ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಶಿ ಮತ್ತು ಮಥುರಾದಲ್ಲಿ ದೇವಸ್ಥಾನಗಳನ್ನೇ ಒಡೆದು ಹಾಕಿದ್ದಾರಾ?

By Lekhaka
|
Google Oneindia Kannada News

ದಾವಣಗೆರೆ, ಡಿಸೆಂಬರ್.01: ಕಾಶಿ ಮತ್ತು ಮಥುರಾದಲ್ಲಿ ದೇವಸ್ಥಾನ ಒಡೆದು ಮಸೀದಿ ನಿರ್ಮಿಸಿದ್ದಾರೆ. ಮುಸ್ಲಿಂ ಸಮುದಾಯ ಅವುಗಳನ್ನು ಬಿಟ್ಟು ಕೊಡಬೇಕು. ಇಲ್ಲಿದಿದ್ದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮಧ್ಯ ಪ್ರವೇಶಿಸಬೇಕು ಎಂದು ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಪ್ರಮೋದ್‌ ಮುತಾಲಿಕ್ ಆಗ್ರಹಿಸಿದ್ದಾರೆ.
ದಾವಣಗೆರೆಯ ಶಾಂತಿ ರಾಯಲ್‌ ಹಾಲ್‌ನಲ್ಲಿ ಆಯೋಜಿಸಿದ್ದ ಶ್ರೀರಾಮಸೇನೆಯ ರಾಜ್ಯ ಕಾರ್ಯಕಾರಣಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶ್ರೀರಾಮ ಜನ್ಮ ಭೂಮಿ ನ್ಯಾಯಾಲಯದ ಮೂಲಕ ಹಿಂದೂಗಳಿಗೆ ದೊರೆತಿದೆ. ರಾಮಮಂದಿರ ನಿರ್ಮಾಣದ ಸಮಿತಿ ರಚನೆಗೆ ಮೂರು ತಿಂಗಳ ಅವಕಾಶವಿದೆ. ಈ ಸಮಿತಿಯಲ್ಲಿ ರಾಜಕಾರಣಿಗಳಾರೂ ಇರಬಾರದು ಎಂದು ಎಚ್ಚರಿಸಿದರು.

ಅಯೋಧ್ಯೆ ತೀರ್ಪಿನ ಹಿನ್ನೆಲೆ ಹುಬ್ಬಳ್ಳಿ ಬಾಂಬ್ ಸ್ಫೋಟದ ಸಂಚು";ಪ್ರಮೋದ್ ಮುತಾಲಿಕ್
ಇನ್ನೊಂದಡೆ ಕಾಶಿ ಮತ್ತು ಮಥುರಾದಲ್ಲಿ ದೇವಸ್ಥಾನ ಒಡೆದು ಮಸೀದಿ ನಿರ್ಮಿಸಿದ್ದಾರೆ. ಇವುಗಳನ್ನು ಮುಸ್ಲಿಂ ಸಮುದಾಯವರು ಬಿಟ್ಟುಕೊಡಬೇಕು. ಕಾಶಿ ಮತ್ತು ಮಥುರಾ ದೇವಸ್ಥಾನ ನಿರ್ಮಾಣಕ್ಕೆ ಪಾರ್ಲಿಮೆಂಟ್‌ನಲ್ಲಿ ಅನುಮೋದನೆ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ.

Kashi And Mathura Muslims Smashed The Temples And Build There Mosque

ಹೈದರಾಬಾದ್‌ನಲ್ಲಿ ಇತ್ತೀಚಿಗೆ ನಡೆದ ಪ್ರಿಯಾಂಕಾ ರೆಡ್ಡಿ ಅತ್ಯಾಚಾರ, ಕೊಲೆ ಪ್ರಕರಣವನ್ನು ಪ್ರಮೋದ್ ಮುತಾಲಿಕ್ ಖಂಡಿಸಿದ್ದಾರೆ. ಇಂಥ ಕೃತ್ಯಗಳಿಗೆ ನ್ಯಾಯಲಯಗಳಲ್ಲಿ ನ್ಯಾಯ ವಿಳಂಬ ನೀತಿಯೇ ಕಾರಣ ಎಂದು ಆರೋಪಿಸಿದರು.
ಭಯೋತ್ಪಾದಕನ ವಿಚಾರಣೆಗೆ ರಾತ್ರಿ 12ಕ್ಕೆ ಸುಪ್ರಿಂಕೋರ್ಟ್ ಕೆಲಸ ಮಾಡುತ್ತದೆ. ನಿರ್ಭಯಾ ಕೇಸ್‌ನ ಆರೋಪಿಗಳಿಗೆ ಈವರೆಗೆ ಕೋರ್ಟ್‌ ಶಿಕ್ಷೆ ವಿಧಿಸಿಲ್ಲ. ಅನ್ಯ ಪ್ರಕರಣಗಳನ್ನು ಬದಿಗಿಟ್ಟು, ಇಂಥ ಪ್ರಕರಣಗಳನ್ನು ಮೂರ್ನಾಲ್ಕು ತಿಂಗಳಲ್ಲಿ ತೀರ್ಪು ನೀಡಬೇಕು ಎಂದು ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.

English summary
Kashi And Mathura Muslims Smashed The Temples And Build There Mosque. The Muslim community must give them up- Pramod Mutalik.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X