ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

JEE-2021 ಮುಖ್ಯ ಪರೀಕ್ಷೆಯಲ್ಲಿ 249ನೇ ಶ್ರೇಯಾಂಕ ಪಡೆದ ದಾವಣಗೆರೆಯ ಅನುಷಾ ಮಾಗನೂರು

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಅಕ್ಟೋಬರ್ 9: ದಾವಣಗೆರೆಯ ಅನುಷಾ. ಎಸ್. ಮಾಗನೂರು ಮಾಡಿರುವ ಸಾಧನೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ ಸಿರಿಗೆರೆಯ ಎಂಬಿಆರ್ ಕಾಲೇಜಿನ 2019- 2021ರ ಬ್ಯಾಚ್‌ನ ಪ್ರತಿಭಾನ್ವಿತ ವಿದ್ಯಾರ್ಥಿನಿ ಅನುಷಾ. ಎಸ್. ಮಾಗನೂರು JEE-2021 ಮುಖ್ಯ ಪರೀಕ್ಷೆಯಲ್ಲಿ BE- planning Engineering ವಿಭಾಗದಲ್ಲಿ ಭಾರತದಲ್ಲಿಯೇ 249ನೇ ಶ್ರೇಯಾಂಕ ಪಡೆದ ಕೀರ್ತಿಗೆ ಭಾಜನರಾಗಿದ್ದಾರೆ.

ಅಷ್ಟೇ ಅಲ್ಲದೇ, Architecture ವಿಭಾಗದಲ್ಲಿ ದೇಶಕ್ಕೆ 1017ನೇ ಸ್ಥಾನ ಪಡೆಯುವ ಮೂಲಕ ಎಲ್ಲರ ಗಮನ ಸೆಳೆಯುವಂಥ ಸಾಧನೆ ಮಾಡಿದ್ದು, ಈ ಮೂಲಕ ದೇಶದ ಪ್ರತಿಷ್ಠಿತ IIT ಮತ್ತು NIT ಗಳಲ್ಲಿ ಮುಂದಿನ ವಿದ್ಯಾಭ್ಯಾಸ ಮಾಡಲು ಸೀಟು ಪಡೆಯುವ ಅರ್ಹತೆ ಗಿಟ್ಟಿಸಿಕೊಂಡಿದ್ದಾಳೆ.

ಅನುಷಾ ಹುಟ್ಟಿದ್ದು, ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕು ನೇಶ್ವಿ ಗ್ರಾಮದಲ್ಲಿ. ಆದರೆ ಬೆಳೆದಿದ್ದು, ಓದಿದ್ದು ಚಿತ್ರದುರ್ಗ ಜಿಲ್ಲೆಯ ಸಿರಿಗೆರೆಯಲ್ಲಿ. ತಂದೆ ಸಂಜೀವ ಮಾಗನೂರು, ತಾಯಿ ಕುಸುಮ, ಅಕ್ಕ ಗೀತಾ ಮಾಗನೂರು. ಚಿತ್ರದುರ್ಗ ಜಿಲ್ಲೆಯ ಸಿರಿಗೆರೆಯ ತರಳಬಾಳು ಮುದ್ರಣಾಲಯದಲ್ಲಿ 1975- 2015ರವರೆಗೆ ತರಳಬಾಳು ಮುದ್ರಣಾಲಯದಲ್ಲಿ ಕೆಲಸ ಮಾಡುತ್ತಿದ್ದ ದಿವಂಗತ ಹೇಮಣ್ಣ ಬತ್ತಿಕೊಪ್ಪ ಮತ್ತು ಶಕುಂತಲಾ ಹೇಮಣ್ಣವರ ಮನೆಯ
ಮಗಳು.

Davanagere: JEE Main 2021: Anusha Maganur Got 249th Rank In BE- Planning Engineering

