ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹರಪನಹಳ್ಳಿಯನ್ನು ಬಳ್ಳಾರಿಗೆ ಸೇರಿಸಲು ಒಪ್ಪಿಗೆ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಮಾರ್ಚ್ 04 : ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕನ್ನು ಪುನಃ ಬಳ್ಳಾರಿ ಜಿಲ್ಲೆಗೆ ಸೇರಿಸಲಾಗುತ್ತದೆ. ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ. ಇದರಿಂದಾಗಿ ಹರಪನಹಳ್ಳಿ ಹೈದರಾಬಾದ್-ಕರ್ನಾಟಕ ಭಾಗಕ್ಕೆ ಸೇರಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಶನಿವಾರ ಸಂಜೆ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಸಭೆಯಲ್ಲಿ ಹರಪನಹಳ್ಳಿ ತಾಲೂಕನ್ನು ಬಳ್ಳಾರಿಗೆ ಸೇರಿಸಲು ಒಪ್ಪಿಗೆ ನೀಡಲಾಗಿದೆ. ಇದರಿಂದಾಗಿ ಹೈದರಾಬಾದ್-ಕರ್ನಾಟಕ ಭಾಗಕ್ಕೆ ತಾಲೂಕು ಸೇಲಿದ್ದು, 371 (ಜೆ) ವಿಶೇಷ ಸ್ಥಾನಮಾನ ಸಿಗಲಿದೆ.

Harapanahalli

ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕನ್ನು 371 (ಜೆ) ವ್ಯಾಪ್ತಿಗೆ ಸೇರಿಸಬೇಕೆಂಬುದು ಬಹು ವರ್ಷಗಳ ಬೇಡಿಕೆಯಾಗಿತ್ತು. ಸಾಮಾಜಿಕವಾಗಿ, ಸಾಂಸ್ಕೃತಿಕಾವಾಗಿ, ಭೌಗೋಳಿಕವಾಗಿ ಬಳ್ಳಾರಿ ಜಿಲ್ಲೆಯ ಅವಿಭಾಜ್ಯ ಅಂಗವಾಗಿದ್ದ ಹರಪನಹಳ್ಳಿ ತಾಲೂಕು 1957 ರಿಂದ 1996 ರವರಗೆ ಬಳ್ಳಾರಿ ಜಿಲ್ಲೆಯಲ್ಲಿತ್ತು.

ಕ್ಷೇತ್ರ ಪರಿಚಯ : ಎಂ.ಪಿ.ಪ್ರಕಾಶ್ ತವರಲ್ಲಿ ಯಾರಿಗೆ ಜಯ?ಕ್ಷೇತ್ರ ಪರಿಚಯ : ಎಂ.ಪಿ.ಪ್ರಕಾಶ್ ತವರಲ್ಲಿ ಯಾರಿಗೆ ಜಯ?

1997 ರಲ್ಲಿ ಜೆ.ಎಚ್.ಪಟೇಲ್ ಮುಖ್ಯಮಂತ್ರಿಯಾದ ಬಳಿಕ ಹರಪನಹಳ್ಳಿ ತಾಲೂಕನ್ನು ಬಳ್ಳಾರಿಯಿಂದ ಬೇರ್ಪಡಿಸಿ ದಾವಣಗೆರೆಗೆ ಸೇರಿಸಲಾಗಿತ್ತು. ಪ್ರೊ.ನಂಜುಂಡಪ್ಪ ವರದಿ ಪ್ರಕಾರ ಹರಪನಹಳ್ಳಿ ತಾಲೂಕು ರಾಜ್ಯದ 3ನೇ ಅತಿ ಹಿಂದುಳಿದ ತಾಲೂಕಾಗಿದೆ.

ರಾಜಕೀಯ ನಿವೃತ್ತಿ ಹೇಳಿಕೆ ವಾಪಸ್ ಪಡೆದ ಎಂ.ಪಿ.ರವೀಂದ್ರ!ರಾಜಕೀಯ ನಿವೃತ್ತಿ ಹೇಳಿಕೆ ವಾಪಸ್ ಪಡೆದ ಎಂ.ಪಿ.ರವೀಂದ್ರ!

ಹರಪನಹಳ್ಳಿ ತಾಲೂಕನ್ನ ಹೈದರಾಬಾದ್-ಕರ್ನಾಟಕದ ವಿಶೇಷ ಸ್ಥಾನಮಾನಕ್ಕೆ ಸೇರಿಸುವಂತೆ ಆಗ್ರಹಿಸಿ ಅನೇಕ ಹೋರಾಟಗಳು ನಡೆದ್ದವು. 2016ರ ಡಿ.26ರಂದು ತಾಲೂಕಿನಲ್ಲಿ ಸಾಧನಾ ಸಮಾವೇಶ ಉದ್ದೇಶಿಸಿ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ಸ್ಥಾನಮಾನಕ್ಕೆ ಕಲ್ಪಿಸಲು ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದ್ದರು.

ಬೇಸಿಗೆ 2017: ದಾವಣಗೆರೆ 'ಜಲ ಸಿರಿ' ಕಾಣದ ಶ್ರೀಮಂತ ಜಿಲ್ಲೆಬೇಸಿಗೆ 2017: ದಾವಣಗೆರೆ 'ಜಲ ಸಿರಿ' ಕಾಣದ ಶ್ರೀಮಂತ ಜಿಲ್ಲೆ

English summary
In a cabinet meeting Karnataka government decided to included Harapanahalli taluk to Ballari district. Harapanahalli, which was included to Davangere district in 1996 from Bellari. Harapanahalli taluk stands third in the list of most backward taluks according to the D.M. Nanjundapp report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X