ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಒಂದು ವಾರದೊಳಗೆ ಕೆಎಫ್‌ಸಿ ನಾಮಫಲಕ ಕನ್ನಡದಲ್ಲಿ ಹಾಕಬೇಕು': ಕರವೇ ಆಗ್ರಹ

|
Google Oneindia Kannada News

ದಾವಣಗೆರೆ, ಅಕ್ಟೋಬರ್‌ 25: ಬೆಂಗಳೂರಿನ ಕೆಎಫ್‌ಸಿ ಮಳಿಗೆಯಲ್ಲಿ ಕನ್ನಡ ಹಾಡು ಹಾಕದ ವಿಚಾರದಲ್ಲಿ ವಾಗ್ವಾದ ನಡೆದಿರುವ ಘಟನೆ ಭಾನುವಾರವಷ್ಟೇ ಬೆಳಕಿಗೆ ಬಂದಿದೆ. ಈ ಬೆನ್ನಲ್ಲೇ ಕೆಎಫ್‌ಸಿ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಭಾರೀ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ದಾವಣಗೆರೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ಕೆಎಫ್‌ಸಿ ಮಳಿಗೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಸೋಮವಾರದಂದು ಕರವೇ ದಾವಣಗೆರೆ ಜಿಲ್ಲಾಧ್ಯಕ್ಷರಾದ ಎಂ.ಎಸ್. ರಾಮೇಗೌಡರ ನೇತೃತ್ವದಲ್ಲಿ ಅನೇಕ ಮುಖಂಡರು ಕೆಎಫ್‌ಸಿ ಕನ್ನಡ ವಿರೋಧಿ ನಿಲುವು ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ. "ಒಂದು ವಾರದೊಳಗೆ ಎಲ್ಲ ನಾಮಫಲಕಗಳು ಕನ್ನಡದಲ್ಲಿ ಹಾಕಬೇಕು, ಕನ್ನಡದಲ್ಲೇ ವ್ಯವಹರಿಸಬೇಕು, ಕನ್ನಡದ ಹಾಡುಗಳನ್ನೇ ಹಾಕಬೇಕು," ಎಂದು ರಾಮೇಗೌಡರು ಆಗ್ರಹ ಮಾಡಿದರು.

Reject KFC trending: ಟ್ವಿಟ್ಟರ್‌ನಲ್ಲಿ ಕರವೇ ಆಕ್ರೋಶReject KFC trending: ಟ್ವಿಟ್ಟರ್‌ನಲ್ಲಿ ಕರವೇ ಆಕ್ರೋಶ

ಒಂದು‌ ವೇಳೆ ಕೆಎಫ್‌ಸಿ ತನ್ನ ಈ ದುರಹಂಕಾರ ಮುಂದುವರೆಸಿದರೆ ರಾಜ್ಯದ ಎಲ್ಲ ಕೆಎಫ್‌ಸಿ‌ ಮಳಿಗೆಗಳ ಮುಂದೆ ಕರ್ನಾಟಕ ರಕ್ಷಣಾ‌ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಾರೆ. ಆ ಬಳಿಕ ಉಂಟಾಗುವ ಎಲ್ಲಾ ಅನಾಹುತಗಳಿಗೆ ನೀವೇ ಹೊಣೆಗಾರರು ಎಂದು ಕೆಎಫ್‌ಸಿ ಮುಖ್ಯಸ್ಥರಿಗೆ ಎಚ್ಚರಿಕೆ‌‌ ನೀಡಿದರು.