ಉತ್ತಮ ಶಿಕ್ಷಣ ಕೇವಲ ನಗರಗಳಲ್ಲಿ ಮಾತ್ರ ಸಿಗುತ್ತದೆ ಎಂಬ ಮನೋಭಾವ ಇರುವವರಿಗೆ ಗ್ರಾಮೀಣ ಭಾಗದಲ್ಲಿ ಸಹ ಉತ್ತಮ ಶಿಕ್ಷಣ ಸಿಗುತ್ತದೆ ಎಂಬುದಕ್ಕೆ ಈಕೆ ಈಗ ಮಾಡಿರುವ ಸಾಧನೆಯೇ ಸಾಕ್ಷಿ. ಸಮಾಜಮುಖಿ ಕೆಲಸಗಳಿಗೆ ಹೆಸರಾದ, ಜಾತ್ಯತೀತ ಮಠವೆಂದೇ ಖ್ಯಾತಿ ಪಡೆದ, ಸರ್ವ ಜನಾಂಗದವರಿಗೆ ಸಮಾನ ಶಿಕ್ಷಣ, ಅನ್ನ, ದಾಸೋಹ ಮಾಡುತ್ತಿರುವ ಸಿರಿಗೆರೆ ಮಠದ ಹಾಸ್ಟೆಲ್‌ನಲ್ಲಿ ಇದ್ದುಕೊಂಡು ಕಷ್ಟಪಟ್ಟ ಓದಿ ಈ ಸಾಧನೆ ಮಾಡಿರುವ ಅನುಷಾ ಕರ್ನಾಟಕ CET- 2021ರಲ್ಲಿ BE ವಿಭಾಗದ architecture ನಲ್ಲಿ 374ನೇ ಸ್ಥಾನ ಪಡೆದಿದ್ದಾರೆ.

ಸಿರಿಗೆರೆ ಮಠದಲ್ಲಿ ಪ್ರತಿವರ್ಷವೂ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಾರೆ. ಇಲ್ಲಿ ಶಿಕ್ಷಣ ಜೊತೆಗೆ ಉತ್ತಮ ಸಂಸ್ಕಾರ, ಮಾನವೀಯ ಗುಣಗಳನ್ನು ಅಳವಡಿಸಿಕೊಳ್ಳಲು, ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವೆಂದು ಅನುಷಾ ಹುಟ್ಟಿದ 2ನೇ ವರ್ಷಕ್ಕೆ ಸಿರಿಗೆರೆಗೆ ಕರೆತಂದು ಹೇಮಣ್ಣ ಬತ್ತಿಕೊಪ್ಪ ಮತ್ತು ಶಕುಂತಲಾ ಹೇಮಣ್ಣ ಮನೆಯಲ್ಲಿ ಬೆಳೆಸಿದರು. ಅನುಷಾರವರು ತಮ್ಮ ದೊಡ್ಡಮ್ಮರ ಮನೆಯಿಂದಲೇ ಶಿಶುವಿಹಾರ ಮತ್ತು ಪ್ರಾಥಮಿಕ ಶಿಕ್ಷಣವನ್ನು ಸಿರಿಗೆರೆಯಲ್ಲೇ ಪಡೆದರು. ಆ ನಂತರ ಹೈಸ್ಕೂಲ್ ಶಿಕ್ಷಣವನ್ನು ಬೆಂಗಳೂರಿನಲ್ಲಿ ಪಡೆದರು.

Davanagere: JEE Main 2021: Anusha Maganur Got 249th Rank In BE- Planning Engineering

ಬಳಿಕ ಮತ್ತೆ ಶುಂಕುತಲಾ ಹಾಗೂ ಈಕೆ ಅಣ್ಣ ಪ್ರದೀಪ್ ಸಿರಿಗೆರೆ, ಅತ್ತಿಗೆ ಮಮತಾ, ಪ್ರಿಯಾ ಅಪೇಕ್ಷೆಯಂತೆ ಸಿರಿಗೆರೆಯಲ್ಲಿ ವಿದ್ಯಾಭ್ಯಾಸ ಮುಂದುವರಿಸಲು ಅನುಷಾ ನಿರ್ಧರಿಸುತ್ತಾರೆ. ಎಂಬಿಆರ್ ಪಿಯು ಕಾಲೇಜಿನಿಂದ ನಡೆಸುವ "ಪ್ರತಿಭಾ ಪರೀಕ್ಷೆ' ಬರೆದು ಅತಿಹೆಚ್ಚು ಅಂಕಗಳನ್ನು ಗಳಿಸಿ ಉಚಿತ ಸೀಟು ಪಡೆಯುವ ಮೂಲಕ ಅನುಷಾ ತಾನೆಷ್ಟು ಪ್ರತಿಭಾವಂತೆ ಎಂಬುದನ್ನು ನಿರೂಪಿಸುತ್ತಾರೆ.

