ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕ ರಾಜ್ಯ ಬಜೆಟ್ 2021: ದಾವಣಗೆರೆ ಜಿಲ್ಲೆಯ ನಿರೀಕ್ಷೆಗಳೇನು?

|
Google Oneindia Kannada News

ದಾವಣಗೆರೆ, ಫೆಬ್ರವರಿ 19: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಮಾರ್ಚ್‌ 8 ರಂದು ಮಂಡಿಸಲಿರುವ ಬಜೆಟ್ ಮೇಲೆ ರಾಜ್ಯದ ಜನರು ಅನೇಕ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಮಾರ್ಚ್ 4 ರಿಂದ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಮಾರ್ಚ್ ತಿಂಗಳ ಕೊನೆಯವರೆಗೂ ಬಜೆಟ್ ಮೇಲಿನ ಚರ್ಚೆ ನಡೆಯಲಿದೆ.

ಕೊರೊನಾ ನಂತರದ ಮೊದಲ ರಾಜ್ಯ ಬಜೆಟ್ ಇದಾಗಿದ್ದು, ಸಿಎಂ ಯಡಿಯೂರಪ್ಪ ಯಾವ ಯಾವ ಕ್ಷೇತ್ರದ ಮೇಲೆ ಬೆಳಕು ಚೆಲ್ಲಲಿದ್ದಾರೆ ಎನ್ನುವುದು ಗೌಪ್ಯವಾಗಿದೆ. ಕೃಷಿ, ಆರೋಗ್ಯ, ಶಿಕ್ಷಣ, ಕಾರ್ಮಿಕ, ಮೀನುಗಾರಿಕೆ ಕ್ಷೇತ್ರಗಳಿಗೆ ಒತ್ತು ನೀಡಬೇಕಿದ್ದು, ಪ್ರವಾಸೋದ್ಯಮ ಕ್ಷೇತ್ರವನ್ನು ಬೆಳೆಸುವ ಕಡೆಗು ಗಮನ ಹರಿಸಬೇಕಿದೆ.

ರಾಜ್ಯ ವಿಧಾನಸಭೆ ಅಧಿವೇಶನ: ಬಜೆಟ್ ಮಂಡನೆ ದಿನಾಂಕ ನಿಗದಿರಾಜ್ಯ ವಿಧಾನಸಭೆ ಅಧಿವೇಶನ: ಬಜೆಟ್ ಮಂಡನೆ ದಿನಾಂಕ ನಿಗದಿ

ಈ ಬಾರಿಯ ಬಜೆಟ್ ನಲ್ಲಿ ದಾವಣಗೆರೆ ಜಿಲ್ಲೆಯ ಜನರು ಅನೇಕ ಬೇಡಿಕೆಗಳು ಹಾಗೂ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಅವು ಈ ಕೆಳಕಂಡಂತಿವೆ..

Karnataka Budget 2021: Expectations For Davanagere District

1. ಸ್ಮಾರ್ಟ್‌ಸಿಟಿ ಯೋಜನೆ ಕಾಮಗಾರಿ ಚುರುಕಿಗೆ ವಿಶೇಷ ಅನುದಾನ ನೀಡಬೇಕಿದೆ.

2. ದಾವಣಗೆರೆ ಜಿಲ್ಲೆಗೊಂದು ಐಟಿ ಹಬ್ ಬೇಕು ಎಂಬುವುದು ಜನರ ಬಹುದಿನಗಳ ಬೇಡಿಕೆ.

3. ಪ್ರವಾಸೋದ್ಯಮಕ್ಕೆ ಬೇಕಾದ ಯೋಜನೆ ಜನರ ನಿರೀಕ್ಷೆ ( ಶಾಂತಿಸಾಗರ, ಕೊಂಡಜ್ಜಿ, ಹರಿಹರ, ಅನಗೋಡು ಪಾರ್ಕ್ ಗಳಲ್ಲಿ ಉತ್ತಮ ಸೌಲಭ್ಯ ಕಲ್ಪಿಸಬೇಕಿದೆ)

4. ದಾವಣಗೆರೆ ಜಿಲ್ಲೆಯ ಜನರಿಗೆ ಉದ್ಯೋಗ ಸೃಷ್ಟಿಗೆ ಬೇಕಾದ ಯೋಜನೆಗಳು, ಜಿಲ್ಲೆಯಲ್ಲಿ ಜವಳಿ ಪಾರ್ಕ್ ನಿರ್ಮಾಣ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಬಡಾವಣೆ ನಿರ್ಮಾಣ , ಬೃಹತ್‌ ಕೈಗಾರಿಕೆ ಘಟಕಗಳ ಆರಂಭಕ್ಕೆ ಲ್ಯಾಂಡ್‌ ಬ್ಯಾಂಕ್‌ ಆಗಬೇಕಿದೆ.

