ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಳೆದ ವರ್ಷ ಮೋದಿಗೆ, ಈ ವರ್ಷ ಅಮೆರಿಕ ಅಧ್ಯಕ್ಷರಿಗೆ ಮಾಸ್ಕ್ ಕಳುಹಿಸಿದ ದಾವಣಗೆರೆ ಕುಟುಂಬ!

|
Google Oneindia Kannada News

ದಾವಣಗೆರೆ, ಮೇ 10: ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಸ್ಕ್ ಕಳುಹಿಸಿಕೊಟ್ಟು ಗಮನ ಸೆಳೆದಿದ್ದ ದಾವಣಗೆರೆ ನಗರದ ಎಂಸಿಸಿ ಬಿ ಬ್ಲಾಕ್ ನ ನಿವಾಸಿ ಕೆ.ಪಿ ವಿವೇಕಾನಂದ ಕುಟುಂಬ, ಈ ಬಾರಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹಾಗೂ ಉಪಾಧ್ಯಕ್ಷೆ ಕಮಲ ಹ್ಯಾರಿಸ್ ಅವರಿಗೂ ವಿಶೇಷ ಮುಖಗವಸು(ಮಾಸ್ಕ್) ತಯಾರಿಸಿ ಕಳುಹಿಸಿಕೊಟ್ಟಿದ್ದಾರೆ. ತಲುಪಿರುವ ಬಗ್ಗೆ ಅಲ್ಲಿಂದ ಉತ್ತರವೂ ಬಂದಿದೆ.

ಟೈಲರಿಂಗ್ ಕೆಲಸ ಮಾಡುವ ವಿವೇಕಾನಂದ ಅವರಿಗೆ ಅವರ ಪತ್ನಿ ಶಾಂತ ಹಾಗೂ ಪುತ್ರಿ ಕಾವ್ಯ ಸಾಥ್ ಕೊಟ್ಟಿದ್ದಾರೆ. ಇನ್ನು ಮಾಸ್ಕ್ ಅನ್ನು‌ ಮನೆಯಲ್ಲಿ ರೂಪಿಸಲಾಗಿದ್ದು, ಮೂರು ಲೇಯರ್ ಹೊಂದಿದೆ. ಉಸಿರಾಟಕ್ಕೂ ಯಾವುದೇ ರೀತಿಯ ಸಮಸ್ಯೆ ಆಗುವುದಿಲ್ಲ. ಮೂಗು, ಬಾಯಿಗೆ ಸರಿಯಾಗಿ ಕೂರುವುದು ಈ ಮಾಸ್ಕ್ ನ ಸ್ಪೆಷಾಲಿಟಿ.

ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ ಘಟಾನುಘಟಿ ನಾಯಕರಿಗೆ ಮಾಸ್ಕ್ ಕಳುಹಿಸಿಕೊಡಲಾಗಿದೆ. ಇನ್ನು ಮಾಸ್ಕ್ ಸಿಕ್ಕಿರುವ ಬಗ್ಗೆ ಪ್ರತಿಕ್ರಿಯೆಯನ್ನು ಕಳುಹಿಸಿಕೊಟ್ಟಿದ್ದಾರೆ. ವೆಂಕಯ್ಯ ನಾಯ್ಡು ಅವರು ಮಾಸ್ಕ್ ಬಗ್ಗೆ‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Davanagere: KP Vivekananda And His Family Prepared And Sent Special Mask To US President

ಕಳೆದ ವರ್ಷ ಲಾಕ್ ಡೌನ್ ವೇಳೆ ಮನೆಯಲ್ಲಿಯೇ ಇದ್ದ ವಿವೇಕಾನಂದ ಅವರು ಮಾಸ್ಕ್ ತಯಾರಿಸಲು ಮುಂದಾದರು. ಆಗ ಧರಿಸಿದವರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣದ ಮಾಸ್ಕ್ ರೂಪಿಸಿ ಪ್ರಧಾನಿ ನರೇಂದ್ರ ಮೋದಿಗೆ ಕಳುಹಿಸಿಕೊಟ್ಟಿದ್ದರು.

Davanagere: KP Vivekananda And His Family Prepared And Sent Special Mask To US President

ಅದನ್ನು ಮೋದಿ ಅವರು ಧರಿಸಿದ ಫೋಟೋ ಸಾಕಷ್ಟು ವೈರಲ್ ಆಗಿತ್ತು. ಬಳಿಕ ಎಲ್ಲೆಡೆಯಿಂದ ಮಾಸ್ಕ್ ಗೆ ಬೇಡಿಕೆಗೆ ಬಂದಿತ್ತು. ಆದರೆ ಈಗ ಅಮೆರಿಕ ಅಧ್ಯಕ್ಷರಿಗೆ ಮಾಸ್ಕ್ ಕಳುಹಿಸಿಕೊಡುವ ಮೂಲಕ ದಾವಣಗೆರೆ ಹೆಸರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ.

Davanagere: KP Vivekananda And His Family Prepared And Sent Special Mask To US President

Recommended Video

Covid 19 ಪರಿಸ್ಥಿತಿಯಲ್ಲು Tax ಬರೇ ಎಳಿತಿರೋ Nirmala Sitharaman | Oneindia Kannada

"ನಾನು ನನ್ನ ಕುಟುಂಬದವರೆಲ್ಲರೂ ಸೇರಿ‌ ಮಾಸ್ಕ್ ರೂಪಿಸುವ ಕಾರ್ಯದಲ್ಲಿ ತೊಡಗಿದ್ದೇವೆ‌. ಮೋದಿ ಅವರು ನಾವು ತಯಾರಿಸಿದ ಮಾಸ್ಕ್ ಧರಿಸಿದ್ದು ತುಂಬಾ ಖುಷಿ ನೀಡಿದೆ. ಅಮೆರಿಕ ಅಧ್ಯಕ್ಷರಿಗೆ ತಲುಪಿರುವ ಬಗ್ಗೆ ಉತ್ತರ ಬಂದಿರುವುದು ತುಂಬಾ ಸಂತಸ ತಂದಿದೆ. ಇದಕ್ಕೆಲ್ಲಾ ನನ್ನ ಪುತ್ರಿ ಕಾವ್ಯಳ ಪರಿಶ್ರಮವೇ ಕಾರಣ'' ಎಂದು ವಿವೇಕಾನಂದ ಹೇಳಿದ್ದಾರೆ.

English summary
The family of Davanagere City resident KP Vivekananda and his family has prepared and sent a special masks to US President Joe Biden and Vice President Kamala Harris.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X