ಅಷ್ಟೇ ಪರಿಶ್ರಮ, ಆಸಕ್ತಿಯಿಂದ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಅತಿಹೆಚ್ಚು ಅಂಕ ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದರು. ನಂತರ ಮುಂದಿನ ವಿದ್ಯಾಭ್ಯಾಸಕ್ಕೆ ನ್ಯಾಷನಲ್ ಎಕ್ಸಾಂ ತೆಗೆದುಕೊಂಡು ಕೊರೊನಾ ಸಂದರ್ಭದಲ್ಲೂ ಭಯಪಡದೇ ಉತ್ತಮ ಅಂಕ ಪಡೆದು, ಒಳ್ಳೆಯ ಶ್ರೇಯಾಂಕ ಗಳಿಸಿ 'ತರಳಬಾಳು ವಿದ್ಯಾಸಂಸ್ಥೆ" ಮತ್ತು ತಂದೆ ತಾಯಿ ಹಾಗೂ ಸಾಕಿ ಬೆಳೆಸಿ, ಪೋಷಣೆ ಮಾಡಿದ 'ಹೇಮಣ್ಣ ಬತ್ತಿಕೊಪ್ಪ ಮತ್ತು ಶಕುಂತಲಾ ಹೇಮಣ್ಣ'ರವರ ಕುಟುಂಬಕ್ಕೆ ಕೀರ್ತಿ ತಂದಿದ್ದಾರೆ.

ಓದುವುದಿದ್ದರೆ ಎಲ್ಲಿದ್ದರೂ ಓದುತ್ತಾರೆ. ಕಷ್ಟಪಟ್ಟ ವ್ಯಾಸಂಗ ಮಾಡಿದರೆ ಸಾಧನೆ ಮಾಡುವುದು ಕಷ್ಟವೇನಲ್ಲ. ನಗರ ಪ್ರದೇಶಗಳಲ್ಲಿ ಓದಿದರೆ ಮಾತ್ರ ಉನ್ನತ ಶ್ರೇಣಿ ಪಡೆಯಬಹುದು, ಹಳ್ಳಿಗಳಲ್ಲಿ ಸಾಧ್ಯವಿಲ್ಲ ಎಂಬ ಮನೋಭಾವನೆ ಹೆಚ್ಚಾಗುತ್ತಿದೆ. ಆದರೆ ಈಗ ಅನುಷಾ ಸಾಧನೆ ಮಾಡಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಲಿಂಗೈಕ್ಯ ಗುರುಗಳಾದ ತರಳಬಾಳು ಜಗದ್ಗುರು ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯ ಕನಸು ಗ್ರಾಮೀಣ ಭಾಗದ ಮಕ್ಕಳು ಓದೀ ದೇಶಕ್ಕೆ ಉನ್ನತ ಶ್ರೇಣಿ ಗಳಿಸಿ ಎಲ್ಲಾ ಕ್ಷೇತ್ರಗಳಲ್ಲೂ ಹೆಸರು ತರಬೇಕು ಎಂಬುದು. ಅದರಂತೆ ಅನುಷಾ ಮಾಗನೂರು ಚೆನ್ನಾಗಿ ವಿಧ್ಯಾಭ್ಯಾಸ ಮಾಡಿ, ಇಡೀ ತರಳಬಾಳು ಸಂಸ್ಥೆಗೆ ಹಾಗೂ ಕುಟುಂಬಕ್ಕೆ ಕೀರ್ತಿ ತಂದು. ಇತರರಿಗೆ ಸ್ಪೂರ್ತಿಯಾಗಿದ್ದಾರೆ.

"ಓದುವ ಛಲ ಗುರಿ ಕನಸುಗಳು ಇದ್ದರೆ ಯಾವ ಸಮಸ್ಯೆಗಳು ಅಡ್ಡ ಬರುವುದಿಲ್ಲ, ಕೇವಲ ಐಷಾರಾಮಿ ವಿದ್ಯಾಭ್ಯಾಸದಿಂದ ಗುರಿ, ಕನಸುಗಳನ್ನು ನನಸಾಗಿಸಲು ಸಾಧ್ಯವಿಲ್ಲ. ಬಡತನವಿದ್ದರೂ ಹಳ್ಳಿಗಳಲ್ಲಿ ಓದಿ ದೇಶವೇ ತಿರುಗಿ ನೋಡುವಂತೆ ಮಾಡಬಹುದು ಎಂಬುದಕ್ಕೆ ಅನುಷಾ ಸಾಕ್ಷಿ. ತರಳಬಾಳು ಜಗದ್ಗುರು ಸಂಸ್ಥೆ ಹಾಗೂ ನಮ್ಮ ಕರ್ನಾಟಕ ರಾಜ್ಯದ ಹೆಮ್ಮೆಯಾಗಿದೆ. ಇದು ನಮಗೆ ಖುಷಿ ತಂದಿದೆ," ಅಂತಾರೆ ಸಹೋದರ ಪ್ರದೀಪ್ ಮಾಗನೂರು.

English summary
JEE Main 2021: STJ Education Institute Student Anusha Maganur Got 249th Rank In BE- Planning Engineering.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X