KaRaVe protests against KFC in Davanagere, Urges nameplate should written in Kannada

ಇಂದು ದಾವಣಗೆರೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಕರವೇ ಮಹಿಳಾ ಘಟಕ ಅಧ್ಯಕ್ಷರಾದ ಶ್ರೀಮತಿ ಬಸಮ್ಮ, ಮುಖಂಡರಾದ ಮಲ್ಲಿಕಾರ್ಜುನ್, ಕೆಜಿ ಬಸವರಾಜ್, ಮುಬಾರಕ್, ಎಂಡಿ ರಫೀಕ್, ಖಾದರ್ ಭಾಷಾ, ಭಾಷಾ ಸಾಬ್, ಗೋಪಾಲ್ ದೇವರಮನೆ, ಪರಮೇಶ್, ಯೋಗೇಶ್ ಬಸನಕೋಟೆ, ಬಸವರಾಜ್, ಉಮೇಶ್, ಸಿದ್ದೇಶ್, ಜಬಿವುಲ್ಲಾ ಮತ್ತಿತರು ಉಪಸ್ಥಿತರಿದ್ದರು.

ಬೆಂಗಳೂರಿನ ಕೆಎಫ್‌ಸಿ ಮಳಿಗೆಯಲ್ಲಿ ಮಹಿಳೆಯೊಬ್ಬರು ಕನ್ನಡ ಹಾಡು ಹಾಕದ ಕಾರಣದಿಂದಾಗಿ ಕೆಎಫ್‌ಸಿ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ. ಟ್ವಿಟ್ಟರ್‌ನಲ್ಲಿ #RejectKFC #KFCಕನ್ನಡಬೇಕು ಎಂಬ ಹ್ಯಾಷ್‌ಟ್ಯಾಗ್‌ಗಳು ಭಾರೀ ಟ್ರೆಂಡ್‌ ಆಗಿತ್ತು.

Reject Zomato: ಹಿಂದಿ ಕಲಿಯಲೇ ಬೇಕು ಎಂದ ಜೊಮ್ಯಾಟೋಗೆ ತಮಿಳರ ತರಾಟೆReject Zomato: ಹಿಂದಿ ಕಲಿಯಲೇ ಬೇಕು ಎಂದ ಜೊಮ್ಯಾಟೋಗೆ ತಮಿಳರ ತರಾಟೆ

ಮಹಿಳೆಯೊಬ್ಬರು ಬೆಂಗಳೂರಿನ ಕೆಎಫ್‌ಸಿಯಲ್ಲಿ ಕನ್ನಡ ಹಾಡು ಹಾಕದ ಕಾರಣದಿಂದಾಗಿ ಇದನ್ನು ಸಿಬ್ಬಂದಿಗಳಲ್ಲಿ ಪ್ರಶ್ನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಿಬ್ಬಂದಿ ಹಿಂದಿ ನಮ್ಮ ರಾಷ್ಟ್ರ ಭಾಷೆ ಎಂದು ಹೇಳಿದ್ದು ನೆಟ್ಟಿಗರು ಈಗ ಕೆಎಫ್‌ಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. "ನಾವು ಭಾರತದಲ್ಲಿ ಇರುವುದು. ನಾವು ಎಲ್ಲಿ ಬೇಕಾದರೂ ಹೋಗಬಹುದು. ಕರ್ನಾಟಕಕ್ಕೆ ಬರಲು ಪಾಸ್‌ಪೋರ್ಟ್ ಬೇಕಾ?," ಎಂದು ಮಹಿಳೆಯನ್ನು ಪ್ರಶ್ನೆ ಮಾಡಿರುವ ಸಿಬ್ಬಂದಿಗಳು, "ನೀವು ಕರ್ನಾಟಕಕ್ಕೆ ಬಂದವರು ಕನ್ನಡ ಮಾತನಾಡಬೇಕು ಎಂದು ಹೇಳಿದರೆ ಯಾವುದೇ ಅರ್ಥವಿಲ್ಲ. ಹಿಂದಿ ನಮ್ಮ ರಾಷ್ಟ್ರ ಭಾಷೆ," ಎಂದು ಕೂಡಾ ಹೇಳಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮಹಿಳೆ, "ನಮಗೆ ರಾಷ್ಟ್ರ ಭಾಷೆ ಯಾವುದು ಎಂಬುವುದು ಬೇಕಾಗಿಲ್ಲ. ನಮಗೆ ನಮ್ಮ ಭಾಷೆ ಮುಖ್ಯ. ನಮಗೆ ಕನ್ನಡ ಬರುತ್ತದೆ. ಕನ್ನಡ ಹಾಡು ಹಾಕಿ. ಕನ್ನಡ ಭಾಷೆಯನ್ನು ಉಳಿಸಿ," ಎಂದು ಆಗ್ರಹ ಮಾಡಿದ್ದಾರೆ. "ಒಬ್ಬೊಬ್ಬರು ಒಂದೊಂದು ಬಾಷೆಯ ಹಾಡು ಕೇಳಿದರೆ ನಾವು ಯಾವುದು ಹಾಕುವುದು," ಎಂದು ಈ ವೇಳೆ ಸಿಬ್ಬಂದಿ ಪ್ರಶ್ನೆ ಮಾಡಿದ್ದಾರೆ. ಹಾಗೆಯೇ ನಾವು ಈಗ ಹಾಡನ್ನೇ ಆಫ್‌ ಮಾಡಿದ್ದೇವೆ," ಎಂದು ತಿಳಿಸಿದ್ದಾರೆ.

