೆ ಎಸ್‌ ಮೀಸಲು ಬೇಡಿಕೆ ಹೋರಾಟ ಶುರುವಾಗಿದೆ. ಯಾವುದೇ ಸಮಾಜ ಸೌಲಭ್ಯ ಕೇಳುವುದು ತಪ್ಪಲ್ಲ. ಸರ್ಕಾರ ಹಾಗೂ ಕುರುಬ ಸಮಾಜದ ನಡುವೆ ಕೊಂಡಿಯಾಗಿ ನಾನು ಸೇವೆ ಮಾಡುತ್ತೇನೆ. ಕೊನೆಯಲ್ಲಿ ಕೇಂದ್ರ ಸರ್ಕಾರ ಎಸ್‌ ಮೀಸಲಾತಿ ನೀಡುವುದರ ಬಗ್ಗೆ ತೀರ್ಮಾನಿಸಲಿದೆ ಎಂದು ಹೇಳಿದರು.

English summary
K.S. Eshwarappa objected the obscene of Siddaramaiah to shepherd community Convention
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X