ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬ್ಯಾಂಕ್ ಗಳಲ್ಲಿ ಕನ್ನಡ ಕಡೆಗಣನೆ: ದಾವಣಗೆರೆಯಲ್ಲಿ ಪ್ರತಿಭಟನೆ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಮೇ 26: ದೈನಂದಿನ ವ್ಯವಹಾರದಲ್ಲಿ ಕನ್ನಡವನ್ನು ನಿರ್ಲಕ್ಷ್ಯ ಮಾಡುತ್ತಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕನ್ನಡ ವಿರೋಧಿ ನಡೆಯನ್ನು ಬದಲಾಯಿಸಿಕೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ನವನಿರ್ಮಾಣ ಸೇನೆ ಕಾರ್ಯಕರ್ತರು ಇಂದು ದಾವಣಗೆರೆಯ ಹೆಚ್.ಕೆ.ಆರ್ ಸರ್ಕಲ್ ಬಳಿಯಿರುವ ಎಸ್.ಬಿ.ಐ ಬ್ಯಾಂಕಿನ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

Recommended Video

ಮುಟ್ಟಾದ ಹೆಣ್ಣನ್ನು ಟಚ್ ಮಾಡಿದ್ರೆ ಪುರುಷನಿಗೆ ಕಾಯಿಲೆ ಬರುತ್ತಂತೆ!!! | Oneindia Kannada

ಪಾಸ್ ಬುಕ್, ಚಲನ್, ಚೆಕ್ ಬುಕ್‍ ಗಳಲ್ಲಿ ಸ್ಥಳೀಯ ಭಾಷೆಯಾದ ಕನ್ನಡವನ್ನು ಕಡೆಗಣಿಸಿ ಹಿಂದಿ ಭಾಷೆಯನ್ನು ಬಲವಂತವಾಗಿ ಹೇರಿಕೆ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ. ಇಲ್ಲಿ ವ್ಯವಹಾರ, ಉದ್ಯೊಗ, ಉದ್ಯಮ, ಶಿಕ್ಷಣ ಸೇರಿದಂತೆ ಎಲ್ಲಾ ರಂಗಗಳಲ್ಲಿ ಕನ್ನಡವೇ ಪ್ರಧಾನವಾಗಬೇಕು ಎಂದು ಸರಕಾರ ದಶಕಗಳ ಹಿಂದೆಯೇ ಆದೇಶಿಸಿದೆ ಎಂದರು.

ಸಾಮಾಜಿಕ ಅಂತರ ಪಾಲಿಸದ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರುಸಾಮಾಜಿಕ ಅಂತರ ಪಾಲಿಸದ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರು

ಬ್ರಿಟಿಷ್ ಅಧಿಕಾರಿಗಳು ಸಹ ಇಲ್ಲಿ ಜನರ ಭಾಷೆಯಲ್ಲಿ ತಮ್ಮ ಆಡಳಿತ ಮತ್ತು ವ್ಯವಹಾರವನ್ನು ನಡೆಸಿ ಸ್ಥಳಿಯ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. ಆದರೆ ಇತ್ತೀಚೆಗೆ ಎಲ್ಲಾ ವ್ಯವಹಾರಗಳಲ್ಲಿ ಹಿಂದಿ, ಇಂಗ್ಲೀಷ್ ಭಾಷೆಗಳನ್ನು ಬಳಸುತ್ತಿರುವುದರಿಂದಾಗಿ ಗ್ರಾಮೀಣ ಪ್ರದೇಶದ ಜನರಿಗೆ ಭಾಷಾ ಸಮಸ್ಯೆ ಎದುರಾಗುತ್ತದೆ ಎಂದು ಕನ್ನಡಪರ ಹೋರಾಟಗಾರರು ಹೇಳಿದರು.

Kannada Organizations Protest Against SBI Bank In Davanagere

ಇಲ್ಲಿನ ಬ್ಯಾಂಕಿನ ಸಿಬ್ಬಂದಿಗಳಿಗೆ ಕನ್ನಡವೇ ಬರುವುದಿಲ್ಲ, ಕೆಲವೊಂದು ವೇಳೆ ಉಡಾಫೆಯಾಗಿ ಮಾತನಾಡಿ ಗ್ರಾಹಕರನ್ನು ಅವಮಾನಿಸುವ ಕೆಲಸ ಮಾಡಿದ್ದಾರೆ, ಇದು ನಿಜಕ್ಕೂ ಸರಿಯಾದ ನಡೆಯಲ್ಲ. ರಾಜ್ಯ ಭಾಷೆಯನ್ನು ಗೌರವಿಸದೇ ವ್ಯವಹರಿಸುವ ಬ್ಯಾಂಕ್ ನ ನಡೆಯನ್ನು ಖಂಡಿಸಿದರು.

Kannada Organizations Protest Against SBI Bank In Davanagere

15 ದಿನಗಳೊಳಗಾಗಿ ಬ್ಯಾಂಕಿನ ಎಲ್ಲಾ ವ್ಯವಹಾರಗಳಲ್ಲಿ ಕನ್ನಡವನ್ನು ಮುದ್ರಿಸಿ ವ್ಯವಹರಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಬ್ಯಾಂಕಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ವೆಂಕಟೇಶ್, ಯುವಘಟಕದ ಅಧ್ಯಕ್ಷ ಮಂಜುನಾಥ, ಶೇರ್ ಅಲಿ, ಉಡೇಕರ್ ಮತ್ತಿತರರಿದ್ದರು.

English summary
Karnataka Navnirman Sena workers protest in front of the SBI Bank in Davanagere today, demanding the reversal of the anti-Kannada behavior of State Bank of India, which is ignoring Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X