• search
  • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೇರಳದ ಕಣ್ಮಣಿ ದಾವಣಗೆರೆ ಮೂಲದ ಯತೀಶ್ ಚಂದ್ರ, ಐಪಿಎಸ್

By Mahesh
|

ಬೆಂಗಳೂರು, ಆಗಸ್ಟ್ 22: 'ಕೇರಳ ಸಿಂಗಂ' ಎಂದು ಕರೆಸಿಕೊಳ್ಳುವ ದಾವಣಗೆರೆ ಮೂಲದ ಐಪಿಎಸ್ ಅಧಿಕಾರಿ, ತ್ರಿಶೂರ್ ಆಯುಕ್ತ ಜಿ.ಎಚ್ ಯತೀಶ್ ಚಂದ್ರ ಅವರು ಕೇರಳಿಗರ ಕಣ್ಮಣಿಯಾಗಿದ್ದಾರೆ.

ಟೆಕ್ಕಿಯಾಗಿ ಲಕ್ಷಾಂತರ ಸಂಪಾದಿಸುವ ಉದ್ಯೋಗ ತೊರೆದು, ಜನಸೇವೆ ಮಾಡಲು ಸಿವಿಎಲ್ ಸರ್ವೀಸ್ ಸೇರಿ, ಈಗ ಕೇರಳದಲ್ಲಿ ಸಮರ್ಥ ಐಪಿಎಸ್ ಅಧಿಕಾರಿ ಎನಿಸಿಕೊಂಡಿದ್ದಾರೆ. ಕೇರಳದ ಪ್ರವಾಹ ಪರಿಸ್ಥಿತಿಯಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸಿದ ರೀತಿಗೆ ಶ್ಲಾಘನೆ ವ್ಯಕ್ತವಾಗಿದೆ.

ಕೇರಳ ನೆರೆ ಸಂತ್ರಸ್ತರಿಗೆ ನೀವು ಹೇಗೆ ಸಹಾಯ ಮಾಡಬಹುದು

ಇತ್ತೀಚೆಗೆ ಜನಪ್ರಿಯಗೊಂಡಿದ್ದ ಫಿಟ್ನೆಸ್ ಚಾಲೆಂಜ್ ನಲ್ಲಿ ಪ್ರಧಾನಿ ಮೋದಿ ಅವರಿಂದ ಸವಾಲು ಸ್ವೀಕರಿಸಿ, ವರ್ಕೌಟ್ ಮಾಡುವ ವಿಡಿಯೋ ಹಾಕಿದ್ದು ಸಾಮಾಜಿಕ ಜಾಲ ತಾಣಗಳಲ್ಲಿ ಜನಪ್ರಿಯಗೊಂಡಿತ್ತು.

ನವಜಾತಶಿಶು ನೋಡಿ ಸಂತಸಪಟ್ಟ ನೌಕಾಪಡೆ ಅಧಿಕಾರಿಗಳು

2015ರಲ್ಲಿ ಪ್ರಧಾನಿ ಮೋದಿ ಅವರು ಕೇರಳಕ್ಕೆ ಭೇಟಿ ನೀಡುವಾಗ ಎಡ ಪಂಥೀಯರ ವಿರೋಧ, ಪ್ರತಿಭಟನೆಗಳನ್ನು ಹತ್ತಿಕ್ಕಿ, ಪ್ರಧಾನಿಯವರ ಪ್ರವಾಸ ಸುಸೂತ್ರವಾಗಿ ನಡೆಯುವಂತೆ ನೋಡಿಕೊಂಡಿದ್ದರು. ಇದರಿಂದ ಎಲ್ ಡಿಎಫ್ ರಾಜಕಾರಣಿಗಳ ವಿರೋಧ ಕಟ್ಟಿಕೊಳ್ಳಬೇಕಾಯಿತು. ಆದರೆ, ಸಾಮಾಜಿಕ ಜಾಲ ತಾಣಗಳಲ್ಲಿ ಯತೀಶ್ ಚಂದ್ರ ಪರ ಅಭಿಯಾನ ನಡೆಯಿತು. ಇಂದು ಕೇರಳದ ಯುವ ಪೀಳಿಗೆಗೆ ಮಾದರಿ ಅಧಿಕಾರಿ ಎನಿಸಿಕೊಂಡಿದ್ದಾರೆ.

ಮಹಿಳಾ ಅಧಿಕಾರಿ ಡಿ ರೂಪಾ ಅವರು ಸ್ಫೂರ್ತಿ

ಮಹಿಳಾ ಅಧಿಕಾರಿ ಡಿ ರೂಪಾ ಅವರು ಸ್ಫೂರ್ತಿ

ದಾವಣಗೆರೆ ಮೂಲದ ಮಹಿಳಾ ಅಧಿಕಾರಿ ಡಿ ರೂಪಾ ಅವರನ್ನು ಸ್ಫೂರ್ತಿಯಾಗಿ ಪಡೆದು ಐಪಿಎಸ್ ಆಗುವ ಕನಸು ಕಂಡಿದ್ದರು. ಅವರು ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯಲ್ಲಿ ಟೆಕ್ಸ್ ಟೈಲ್ ಇಂಜಿನಿಯರಿಂಗ್ ಪದವಿ ಪಡೆದುಕೊಂಡರು.

