ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆ: ರೈಲ್ವೆಯಲ್ಲಿ ಕನ್ನಡಿಗರಿಗೆ ಮೀಸಲಾತಿಗೆ ಆಗ್ರಹಿಸಿ ಹೋರಾಟ

|
Google Oneindia Kannada News

ದಾವಣಗೆರೆ, ಆಗಸ್ಟ್ 28: ರೈಲ್ವೆ ಇಲಾಖೆಯ ಡಿ ದರ್ಜೆ ಹುದ್ದೆಗಳ ನೇಮಕಾತಿಯಲ್ಲಿ ಶೇ. 80 ರಷ್ಟನ್ನು ಕನ್ನಡಿಗರಿಗೆ ಮೀಸಲಿಡಬೇಕೆಂದು ಆಗ್ರಹಪಡಿಸಿ, ರೈಲು ತಡೆದು ಪ್ರತಿಭಟನೆ ಮಾಡಲು ರೈಲ್ವೆ ನೇಮಕಾತಿ ಹೋರಾಟ ಸಮಿತಿ ನಿರ್ಧರಿಸಿದೆ.

ಆಗಸ್ಟ್ 30 ರಂದು ಬೆಳಿಗ್ಗೆ 11 ಗಂಟೆಗೆ ನಗರದ ರೈಲ್ವೆ ನಿಲ್ದಾಣದಲ್ಲಿ ರೈಲು ತಡೆದು ಪ್ರತಿಭಟನೆ ಮಾಡುವುದಾಗಿ ರೈಲ್ವೆ ನೇಮಕಾತಿ ಹೋರಾಟ ಸಮಿತಿಯವರು ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಹೋರಾಟ ಸಮಿತಿಯ ದಾನೇಗೌಡ್ರ ಟಿ.ಹೆಚ್. ಮಂಜುನಾಥ, ಸಂತೋಷ್ರಾಜ್, ಪಿ. ಮಂಜುನಾಥ್, ವಿ. ಮಂಜುನಾಥ್, ಹೆಚ್. ನಾಗರಾಜ್, ಬಿ.ಟಿ. ರಘು, ರಂಗನಾಥ್ ಮತ್ತಿರರಿದ್ದರು.

ಗಣೇಶ ಚತುರ್ಥಿ : ಬೆಂಗಳೂರು-ಕಲಬುರಗಿ ನಡುವೆ ವಿಶೇಷ ರೈಲುಗಣೇಶ ಚತುರ್ಥಿ : ಬೆಂಗಳೂರು-ಕಲಬುರಗಿ ನಡುವೆ ವಿಶೇಷ ರೈಲು

ರೈಲ್ವೆ ಇಲಾಖೆಯಲ್ಲಿನ ವಾಟರ್ ಮ್ಯಾನ್, ಟ್ರ್ಯಾಕ್ ಮ್ಯಾನ್, ಫಿಟ್ಟರ್, ಪಾಯಿಂಟ್ ಮ್ಯಾನ್, ಧ್ವಜ ಬೀಸುವಿಕೆ, ಕ್ಲಾಪ್ ಮ್ಯಾನ್, ಗೇಟ್ ಹಾಕುವ ಕೆಲಸ, ಆಪರೇಟಿಂಗ್, ಕಮರ್ಷಿಯಲ್ ಪೋರ್ಟರ್, ಎಲೆಕ್ಟ್ರಿಕಲ್ ಸಿಗ್ನಲ್ ಮುಂತಾದವುಗಳನ್ನು 'ಡಿ' ದರ್ಜೆ ಹುದ್ದೆಗಳಿಗೆ ಸ್ಥಳೀಯ ಕನ್ನಡಿಗ ಅಭ್ಯರ್ಥಿಗಳಿಗೆ ಮೀಸಲಾತಿ ನೀಡಬೇಕೆಂದು ಆಗ್ರಹಿಸಿದರು.

Kannada activist plant to do Rail Roko: demand job reservation

ತಮಿಳುನಾಡು, ಆಂಧ್ರಪ್ರದೇಶ, ಕೇರಳ ಮುಂತಾದ ರಾಜ್ಯಗಳಲ್ಲಿ ಸ್ಥಳೀಯರಿಗೆ ರೈಲ್ವೆ ಇಲಾಖೆಯಲ್ಲಿ ಶೇ. 80 ರಷ್ಟು ಮೀಸಲಾತಿಯನ್ನು ನೀಡುತ್ತಿದ್ದು, ಈ ನಿಯಮವನ್ನು ಕರ್ನಾಟಕದಲ್ಲಿಯೂ ಅನುಸರಿಸಬೇಕೆಂದು ಆಗ್ರಹಪಡಿಸಿದರು ರೈಲ್ವೆ ನೇಮಕಾತಿ ಕೋಶದ ಮೂಲಕ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಬೇಕು, ಕೇಂದ್ರೀಕೃತ ಪರೀಕ್ಷಾ ವ್ಯವಸ್ಥೆಯಿಂದ ಕನ್ನಡಿಗರಿಗೆ ಅನ್ಯಾಯವಾಗುತ್ತಿದ್ದು, ಈ ವ್ಯವಸ್ಥೆಯನ್ನು ರದ್ದುಪಡಿಸಿ, ಹುಬ್ಬಳ್ಳಿ ರೈಲ್ವೆ ನೇಮಕಾತಿ ಕೋಶ ಪರೀಕ್ಷೆ ನಡೆಸಬೇಕೆಂದು ಒತ್ತಾಯಿಸಿದರು.

ಕೇಂದ್ರೀಕೃತ ಪರೀಕ್ಷೆ ಇರುವುದರಿಂದ ರೈಲ್ವೆ ಇಲಾಖೆ ಹುಬ್ಬಳ್ಳಿಯ ನೈರುತ್ಯ ರೈಲ್ವೆ ವಿಭಾಗದ ಡಿ' ವೃಂದದ ಪರೀಕ್ಷೆಗಳಿಗೆ ಉತ್ತರ ಭಾರತದ ಯಾವುದೇ ಪ್ರದೇಶದಿಂದಲೂ ಅಭ್ಯರ್ಥಿಗಳು ಪರೀಕ್ಷೆ ಬರೆಯಬಹುದಾಗಿದೆ. 2017-18ನೇ ಸಾಲಿನಲ್ಲಿ ನಡೆದ ಪರೀಕ್ಷೆಯಲ್ಲಿ ಶೇ. 80 ರಷ್ಟು ಜನರು ಬಿಹಾರ ಮತ್ತು ಉತ್ತರ ಪ್ರದೇಶದವರೇ ಆಗಿದ್ದರು ಎಂದು ಹೇಳಿದರು.

English summary
A group of Kannada activist plan to block the railway tracks in Davanagere demanding reservation of 80% of jobs to Kannadigas in Group D posts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X