ಈ ಹಿಂದೆ ಯಾರಿಂದಲೂ ಏನು ಮಾಡಲು ಆಗಿಲ್ಲ ಎಂದಿದ್ದ ಸಿಬ್ಬಂದಿ

ಈ ನಡುವೆ ಕೆಎಫ್‌ಸಿಯ ಮಹಿಳಾ ಸಿಬ್ಬಂದಿಯೊಬ್ಬರು, "ನೀವು ಮೊದಲ ಬಾರಿಗೆ ಇಲ್ಲಿಗೆ ಬಂದಿರುವುದಾ? ಇದಕ್ಕೆ ಮುಂಚೆ ಬಂದವರೂ ಇದೇ ರೀತಿ ಕೇಳಿದ್ರು, ಆಗ ಆಫಿಸರ್‌ ಬಂದು ಕೂತು ಮಾತನಾಡಿದರು. ಆ ಬಳಿಕ ಅವರಿಂದ ಏನು ಮಾಡಲು ಆಗಲಿಲ್ಲ. ನೀವು ಸುಮ್ಮನೆ ಯಾಕೆ ಮಾತನಾಡುತ್ತೀರಿ. ಕಂಪನಿ ರೂಲ್ಸ್‌ ಏನಿದೆ ಅದನ್ನು ನಾವು ಫಾಲೋ ಮಾಡುತ್ತೇವೆ," ಎಂದು ಹೇಳುವ ಮೂಲಕ ನೆಟ್ಟಿಗರ ಕೆಂಗಣ್ಣಿಗೆ ಕೆಎಫ್‌ಸಿ ಸಂಸ್ಥೆ ಗುರಿಯಾಗಲು ಕಾರಣವಾಗಿದ್ದಾರೆ. ಭಾನುವಾರ ಸಂಜೆ ಟ್ವಿಟ್ಟರ್‌ನಲ್ಲಿ #RejectKFC #KFCಕನ್ನಡಬೇಕು ಎಂಬ‌ ಹ್ಯಾಶ್ ಟ್ಯಾಗ್ ಮೂಲಕ ಕನ್ನಡಿಗರು‌‌ ಆಕ್ರೋಶ ವ್ಯಕ್ತಪಡಿಸಿದ್ದರು. #RejectKFC ಭಾರತಮಟ್ಟದಲ್ಲಿ ಸುಮಾರು‌ ಮೂರು ಗಂಟೆಗಳ‌ ಕಾಲ ಮೂರನೇ ಸ್ಥಾನದಲ್ಲಿ ಟ್ರೆಂಡ್ ಆಗಿತ್ತು.

Recommended Video

ಒಂದು ವೇಳೆ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಸೋತ್ರೆ ಅಷ್ಟೆ ಕಥೆ!! | Oneindia Kannada

(ಒನ್‌ಇಂಡಿಯಾ ಸುದ್ದಿ)

English summary
KaRaVe protest's against KFC in Davanagere, Urges nameplate should written in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X