ಕಾಂಗ್ನಿಜೆಂಟ್ ಸಂಸ್ಥೆಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೂಡಾ ಉದ್ಯೋಗ ಲಭಿಸಿತ್ತು. ಆದರೆ, ಸಿವಿಎಲ್ ಸರ್ವೀಸ್ ಪರೀಕ್ಷೆಗೆ ತಯಾರಿ ನಡೆಸುತ್ತಲೇ ಇದ್ದರು. 2010ರ ಯುಪಿಎಸ್ ಸಿ ಪರೀಕ್ಷೆಯಲ್ಲಿ ಭಾರತದಲ್ಲಿ 211 ಶ್ರೇಯಾಂಕದೊಡನೆ ಉತ್ತೀರ್ಣರಾದರು. ಐಪಿಎಸ್ ಸೇರಿ, ಕೇರಳಲ್ಲಿ ಉನ್ನತ ಹುದ್ದೆಗೇರಿದರು.

ಪುನರ್ವಸತಿ ಕೇಂದ್ರ, ಸ್ವಚ್ಛತೆಗೆ ಆದ್ಯತೆ ನೀಡಿರುವ ತ್ರಿಶೂರ್

ಪುನರ್ವಸತಿ ಕೇಂದ್ರ, ಸ್ವಚ್ಛತೆಗೆ ಆದ್ಯತೆ ನೀಡಿರುವ ತ್ರಿಶೂರ್

ಪ್ರವಾಹ ಪರಿಸ್ಥಿತಿ ತಿಳಿಗೊಂಡಿದ್ದು, ಮಳೆ ಈಗ ಕಡಿಮೆಯಾಗಿದೆ. ಪುನರ್ವಸತಿ ಕೇಂದ್ರ, ಸ್ವಚ್ಛತೆಗೆ ಆದ್ಯತೆ ನೀಡಿರುವ ತ್ರಿಶೂರ್, ಕಾರ್ಯಾಚರಣೆಯಲ್ಲಿ ತೊಡಗಿರುವ ಯತೀಶ್ ಚಂದ್ರ

ತ್ರಿಶೂರ್ ನಲ್ಲಿನ ಪರಿಸ್ಥಿತಿಯ ಚಿತ್ರಣ ನೀಡಿದ ಯತೀಶ್

ಸಾಮಾಜಿಕ ಜಾಲ ತಾಣಗಳಲ್ಲಿ ನಿರಂತರವಾಗಿ ಸಾರ್ವಜನಿಕರು, ಸಂತ್ರಸ್ತರೊಡನೆ ಸಂಪರ್ಕದಲ್ಲಿದ್ದು, ಪರಿಹಾರ ಒದಗಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆ ಸಂಪೂರ್ಣ

ಸಂತ್ರಸ್ತರಿಗೆ ನೆರವಾದ ಎಲ್ಲಾ ಸಿಬ್ಬಂದಿ, ವಿವಿಧ ಇಲಾಖೆಗಳಿಗೆ ಧನ್ಯವಾದ ಅರ್ಪಿಸಿರುವ ಯತೀಶ್.

ಹೆಲಿಕಾಪ್ಟರ್ ಮೂಲಕ ಕಾರ್ಯಾಚರಣೆ

ಹೆಲಿಕಾಪ್ಟರ್ ಮೂಲಕ ಕಾರ್ಯಾಚರಣೆ ನಡೆಸಿ, ಖುದ್ದು ಪ್ರತಿ ಹಂತದಲ್ಲೂ ಭಾಗಿಯಾಗಿದ್ದ ಯತೀಶ್ ಅವರು ಕೇರಳ ಪೊಲೀಸರು, ವಿಪತ್ತು ನಿರ್ವಹಣಾ ದಳದ ನೆರವನ್ನು ಸ್ಮರಿಸಿದ್ದಾರೆ. ಈಗ ಸ್ವಚ್ಛತೆಗೆ ಆದ್ಯತೆ ಎಂದಿದ್ದಾರೆ. ಸಂಕಷ್ಟದಲ್ಲಿ ಸಿಲುಕಿದ್ದವರು, ಗೂಗಲ್ ಮ್ಯಾಪ್ ಬಳಸಿ ತಮ್ಮ ಇರುವಿಕೆಯನ್ನು ಸೂಚಿಸಿ, ನೆರವು ಪಡೆದುಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kerala Floods 2018 : IPS Yathish Chandra(32) from Devangere, Karnataka, has led Rescue operations in Thrissur thanks all the police and officials in the operation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more