ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾನ್ಯಾರು ಗೊತ್ತಾ?: ಗುರುತಿನ ಚೀಟಿ ಕೇಳಿದ್ದಕ್ಕೆ ಸಂಸದ ಆಕ್ರೋಶ

|
Google Oneindia Kannada News

ದಾವಣಗೆರೆ, ಮೇ 12: ದಾವಣೆಗೆರೆಯಲ್ಲಿ ಮತಚಲಾಯಿಸಲು ತೆರಳಿದ್ದ ಬಿಜೆಪಿ ಸಂಸದ ಜಿ.ಎಂ. ಸಿದ್ದೇಶ್ವರ ಅಲ್ಲಿ ಕರ್ತವ್ಯದಲ್ಲಿದ್ದ ಚುನಾವಣಾ ಸಿಬ್ಬಂದಿ ವಿರುದ್ಧ ಹರಿಹಾಯ್ದರು.

ಸಿಬ್ಬಂದಿ ತಮ್ಮ ಕರ್ತವ್ಯದಂತೆ ಸಿದ್ದೇಶ್ವರ ಅವರಿಗೆ ಗುರುತಿನ ಚೀಟಿ ತೋರಿಸುವಂತೆ ಕೇಳಿದರು. ಇದರಿಂದ ಸಿಟ್ಟಿಗೆದ್ದ ಸಂಸದ ಸಿದ್ದೇಶ್ವರ, 'ನಾನು ಯಾರು ಗೊತ್ತೇ. ನನ್ನ ಬಳಿಯೇ ಗುರುತಿನ ಚೀಟಿ ಕೇಳ್ತಿದ್ದೀರಲ್ಲ' ಎಂದು ಪ್ರಶ್ನಿಸಿದರು ಎನ್ನಲಾಗಿದೆ. ಬಳಿಕ ಗುರುತಿನ ಚೀಟಿ ತೋರಿಸಿ 'ನೋಡಿಕೊಳ್ಳಿ' ಎಂದು ಹೇಳಿದರು ಎಂದು ಮೂಲಗಳು ತಿಳಿಸಿವೆ.

LIVE: ಇದುವರೆಗೆ ಶೇ. 10.51 ರಷ್ಟು ಮತದಾನ ದಾಖಲು LIVE: ಇದುವರೆಗೆ ಶೇ. 10.51 ರಷ್ಟು ಮತದಾನ ದಾಖಲು

ದಾವಣೆಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದರಾಗಿರುವ ಜಿ.ಎಂ. ಸಿದ್ದೇಶ್ವರ, ಎನ್‌ಡಿಎ ಸರ್ಕಾರದಲ್ಲಿ ಭಾರಿ ಕೈಗಾರಿಕೆ ರಾಜ್ಯ ಖಾತೆ ಸಚಿವರಾಗಿದ್ದರು. ಅದಕ್ಕೂ ಮುನ್ನ ಭಾರತೀಯ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವರಾಗಿದ್ದರು.

karnataka assembly elections 2018 mp siddeshwar angry on election staff

ಸಿ.ಸಿ. ಪಾಟೀಲ ಗರಂ
ಗದಗಿನ ನರಗುಂದದ ಬಿಜೆಪಿ ಅಭ್ಯರ್ಥಿ ಸಿ.ಸಿ. ಪಾಟೀಲ ಅವರು ಮತಯಂತ್ರದ ಸಮೀಪ ನಿಂತಿದ್ದ ಚುನಾವಣಾ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

In Pics: ಮತದಾನ ಪರ್ವದಲ್ಲಿ ಮತದಾರ ಮಹಾಪ್ರಭು

ನರಗುಂದದ 72ನೇ ಮತಗಟ್ಟೆಯಲ್ಲಿ ಮತ ಚಲಾಯಿಸಲು ತೆರಳಿದ್ದ ಸಿ.ಸಿ. ಪಾಟೀಲ ಅವರು, ಮತಯಂತ್ರದ ಪಕ್ಕದಲ್ಲಿಯೇ ಸಿಬ್ಬಂದಿ ಇರುವುದನ್ನು ಕಂಡು ಸಿಟ್ಟಿಗೆದ್ದರು. ಮತಯಂತ್ರದ ಪಕ್ಕದಲ್ಲಿಯೇ ನಿಂತು ಬೇಕಾದವರಿಗೆ ವೋಟ್ ಹಾಕಿಸುತ್ತಿದ್ದೀಯಾ ಎಂದು ಸಿಬ್ಬಂದಿ ವಿರುದ್ಧ ಹರಿಹಾಯ್ದರು.

English summary
karnataka assembly elections 2018: Member of Parliment of Davanagere assembly constituency GM Siddeshwar showed anger on election staff for asking his id card before voting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X