5. ಹಿಂದಿನ ಸರ್ಕಾರ ಜಾರಿ ಮಾಡಿದ ಹಲವು ರೈಲ್ವೆ, ಹೆದ್ದಾರಿ ಯೋಜನೆಗಳಿಗೆ ಹಣ ಬಿಡುಗಡೆ.

6. ನಿರುದ್ಯೋಗಿ ಯುವಕರಿಗೆ ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ ಜವಳಿ ಫ್ಯಾಕ್ಟರಿ, ಜೊತೆ ಇತರೆ ಕೈಗಾರಿಕೆಗಳು, ಜಿಲ್ಲೆಯಲ್ಲಿ ಕೈಗಾರಿಕಾ ಕಾರಿಡಾರ್ ಸ್ಥಾಪನೆ ಮಾಡಬೇಕು

7. ದಶಕದಿಂದ ಬೇಡಿಕೆ, ದಾವಣಗೆರೆಗೆ ವಿಮಾನ ನಿಲ್ದಾಣ ಮಂಜೂರು ಹಾಗೂ ಅನುದಾನ ( ಉಡಾನ್ ಯೋಜನೆಯಡಿ ದಾವಣಗೆರೆ ವಿಮಾನ ನಿಲ್ದಾಣ ನಿರ್ಮಾಣ), ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆಯಾಗಬೇಕಿದೆ, ಪಾಳು ಬಿದ್ದಿರುವ ಕೈಗಾರಿಕಾ ಪ್ರದೇಶಕ್ಕೆ ಬೃಹತ್‌ ಕೈಗಾರಿಕೆಗಳನ್ನು ಸೆಳೆಯಬೇಕಿದೆ.

8. ತುಂಗಭದ್ರಾ ನದಿಯ ಹೂಳು ತೆಗೆದರೆ ದಾವಣಗೆರೆ ಭಾಗದ ಎಲ್ಲಾ ರೈತರಿಗೂ ಅನುಕೂಲವಾಗಲಿದೆ.

9. ದಾವಣಗೆರೆ- ಚಿತ್ರದುರ್ಗ- ತುಮಕೂರು ನೇರ ರೈಲು ಮಾರ್ಗದ ಭೂ ಖರೀದಿ ಕಾರ್ಯವನ್ನು ಈ ಬಜೆಟ್ ನಲ್ಲಿ ಚುರುಕುಗೊಳಿಸಬೇಕು.

10. ಸ್ಥಳೀಯ ಆರ್ಥಿಕ ಅಭಿವೃದ್ಧಿ, ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಒತ್ತು ನೀಡಲಿ.

11. ದಾವಣಗೆರೆ ಹೊರ ವರ್ತುಲ ರಸ್ತೆಗೆ ಹೆಚ್ಚಿನ ಅನುದಾನ ಒದಗಿಸುವುದು.

12. ದಾವಣಗೆರೆಯಲ್ಲಿ ಮಕ್ಕಳ ಉದ್ಯಾನವನಗಳಿಗೆ, ಹೆಚ್ಚಿನ ಹಣ ನಿಗದಿಯಾಗಬೇಕು.

13. ದಾವಣಗೆರೆ ನಗರದ ನಾನಾ ಬಡಾವಣೆ, ಸಾಕಷ್ಟು ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ, ಕೆರೆ ತುಂಬಿಸುವ ಯೋಜನೆ ಅನುಷ್ಠಾನವಾಗಬೇಕು.

14. ದಾವಣಗೆರೆ ಜಿಲ್ಲೆಯ ಕೃಷಿ ಉತ್ಪಾದನೆ ಸಂರಕ್ಷಣೆಗಾಗಿ ಫುಡ್‌ಪಾರ್ಕ್ ಆರಂಭಿಸಬೇಕು.

15. ದಾವಣಗೆರೆ ಟ್ರಾಫಿಕ್‌ ದಟ್ಟಣೆ ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು.

Recommended Video

Amit Shah ಸವಾಲೆಸೆದ ಮಮತಾ ಬ್ಯಾನರ್ಜಿ, ಪ.ಬಂಗಾಳದಲ್ಲಿ ಮುಂದುವರೆದ ವಾಕ್‌ ಸಮರ | Oneindia Kannada

16. ದಾವಣಗೆರೆ ಜಿಲ್ಲೆಯಲ್ಲಿ ಒಂದು ಹೊಸದಾದ, ಸುಸಜಿತ ಜಿಲ್ಲಾ ಕ್ರೀಡಾಂಗಣ ಮತ್ತು ಕ್ರೀಡಾ ಹಾಸ್ಟೆಲ್‌ಗಳನ್ನು ಸ್ಥಾಪಿಸಬೇಕು.

English summary
The people of the state have set many expectations on the budget presentation by Chief Minister BS Yediyurappa on March 8.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X