India
  • search
  • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಠ್ಯಪರಿಷ್ಕರಣೆ ಉದ್ದಟತನ ಹೀಗೆ ಬಿಟ್ಟರೆ ಕಷ್ಟ ಎದುರಿಸಲು ಸಿದ್ಧರಾಗಿ: ಸಿಎಂಗೆ ಕಾಗಿನೆಲೆ ಶ್ರೀ ಎಚ್ಚರಿಕೆ!

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಜೂ.25: ರಾಜ್ಯದಲ್ಲಿ ಪಠ್ಯಕ್ರಮ ಪರಿಷ್ಕರಣೆ ವಿಚಾರ ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ. ಈಗ ಆಗಿರುವ ಲೋಪದೋಷ ಸರಿಪಡಿಸಿ. ಇದೇ ರೀತಿಯ ಉದ್ಧಟತನ ಹಾಗೂ ಕಾರ್ಯವೈಖರಿ ಇದೇ ರೀತಿಯಲ್ಲಿ ಮುಂದುವರಿದರೆ ಮುಂಬರುವ ದಿನಗಳಲ್ಲಿ ಬಹಳ ಕಷ್ಟ ಅನುಭವಿಸಬೇಕಾಗುತ್ತದೆ ಎಂದು ಬೆಳ್ಳೂಡಿಯ ಕಾಗಿನೆಲೆ ಮಠದ ಪೀಠಾಧಿಪತಿ ನಿರಂಜನಾನಂದಪುರಿ ಮಹಾಸ್ವಾಮೀಜಿ ಎಚ್ಚರಿಕೆ‌ ನೀಡಿದರು.

ಹರಿಹರದ ಬೆಳ್ಳೂಡಿಯ ಕನಕ ಪೀಠದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಿಎಂ ಬಸವರಾಜ ಬೊಮ್ಮಾಯಿ, ಶಿಕ್ಷಣ ಸಚಿವರು ಉದ್ಧಟತನ ಬಿಟ್ಟು ಗೊಂದಲ ಪರಿಹರಿಸಬೇಕು. ಆಗಿರುವ ಪ್ರಮಾದ ಸರಿಪಡಿಸಬೇಕು ಎಂದು ಆಗ್ರಹಿಸಿದರು.

ದಾವಣಗೆರೆ ಗ್ರಾಮೀಣ ಜನರಿಗೆ ಲಕ್ಷಾಂತರ ರೂಪಾಯಿ ಬಿಲ್‌ ಶಾಕ್ ನೀಡಿದ ಬೆಸ್ಕಾಂದಾವಣಗೆರೆ ಗ್ರಾಮೀಣ ಜನರಿಗೆ ಲಕ್ಷಾಂತರ ರೂಪಾಯಿ ಬಿಲ್‌ ಶಾಕ್ ನೀಡಿದ ಬೆಸ್ಕಾಂ

ಕುರುಬ ಸಮುದಾಯವನ್ನು ಎಸ್ಟಿ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ನಾವು ಸುಮ್ಮನೆ ಕುಳಿತಿಲ್ಲ. ಬುಡಕಟ್ಟು ಸಮುದಾಯ ಕೇಂದ್ರದವರು ಈಗಾಗಲೇ‌ ಸಂಶೋಧನೆ ನಡೆಸುತ್ತಿದ್ದು, ಇನ್ನು ಕೆಲವೇ ತಿಂಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಲಿದೆ. ಮಾಧ್ಯಮಗಳ ಮುಂದೆ ಎಲ್ಲವನ್ನೂ ಹೇಳಲು ಆಗದು. ಕೆಲ ವಿಚಾರಗಳನ್ನು ಗೌಪ್ಯವಾಗಿಡುವಂತೆ ಹೇಳಲಾಗಿದೆ. ನಿರಂತರವಾಗಿ ಈ ಬಗ್ಗೆ ಹೋರಾಟ ಮಾಡಲಾಗುತ್ತಿದೆ.

