ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

"ಬಿಜೆಪಿ ಅಧಿಕಾರಕ್ಕೆ ಬಂದರೂ ಬಹಳ‌ ದಿನ‌ ಉಳಿಯಲ್ಲ, ಅತೃಪ್ತರು ಉಳಿಯಲು ಬಿಡಲ್ಲ"

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಜುಲೈ 20: "ರಾಜೀನಾಮೆ ನೀಡಿ ಮುಂಬೈಗೆ ಹೋದವರು ಸಾಮೂಹಿಕವಾಗಿ ಹೋಗಿಲ್ಲ, ಬಿಜೆಪಿಯವರೇ ಅವರನ್ನು ಕರೆದುಕೊಂಡು ಹೋಗಿದ್ದಾರೆ" ಎಂದು ದಾವಣಗೆರೆಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ‌ ಶಾಸಕ ಶಾಮನೂರು ಶಿವಶಂಕರಪ್ಪ ಕಿಡಿಕಾರಿದರು.

 "ನಮ್ಮ ಪಕ್ಷದಲ್ಲಿ ಸಿಗೋ ಮರ್ಯಾದೆ ಬೇರೆ ಕಡೆ ಸಿಗುತ್ತಾ?" ಅತೃಪ್ತರಿಗೆ ಅನಿಲ್ ಲಾಡ್ ಪ್ರಶ್ನೆ

ದಾವಣಗೆರೆಯಲ್ಲಿನ ಸ್ವಗೃಹದಲ್ಲಿ ಮಾತನಾಡಿದ ಅವರು, " ಸರ್ಕಾರ ಉರುಳೋದು, ಉಳಿಯೋದು ಸೋಮವಾರ ಅಂತಿಮವಾಗಲಿದೆ. ಅತೃಪ್ತರು ವಾಪಸ್ಸು ಬಂದರೆ ಸರ್ಕಾರ ಉಳಿಯುತ್ತೆ, ಇಲ್ಲವೇ ಉಳಿಯಲ್ಲ. ಸಮ್ಮಿಶ್ರ ಸರ್ಕಾರದ ಶಾಸಕರು ದುಡ್ಡು ತೆಗೆದುಕೊಂಡು‌ ಸಮ್ಮಿಶ್ರ ಸರ್ಕಾರ ಉರುಳಿಸಲು ಹೋಟೆಲ್ ನಲ್ಲಿ ಕೂತಿದ್ದಾರೆ. ಬಿಜೆಪಿ ಅಧಿಕಾರಕ್ಕೆ‌ ಬಂದರೆ 16 ಜನರಿಗೂ ಸಚಿವ‌ ಸ್ಥಾನ ನೀಡಲು ಸಾಧ್ಯವಾ? ಬಿಜೆಪಿ ಪಕ್ಷದಲ್ಲಿ ಇರುವವರು ಎಲ್ಲಿಗೆ ಹೋಗಬೇಕು? ಈಗ ನಮಗೆ ಆದ ಸ್ಥಿತಿಯೇ ಮುಂದೆ ಬಿಜೆಪಿಗೂ ಆಗುತ್ತೆ. ಬಿಜೆಪಿ ಸರ್ಕಾರ‌ ಅಧಿಕಾರಕ್ಕೆ‌ ಬಂದರೆ ಅದು ಕೂಡ ಬಹಳ ದಿ‌ನ ಉಳಿಯಲ್ಲ" ಎಂದು ವ್ಯಂಗ್ಯವಾಡಿದರು.

If BJP will come to power it wont stay longer said shamanuru in davanagere

"ಅತೃಪ್ತರು ವಾಪಸ್ಸು ಬಂದರೆ ಸಿಎಂ ಬದಲಾವಣೆ ಆಗಲ್ಲ. ಕುಮಾರಸ್ವಾಮಿಯೇ ಸಿಎಂ ಆಗಿರ್ತಾರೆ. ಆದರೆ ಬಿಜೆಪಿಯವರ ಕುದುರೆ ವ್ಯಾಪಾರ ಜೋರಾಗಿದೆ. ಅಪ್ಪಿ ತಪ್ಪಿ ಬಿಜೆಪಿ ಅಧಿಕಾರಕ್ಕೆ ಬಂದರೂ ಬಹಳ‌ ದಿನ‌ ಉಳಿಯಲ್ಲ, ಅತೃಪ್ತರು ಉಳಿಯಲು ಬಿಡಲ್ಲ" ಎಂದರು.

English summary
"Those who resigned and went to Mumbai were taken by the BJP" said Shamanoor Sivasankarappa, a senior Congress leader and legislator in Davanagere.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X