ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನವೆಂಬರ್ ನಲ್ಲಿ ರಾಹುಲ್ ಗಾಂಧಿ ರಾಜ್ಯ ಪ್ರವಾಸ; ಸಚಿನ್ ಮೀಗಾ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಅಕ್ಟೋಬರ್ 20; ಕೇಂದ್ರ ಸರ್ಕಾರದ ರೈತ ವಿರೋಧಿ ಮಸೂದೆ ಜಾರಿ ವಿರುದ್ಧ ನವೆಂಬರ್ ತಿಂಗಳಿನಲ್ಲಿ ಕಿಸಾನ್ ಯಾತ್ರೆ ಆರಂಭಿಸಲಿದ್ದು, ಎರಡು ದಿನಗಳ ಕಾಲ ರಾಹುಲ್ ಗಾಂಧಿ ರಾಜ್ಯ ಪ್ರವಾಸ ಮಾಡಲಿದ್ದಾರೆ ಎಂದು ರಾಜ್ಯ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾದ ಸಚಿನ್ ಮೀಗಾ ತಿಳಿಸಿದ್ದಾರೆ.

ಇಂದು ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ವಿರುದ್ಧ ನವೆಂಬರ್ ತಿಂಗಳ 7,8 ಇಲ್ಲವೆ 9ನೇ ತಾರೀಕಿನಂದು ರಾಜ್ಯದಲ್ಲಿ ಕಿಸಾನ್ ಯಾತ್ರೆ ಆರಂಭಿಸಲಿದ್ದೇವೆ. ಎರಡು ದಿನ ರಾಹುಲ್ ಗಾಂಧಿ ರಾಜ್ಯ ಪ್ರವಾಸ ಮಾಡಲಿದ್ದಾರೆ ಎಂದು ತಿಳಿಸಿದರು. ಕೇಂದ್ರ ಸರ್ಕಾರದ ನೀತಿ ವಿರೋಧಿಸಿ ಈಗಾಗಲೇ ದೇಶಾದ್ಯಂತ ಪ್ರತಿಭಟನೆಗಳು ಶುರುವಾಗಿವೆ. ಕೇಂದ್ರ ಸರ್ಕಾರದ ವಿರುದ್ದ ವಿರೋಧಿ ಅಲೆ ದೇಶದಲ್ಲಿ ಎದ್ದಿದೆ. ಬೆಳಗಾವಿ ಹಾಗೂ ಬೀದರ್ ಡಿವಿಜನ್ ನಲ್ಲಿ ಮೊದಲು ಕಿಸಾನ್ ಯಾತ್ರೆ ಮಾಡಲಿದ್ದೇವೆ ಎಂದು ತಿಳಿಸಿದರು.

ಬಿಜೆಪಿ ಪಕ್ಷಕ್ಕೆ ತಿನ್ನುವ ಅನ್ನ ಜೀರ್ಣವಾಗುತ್ತಿಲ್ಲ: ಕಾಂಗ್ರೆಸ್ ಮಾಜಿ ಶಾಸಕಬಿಜೆಪಿ ಪಕ್ಷಕ್ಕೆ ತಿನ್ನುವ ಅನ್ನ ಜೀರ್ಣವಾಗುತ್ತಿಲ್ಲ: ಕಾಂಗ್ರೆಸ್ ಮಾಜಿ ಶಾಸಕ

ಬಿಜೆಪಿ ಸರ್ಕಾರ ರೈತ ವಿರೋಧಿ ನೀತಿ ಜಾರಿಗೆ ತರಲು ಮುಂದಾಗಿರುವುದು ಖಂಡನೀಯ. ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತರು ಮಾರುಕಟ್ಟೆಯಿಂದ ಹೊರಗೆ ಮಾರಾಟ ಮಾಡಬೇಕಾಗುತ್ತದೆ. ಇದರಿಂದ ಎಪಿಎಂಸಿ ಸಂಪೂರ್ಣ ಮುಚ್ಚಿ ಹೋಗುತ್ತದೆ. ಅಂತರ ರಾಷ್ಟ್ರೀಯ ಮಾರುಕಟ್ಟೆ ಹೆಸರಲ್ಲಿ ರೈತರ ಶೋಷಣೆ ನಡೆಯುತ್ತದೆ. ರೈತರು ಉದ್ಯಮಿಗಳ ಗುಲಾಮರಾಗಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Davanagere: Kissan Yatra Set To Begin In November Month

ಈ ನಡೆಯನ್ನು ಖಂಡಿಸಿ ಮುಂದಿನ ತಿಂಗಳು ರಾಜ್ಯದಲ್ಲಿ ಕಿಸಾನ್ ಯಾತ್ರೆ ಆರಂಭಿಸುವ ಮೂಲಕ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜು ವಿ ಶಿವಗಂಗಾ, ಕಿಸಾನ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಾತಿ ಶಿವಕುಮಾರ್, ಪ್ರವೀಣ್ ಕುಮಾರ್ ಎಸ್ ಕೆ. ಮಾಯಕೊಂಡ ಬ್ಲಾಕ್ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಹಾಲೇಶ್ ಬಸವನಾಳ್ ಸೇರಿದಂತೆ ಕಿಸಾನ್ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

English summary
"The Kissan Yatra is set to begin in November against the central government's agriculture bills" said state Kissan Congress president Sachin Meega,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X