ನಾವು ಎಲ್ಲರ ಜೊತೆಗೂಡಿ ಹೋರಾಟಕ್ಕೆ ಇಳಿಯಬೇಕಾಗುತ್ತದೆ

ನಾವು ಎಲ್ಲರ ಜೊತೆಗೂಡಿ ಹೋರಾಟಕ್ಕೆ ಇಳಿಯಬೇಕಾಗುತ್ತದೆ

ಯಾವುದೇ ಒಂದು ಜಾತಿಗೆ ಶಿಕ್ಷಣ ಸೀಮಿತ ಮಾಡಬಾರದು. ಕುವೆಂಪು, ಜಗಜ್ಯೋತಿ ಬಸವಣ್ಣ, ಕನಕದಾಸರು ಸೇರಿದಂತೆ ಮಹಾನ್ ಮಾನವತವಾದಿಗಳ ಸತ್ಯವಾದ ಜೀವನ ಚರಿತ್ರೆಯನ್ನು ಸಮುದಾಯಕ್ಕೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಪಠ್ಯದಲ್ಲಿ ಕೆಲವೊಂದು ಅಂಶಗಳನ್ನು ಮುಚ್ಚಿಟ್ಟು ಇಲ್ಲಸಲ್ಲದ ಅಂಶಗಳನ್ನು ಸೇರಿಸಲು ಮುಂದಾದರೆ ಸಹಿಸಲು ಸಾಧ್ಯವಿಲ್ಲ.‌ ಇಂಥ ಕೆಲಸ ಅಕ್ಷಮ್ಯ ಅಪರಾಧ. ಲೋಪದೋಷಗಳನ್ನು ಆದಷ್ಟು ಬೇಗ ಸರಿಪಡಿಸಿಕೊಳ್ಳುತ್ತೀರಾ ಎಂಬ ವಿಶ್ವಾಸ ಇದೆ. ನಾವು ಎಲ್ಲರ ಜೊತೆಗೂಡಿ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದರು.

ದಾವಣಗೆರೆ; ಕಾನನಕಟ್ಟೆಯಲ್ಲಿ ನಿಗೂಢ ಜ್ವರ, ಜನರಲ್ಲಿ ಆತಂಕದಾವಣಗೆರೆ; ಕಾನನಕಟ್ಟೆಯಲ್ಲಿ ನಿಗೂಢ ಜ್ವರ, ಜನರಲ್ಲಿ ಆತಂಕ

ಮಠಕ್ಕೆ ರಾಜಕಾರಣಿಗಳಿಗೆ ಬರಬೇಡಿ ಎನ್ನಲು ಆಗದು

ಮಠಕ್ಕೆ ರಾಜಕಾರಣಿಗಳಿಗೆ ಬರಬೇಡಿ ಎನ್ನಲು ಆಗದು

ರಾಜ್ಯಾದ್ಯಂತ ಬುಡಕಟ್ಟು ಸಂಶೋಧನಾ ಕೇಂದ್ರದಿಂದ ಸಂಶೋಧನೆ ಮಾಡಿಸಿ ಎಲ್ಲಾ ವರದಿಗಳನ್ನು ಸಮರ್ಪಕ ಹಾಗೂ ಕರಾರುವಕ್ಕಾದ ವರದಿ ಒಂದು ತಿಂಗಳೊಳಗೆ ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ. ಆ ಬಳಿಕ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕುತ್ತೇವೆ. ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟು ಬೇಡಿಕೆ ಈಡೇರಿಸುವಂತೆ ಆಗ್ರಹಿಸುತ್ತೇವೆ ಎಂದು ತಿಳಿಸಿದರು.

ಮಠ ರಾಜಕೀಯಕ್ಕೆ ಮಾರ್ಗದರ್ಶನ ಕೇಂದ್ರವಾಗಬೇಕೇ ವಿನಾ ರಾಜಕೀಯ ಶಕ್ತಿ ಕೇಂದ್ರ ಆಗಬಾರದು. ಮಠಕ್ಕೆ ರಾಜಕಾರಣಿಗಳಿಗೆ ಬರಬೇಡಿ ಎನ್ನಲು ಆಗದು. ಅವರು ಬಂದಾಗ ಸಲಹೆಗಳನ್ನು ಸ್ವೀಕರಿಸಬೇಕು. ಯಾವುದೇ ಪಕ್ಷದ ರಾಷ್ಟ್ರಾಧ್ಯಕ್ಷರು ಬಂದರೆ ಮಠಗಳು ಹೇಗೆ ಬೇಡ ಎನ್ನಲು ಆಗುತ್ತೆ ಎಂದು ಪ್ರಶ್ನಿಸಿದರು.

ಇದೊಂದು ಬುಡುಬುಡಿಕೆಯ ಆಳ್ವಿಕೆ

ಇದೊಂದು ಬುಡುಬುಡಿಕೆಯ ಆಳ್ವಿಕೆ

ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಾಕ್ಸಮರ ಮುಂದುವರೆದಿದೆ. "ಎಳೆ ವಯಸ್ಸಿನ ಮಕ್ಕಳಿಗೆ ವಿಷ ಉಣ್ಣಿಸಲಾಗುತ್ತಿದೆ" ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದರು.

ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ದಾರ್ಶನಿಕರಿಗೆ ಬಿಜೆಪಿ ಅಪಮಾನ ಮಾಡುತ್ತಿದೆ ಎಂಬ ಪ್ರಶ್ನೆಗೆ ಉತ್ತರ ನೀಡಿದರು.

ಮಕ್ಕಳು ಓದುವ ಪಠ್ಯಗಳಲ್ಲಿ ಕೋಮುವಾದದ ಅಟ್ಟಹಾಸ ಮೆರೆಯುತ್ತಿದೆ. ದೇಶದ ಬಗ್ಗೆ ಕಿಂಚಿತ್ತೂ ಗೌರವ ಹೊಂದಿರುವ ಮತ್ತು ಕೋಮುವಾದಿ ವಿಷವನ್ನೇ ಜೀವಾಳ ಮಾಡಿಕೊಂಡಿದ್ದ ಆರ್ಎಸ್ಎಸ್ ಸಂಸ್ಥಾಪಕ ಕೇಶವ ಬಲಿರಾಮ್ ಹೆಗಗೆವಾರ್ ವಿಚಾರಗಳು ಪಠ್ಯ ಸೇರುತ್ತಿದ್ದರೂ ಕಾಂಗ್ರೆಸ್ ಒಂದು ಸಣ್ಣ ಪ್ರತಿಭಟನೆಯನ್ನೂ ತೋರದಿರುವುದು ಅಚ್ಚರಿ ತಂದಿದೆ ಎಂದು ಅವರು ಈ ವೇಳೆ ಹೇಳಿದ್ದಾರೆ.

ಇಂದು ದೇಶದ ಆಡಳಿತ ಚುಕ್ಕಾಣಿ ಬಹುವೇಷ ತೊಟ್ಟವರು, ಬಹುಮೂರ್ತಿಗಳ ಕೈಯಲ್ಲಿದೆ. ಬಹುರೂಪಿಗಳೇ ದೇಶದ ಸೂತ್ರ ಹಿಡಿದಿದ್ದಾರೆ. ಜನಹಿತದ ಕಾಳಜಿ ಮತ್ತು ಕೆಲಸಗಳಿಂತ ಜನರಿಗೆ ಮಂಕುಬೂದಿ ಎರಚಿ ಮರಳು ಮಾಡುವ ಮಾತುಗಾರಿಕೆಯೇ ಎಲ್ಲೆಡೆ ವಿಜೃಂಭಿಸುತ್ತಿದೆ.ಇದೊಂದು ಬುಡುಬುಡಿಕೆಯ ಆಳ್ವಿಕೆಯಾಗಿದೆ.

ಪಠ್ಯ ಪುಸ್ತಕ ಪರಿಷ್ಕರಣೆಗೆ ನೂರೆಂಟು ಆಕ್ಷೇಪ..!

ಪಠ್ಯ ಪುಸ್ತಕ ಪರಿಷ್ಕರಣೆಗೆ ನೂರೆಂಟು ಆಕ್ಷೇಪ..!

ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಪ್ರೊ. ಬರಗೂರು ರಾಮಚಂದ್ರಪ್ಪ ನೇತೃತ್ವದ ಪಠ್ಯಪುಸ್ತಕ ರಚನಾ ಸಮಿತಿ, ಶಾಲಾ ಪಠ್ಯದ ಪರಿಷ್ಕರಣೆ ಮಾಡಿತ್ತು. ಈ ಸಮಿತಿಯು ಪಠ್ಯದಲ್ಲಿ ಕೆಲವೊಂದು ಲೋಪ ದೋಷಗಳನ್ನು ಮಾಡಿದೆ ಎಂದು ಆಕ್ಷೇಪಿಸಿ, ರಾಜ್ಯ ಬಿಜೆಪಿ ಸರ್ಕಾರವು ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ರಚಿಸಿತ್ತು. ಈ ಸಮಿತಿಗೆ 6 ರಿಂದ 10ನೇ ತರಗತಿವರೆಗಿನ ಸಮಾಜ ವಿಜ್ಞಾನ ಪಠ್ಯ ಪುಸ್ತಕ ಪರಿಷ್ಕರಣೆ, 6 ರಿಂದ 10ನೇ ತರಗತಿವರೆಗಿನ ಕನ್ನಡ ಪಠ್ಯ ಪುಸ್ತಕ ಪರಿಷ್ಕರಣೆ ಹಾಗೂ 3ನೇ ತರಗತಿಯ ಪರಿಸರ ಅಧ್ಯಯನ ಪಠ್ಯ ಪುಸ್ತಕಗಳ ಪರಿಷ್ಕರಣೆಯ ಜವಾಬ್ದಾರಿ ನೀಡಲಾಗಿತ್ತು.

ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯು ಪಠ್ಯ ಪುಸ್ತಕಗಳ ಪರಿಷ್ಕರಣೆ ಮಾಡುವ ವೇಳೆ ಟಿಪ್ಪು ಸುಲ್ತಾನ್‌ ಕುರಿತಾಗಿ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ ಅನ್ನೋದು ಮೊದಲ ಆರೋಪ. ಇನ್ನು ಆರ್‌ಎಸ್‌ಎಸ್‌ ಸಂಸ್ಥಾಪಕ ಹೆಡಗೇವಾರ್ ಅವರ ಕುರಿತಾದ ಲೇಖನ ಸೇರ್ಪಡೆ, ಚಕ್ರವರ್ತಿ ಸೂಲಿಬೆಲೆ ಬರೆದಿರುವ 'ತಾಯಿ ಭಾರತಿಯ ಅಮರ ಪುತ್ರರು' ಎಂಬ ಅಧ್ಯಾಯವನ್ನು ಸೇರ್ಪಡೆ ಮಾಡಿರೋದು ವಿರೋಧಿಗಳ ಕೆಂಗಣ್ಣಿಗೆ ಗುರಿಯಾಗಿದೆ.

English summary
Karnataka text book row; Textbook revision led to political battle in continue in state. Kaginele swamiji warns the cm basavaraj bommai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X